ಬೆಂಗಳೂರು: ಸಾರಿಗೆ ಸಂಸ್ಥೆಗಳನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭೇಟಿಯಾಗಿ ಚರ್ಚಿಸಿದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮತ್ತು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಒಂದು ವಾಹನಕ್ಕೆ ಒಂದು ಗಿಡ ಅಭಿಯಾನ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿದರು.
ಲಾಕ್‌ಡೌನ್ ಸಮಯದಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದ ವಾಯು ಮಾಲಿನ್ಯ ಅನ್ಲಾಕ್ ನಂತರ ಮತ್ತೆ ಏರಿಕೆ ಕಂಡಿದ್ದು, ಅದರ ತಡೆಗೆ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಬಸ್ ನಿಲ್ದಾಣ, ಬಸ್ ಘಟಕ, ತರಬೇತಿ ಕೇಂದ್ರ ಹಾಗೂ ಸಾರಿಗೆ ಕಚೇರಿ ಆವರಣದಲ್ಲಿ ಗಿಡ ಬೆಳೆಸಲಾಗುತ್ತದೆ. ಲಕ್ಷ್ಮಣ ಸವದಿ ಈ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ್ದು, ಶೀಘ್ರದಲ್ಲೇ ಆರಂಭಿಸಲಾಗುತ್ತದೆ.
![DCM Lakshmana Savadi green signal for one vehicle](https://etvbharatimages.akamaized.net/etvbharat/prod-images/ka-bng-02-update-photos-ka10033_28012021143834_2801f_1611824914_941.jpg)