ETV Bharat / city

ರೈತರಿಗೆ ತಲಾ 5 ಸಾವಿರ ರೂಪಾಯಿ: ಕ್ಷೌರಿಕರಿಗೆ, ಆಟೋ ಚಾಲಕರಿಗೆ ಷರತ್ತುಗಳಿಲ್ಲದೆ ಹಣ - ರಾಜ್ಯದ ಜನರಿಗೆ ಕೋವಿಡ್​ ಪರಿಹಾರ

ರಾಜ್ಯದ ಜನರಿಗೆ ಕೋವಿಡ್​ ಪರಿಹಾರವಾಗಿ ಪರಿಹಾರ ನೀಡುವ ಕುರಿತು ಇಂದು ಸರ್ಕಾರ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪರಿಹಾರ ಹಂಚಿಕೆ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಎಲ್ಲ ರೈತರಿಗೆ ತಲಾ 5 ಸಾವಿರ ರೂಪಾಯಿ ಮತ್ತು ಕ್ಷೌರಿಕರಿಗೆ ಮತ್ತು ಆಟೋ ಚಾಲಕರಿಗೆ ಹಣ ಪಡೆಯಲು ವಿಧಿಸಿದ್ದ ಷರತ್ತುಗಳನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.

ಮಾಧುಸ್ವಾಮಿ
ಮಾಧುಸ್ವಾಮಿ
author img

By

Published : May 28, 2020, 6:09 PM IST

ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಕುರಿತಾದ ಮಾಹಿತಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ನೀಡಿದರು.

ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ, ಗುಜರಾತ್​, ಮಧ್ಯ ಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನದಿಂದ ಕರ್ನಾಟಕಕ್ಕೆ​ ಬರುವವರಿಗೆ ಇನ್ನೂ 15 ದಿನಗಳ ಕಾಲ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ರಾಜ್ಯದ ಜನರಿಗೆ ಕೋವಿಡ್​ ಪರಿಹಾರವಾಗಿ ಇತ್ತೀಚೆಗೆ ಘೋಷಿಸಿದ್ದ ಅನುದಾನ ಹಂಚಿಕೆ ಕುರಿತು ಸಚಿವರು ಮಾಹಿತಿ ನೀಡಿದರು. ಈವರೆಗೆ ಯಾರಿಗೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲವೆಂಬ ಆರೋಪಗಳು ಕೇಳಿಬಂದ ಹಿನ್ನೆಲೆ ಸಚಿವರು ಪ್ರತಿಕ್ರಿಯಿಸಿ, ಈ ಪರಿಹಾರ ಪಡೆಯಲು ಹೇರಿದ್ದ ನಿಯಮಗಳನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಚಿವ ಮಾಧುಸ್ವಾಮಿ ಈ ವೇಳೆ ತಿಳಿಸಿದ ಕೆಲ ಮುಖ್ಯಾಂಶಗಳು ಇಂತಿವೆ...

  • ಎಲ್ಲ ರೈತರಿಗೆ 5 ಸಾವಿರ ರೂಪಾಯಿ ಪರಿಹಾರ
  • ಸಲೂನ್​, ಆಟೋ ಚಾಲಕರಿಗೆ ಪರಿಹಾರ ನೀಡುವುದಕ್ಕೆ ಹಾಕಿದ್ದ ಷರತ್ತುಗಳು ರದ್ದು

ಪಿಎಸ್​ಐ ನೇಮಕಾತಿಗೆ ವಯೋಮಿತಿ ಹೆಚ್ಚಳ

  • ಸಾಮಾನ್ಯ ವರ್ಗಕ್ಕೆ 28 ರಿಂದ 30 ವರ್ಷ
  • ಎಸ್​ಸಿ/ಎಸ್​ಟಿಗೆ 30 ರಿಂದ 32 ವರ್ಷ ವಯೋಮಿತಿ ನಿಗದಿ
  • ಮುಂದಿನ ಒಂದು ಬಾರಿಯ ನೇಮಕಾತಿಗೆ ಮಾತ್ರ ಈ ಅವಕಾಶ

ಔಷಧಿ ಉಗ್ರಾಣ

  • ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಔಷಧಿ ಉಗ್ರಾಣ
  • ಔಷಧಿ ಉಗ್ರಾಣ ನಿರ್ಮಾಣಕ್ಕೆ 18 ಕೋಟಿ ರೂಪಾಯಿ ಅನುದಾನ
  • ಕಾರ್ಮಿಕರ ಹೆಚ್ಚುವರಿ ಕೆಲಸದ ಅವಧಿ ಆದೇಶ ವಾಪಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.