ETV Bharat / city

ಬಿಬಿಎಂಪಿ ಕಸ ಸಂಗ್ರಹ ಮಾಸಿಕ ಶುಲ್ಕ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಕಸ ಸಂಗ್ರಹದ ಮಾಸಿಕ ಶುಲ್ಕ ಜಾರಿ ಮಾಡುತ್ತಿರುವುದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದು, ನಿನ್ನೆ ಬೆಂಗಳೂರಿನ ಮೌರ್ಯ ಸರ್ಕಲ್‌ ನಲ್ಲಿ ಪ್ರತಿಭಟನೆ ನಡೆಸಿದ ಕೈ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Garbage disposal fee; congress protest in bengaluru
ಬಿಬಿಎಂಪಿ ಕಸ ಸಂಗ್ರಹ ಮಾಸಿಕ ಶುಲ್ಕ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
author img

By

Published : Dec 17, 2020, 4:27 AM IST

ಬೆಂಗಳೂರು: ಬಿಬಿಎಂಪಿ ಜಾರಿಗೆ ತರುತ್ತಿರುವ ಕಸ ಸಂಗ್ರಹದ ಮಾಸಿಕ ಶುಲ್ಕ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ನಗರದ ಮೌರ್ಯ ಸರ್ಕಲ್‌ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕರಾದ ರಾಮಲಿಂಗ ರೆಡ್ಡಿ, ಸೌಮ್ಯ ರೆಡ್ಡಿ, ರಿಜ್ವಾನ್ ಹರ್ಷದ್, ಎಂಎಲ್‌ಸಿ ಬಿಕೆ ಹರಿ ಪ್ರಸಾದ್‌, ನಾರಾಯಣ್ ಸ್ವಾಮಿ ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ನಗರದಲ್ಲಿ ಬಿಬಿಎಂಪಿ ಕಸ ಸಂಗ್ರಹಕ್ಕೆ ಶುಲ್ಕವನ್ನು ಹೆಚ್ಚಿಸಿದೆ.‌‌ ಇದೊಂದು ಅವೈಜ್ಞಾನಿಕ ಕ್ರಮ. ರಾಜ್ಯ ಸರ್ಕಾರದ ದಿವಾಳಿಯಾಗಿದೆ.‌ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಆಯೋಮಯವಾಗಿದೆ. ಇದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಯಡಿಯೂರಪ್ಪ. ರಾಜ್ಯ ಸರ್ಕಾರ ತನ್ನ ಪಾಲಿನ ಜಿಎಸ್‌ಟಿ ಹಣವನ್ನು ಕೇಂದ್ರದಿಂದ ತರುವಲ್ಲಿ ಸೋತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಸ ನಿರ್ವಹಣೆಯ ಶುಲ್ಕ ಫಿಕ್ಸ್‌; ಯಾವುದಕ್ಕೆ ಎಷ್ಟು ಶುಲ್ಕ?

ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಮಾತನಾಡಿ, ಕಸ ಸಂಗ್ರಹಕ್ಕೆ ಶುಲ್ಕ ಹೆಚ್ಚಾಗಿದೆ‌‌ ಇದರಿಂದ ಜನರಿಗೆ ತೊಂದರೆ ಆಗಲಿದೆ.‌ 200 ರೂ.ನಿಂದ 14,000 ಸಾವಿರ ತನಕ ಶುಲ್ಕ ಹೆಚ್ಚಿಸಿದ್ದಾರೆ. ಕಸ ಸಂಗ್ರಹಕ್ಕೆ ಇಷ್ಡು ದೊಡ್ಡ ಪ್ರಮಾಣದ ಶುಲ್ಕ ಬೆಂಗಳೂರಿನಲ್ಲಿ ಮಾತ್ರ. ದೇಶದ ಇತರೆ ನಗರಗಳಲ್ಲಿ ಈ ರೀತಿ ಶುಲ್ಕವಿಲ್ಲ ಎಂದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ನಡೆದ ಕೋಲಾಹಲದ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್‌, ಪರಿಷತ್ ಘಟನೆಯನ್ನು ರಾಜ್ಯದ ಜನರು ನೋಡಿದ್ದಾರೆ. ಘಟನೆ ತಪ್ಪು ಅಂತ ಅನೇಕರು ಹೇಳ್ತಾ ಇದ್ದಾರೆ. ನಾನು ಸಹ ಘಟನೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಆದ್ರೆ ಆಡಳಿತ ಪಕ್ಷದವರು ನಡೆದುಕೊಂಡ ರೀತಿ ಸರಿ ಇತ್ತಾ? ಅವರು ಏನ್ ಮಾಡಿದ್ರೂ ನಾವು ಹಾಗೇ ಮಾಡಿದ್ವಿ.‌ ನಮ್ಮನ್ನು ಕೊಲೆ ಮಾಡಲು ಬಂದವರನ್ನ ನೋಡ್ಕೊಂಡು ಸುಮ್ನೆ ಇರಬೇಕಾ. ಸುಮ್ನೆ ಇದ್ರೆ ನಮ್ಮ ಸಭಾಪತಿ ಸ್ಥಾನವನ್ನು ನಾವು ಕಳೆದು ಕೊಳ್ಳ ಬೇಕಾಗಿತ್ತು. ಹಾಗಾಗಿ ನಾನು ನಮ್ಮೆಲ್ಲರ ಎಂಎಲ್ಸಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕಿ ಸೌಮ್ಯ ರೆಡ್ಡಿ‌ ಮಾತನಾಡಿ, ಬಿಜೆಪಿಯವರಿಗೆ ನಿಜವಾಗಿಯೂ ಹಸುವಿನ‌ ಬಗ್ಗೆ ಕಾಳಜಿ ಇದ್ರೆ ಪ್ರಪಂಚದಲ್ಲಿ ಹೆಚ್ಚು ಬೀಫ್‌ ರಫ್ತು ಮಾಡ್ತಿರೋದು ಇವರೆ. ಚರ್ಮ ರಪ್ತು ‌ಮಾಡ್ತಿರೋದು‌ ಬಿಜೆಪಿಯವರೇ. ನೀವು ಲೆದರ್ ಚಪ್ಪಲಿ ಬಳಸ್ತಿಲ್ವಾ? ಕಾಳಜಿ ಇದ್ರೆ‌ ಇಡೀ ದೇಶದಲ್ಲಿ ಮಾಡಿ. ಎಲ್ಲೆಡೆ‌ ಬಿಜೆಪಿ ಮುಖಂಡರೇ ಇರೋದು. ಹಸು ಮಾತ್ರ ಯಾಕೆ ಎಲ್ಲಾ ಪ್ರಾಣಿಗಳ ಹತ್ಯೆ ನಿಷೇಧ ಮಾಡಿ. ಇದು ಎಲೆಕ್ಷನ್ ಗಿಮಿಕ್‌ ಅಷ್ಟೆ‌. ಅವರಿಗೆ ಹಸುಗಳ ಬಗ್ಗೆ ಕಾಳಜಿ ಇಲ್ಲ, ಪ್ರೀತಿ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.