ETV Bharat / city

'ಎಂದೋ ಮುಚ್ಚಿ ಹೋಗಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನ ಸುಬ್ರಮಣ್ಯ ಎಂಬ ಮುದುಕ ರೀ ಓಪನ್ ಮಾಡಿದ್ದಾನೆ'

author img

By

Published : Jun 15, 2022, 7:39 AM IST

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೂ ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧವಿದೆ. ಈ ಪತ್ರಿಕೆಯನ್ನ ಮುಂದುವರೆಸಿಕೊಂಡು ಹೋಗಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಹಳ ಶ್ರಮ ಪಟ್ಟಿದ್ದಾರೆ. ಈ ಕೇಸ್ ಈಗಾಗಲೇ ಮುಚ್ಚಿಹೋಗಿತ್ತು, ಸುಬ್ರಮಣ್ಯಂಸ್ವಾಮಿ ಎನ್ನುವ ಮುದುಕ ಮತ್ತೆ ಈ ಕೇಸ್ ಓಪನ್ ಮಾಡಿದ್ದು, ಇದು ಬಿಜೆಪಿ ಪಕ್ಷಕ್ಕೆ ಅನುಕೂಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

ದೊಡ್ಡಬಳ್ಳಾಪುರ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಂದೋ ಮುಚ್ಚಿ ಹೋಗಿದ್ದ ಪ್ರಕರಣವನ್ನ ಸುಬ್ರಮಣ್ಯ ಎಂಬ ಮುದುಕ ರೀ ಓಪನ್ ಮಾಡಿದ್ದಾನೆ. ಈ ಹಿಂದೆ ಇಂದಿರಾ ಗಾಂಧಿಯನ್ನ ಬಂಧಿಸಿ ಒಂದೇ ದಿನದಲ್ಲಿ ಸರ್ಕಾರ ಬಿದ್ದು ಹೋಯ್ತು. ಹಾಗೆಯೇ ಈ ಪ್ರಕರಣದಲ್ಲಿ ಹೆಚ್ಚು ಕಡಿಮೆಯಾದರೆ, ಸರ್ಕಾರವೇ ಮುಳುಗಿ ಹೋಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್​ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ನವ ಸಂಕಲ್ಪ ಶಿಬಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೂ ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧವಿದೆ. ಸ್ವಾತಂತ್ರ್ಯ ಹೋರಾಟಕ್ಕೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ದೊಡ್ಡ ಕೊಡುಗೆ ನೀಡಿದೆ. ಇಂತಹ ಪತ್ರಿಕೆಯನ್ನ ಮುಂದುವರೆಸಿಕೊಂಡು ಹೋಗಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಹಳ ಶ್ರಮ ಪಟ್ಟಿದ್ದಾರೆ. ಈ ಕೇಸ್ ಈಗಾಗಲೇ ಮುಚ್ಚಿಹೋಗಿತ್ತು, ಸುಬ್ರಮಣ್ಯಸ್ವಾಮಿ ಎನ್ನುವ ಮುದುಕ ಮತ್ತೆ ಈ ಕೇಸ್ ಓಪನ್ ಮಾಡಿದ್ದು, ಇದು ಬಿಜೆಪಿ ಪಕ್ಷಕ್ಕೆ ಅನುಕೂಲವಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

ಸುಧಾಕರ್ ಹೇಳಿಕೆಗೆ ತಿರುಗೇಟು: ಎತ್ತಿನಹೊಳೆ ಯೋಜನೆ ಬಗ್ಗೆ ಹೇಳಿ ಹೇಳಿ ವೀರಪ್ಪ ಮೊಯ್ಲಿ ಮನೆಗೆ ಹೋಗಿದ್ದಾರೆ. ಮತ್ತೆ ಎತ್ತಿನಹೊಳೆ ಯೋಜನೆ ಬಗ್ಗೆ ಹೇಳಿದ್ರೆ ಮತ್ತೆ ಮನೆಗೆ ಹೋಗ್ತಾರೆ ಎಂದು ಡಾ.ಕೆ.ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸುಧಾಕರ್ ಅಂಧ ಮನುಷ್ಯನಂತೆ ನಾಟಕ ಮಾಡ್ತಾನೆ, 12 ಸಾವಿರ ಕೋಟಿ ರೂ. ಕೆಲಸ ಆಗಿರೋದು ಅವನಿಗೂ ಗೊತ್ತಿದೆ, ಕೊರಟಗೆರೆ ಬಳಿ ಕೆಲಸ ಪೂರ್ಣವಾದರೆ ನೀರು ಬರಲಿದೆ. 3 ಸಾವಿರ ಕೋಟಿಯಷ್ಟು ಮಾಡಿರುವ ಕಾಮಗಾರಿ ಕೆಲಸಕ್ಕೆ ಹಣ ಕೊಡಲಿ ಎಂದು ಸರ್ಕಾರಕ್ಕೆ ಮೊಯ್ಲಿ ಇದೇ ವೇಳೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಡ್ರಿಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.