ETV Bharat / city

ಬ್ರಾಹ್ಮಣ್ಯ ವ್ಯವಸ್ಥೆ ವಿರುದ್ಧ ಕಿಡಿ: ನಟ ಚೇತನ್ ವಿರುದ್ಧ ಎಫ್‌ಐಆರ್ - ನಟ ಚೇತನ್‌ ವಿರುದ್ಧ ಎಫ್ಐಆರ್‌ ದಾಖಲು

ಬ್ರಾಹ್ಮಣ್ಯ ವ್ಯವಸ್ಥೆಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಮಾಜಿಕ ಕಾರ್ಯಕರ್ತ, ನಟ ಚೇತನ್‌ ವಿರುದ್ಧ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲ ಎಫ್‌ಐಆರ್‌ ದಾಖಲಾಗಿದೆ.

FIR Registered against actor and social activist chetan in bangalore
ಬ್ರಾಹ್ಮಣ್ಯ ವ್ಯವಸ್ಥೆ ವಿರುದ್ಧ ಕಿಡಿ; ನಟ ಚೇತನ್ ವಿರುದ್ಧ ಎಫ್‌ಐಆರ್
author img

By

Published : Jun 10, 2021, 7:32 PM IST

ಬೆಂಗಳೂರು: ಬ್ರಾಹ್ಮಣರು ಹಾಗೂ ಬ್ರಾಹ್ಮಣ್ಯದ ಕುರಿತು ಅವಹೇಳಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ‌. ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ನೀಡಿದ ದೂರಿನ ಮೇರೆಗೆ ಆ ದಿನಗಳು ಚಿತ್ರದ ಖ್ಯಾತಿಯ ಚೇತನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಪೆಟ್ಟು ಬೀಳುವಂತಹ ಹಾಗೂ ಬ್ರಾಹ್ಮಣ್ಯ ವ್ಯವಸ್ಥೆಯ ವಿರುದ್ಧ ಕಿಡಿಕಾರಿ ಬ್ರಾಹ್ಮಣ ಪದ್ಧತಿಯು ಆಧ್ಯಾತ್ಮಿಕ ಭಯೋತ್ಪಾದನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅವಹೇಳಕಾರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಜ್ಯದ ಹಲವೆಡೆ ಬ್ರಾಹ್ಮಣ ಸಮುದಾಯದವರು ಚೇತನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿಪ್ರ ಯುವ ವೇದಿಕೆ ನೀಡಿದ ದೂರಿನ ಮೇರೆಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ 153(B) 295(A) ಅಡಿ ಪ್ರಕರಣ ದಾಖಲಾಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.