ETV Bharat / city

ಸಿದ್ದು ತಮ್ಮ ಪಕ್ಷದಲ್ಲಿನ ಗುಂಪುಗಾರಿಕೆ ಮೊದಲು ಸರಿಪಡಿಸಿಕೊಳ್ಳಲಿ; ಡಿಸಿಎಂ ಅಶ್ವತ್ಥನಾರಾಯಣ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಕೋವಿಡ್-19 ಸಂದರ್ಭದಲ್ಲಿಯೂ ಬಹಳ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಹಳ ಒಳ್ಳೆ ಅಭಿವೃದ್ಧಿ ಮಾಡಿದ್ದಾರೆ ಎಲ್ಲಾ ಕಡೆ ಬಿಜೆಪಿ ಖಂಡಿತ ಗೆಲ್ಲಲಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

dcm ashwathnarayan talk war against Siddaramaiah
ಮೊದಲು ನಿಮ್ಮಲ್ಲಿನ ಗುಂಪುಗಾರಿಕೆ ಸರಿಪಡಿಸಿಕೊಳ್ಳಿ, ಸಿದ್ದುಗೆ ಡಿಸಿಎಂ ಅಶ್ವತ್ಥನಾರಾಯಣ್ ತಿರುಗೇಟು
author img

By

Published : Oct 29, 2020, 7:39 PM IST

ಬೆಂಗಳೂರು: ಮೊದಲು ಅವರ ಪಕ್ಷದಲ್ಲಿ ಇರುವ ಗುಂಪುಗಾರಿಕೆಯನ್ನು ಸರಿಪಡಿಸಿಕೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ್ ತಿರುಗೇಟು ನೀಡಿದ್ದಾರೆ.

ಮೊದಲು ನಿಮ್ಮಲ್ಲಿನ ಗುಂಪುಗಾರಿಕೆ ಸರಿಪಡಿಸಿಕೊಳ್ಳಿ, ಸಿದ್ದುಗೆ ಡಿಸಿಎಂ ಅಶ್ವತ್ಥನಾರಾಯಣ್ ತಿರುಗೇಟು

ಆರ್.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಡಿಸಿಎಂ ಅಶ್ವತ್ಥನಾರಾಯಣ್ ಚುನಾವಣಾ ಪ್ರಚಾರ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಮೊದಲು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ, ಅವರಲ್ಲಿ ಎಷ್ಟು ಗುಂಪು ಇve ಎಂದು ನೋಡಿಕೊಳ್ಳಲಿ. ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬಂದವರು ಅವರು, ಪಕ್ಷದಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಆದರೆ ಪಕ್ಷಕ್ಕೆ ಏನೂ ಕೊಡುವುದಿಲ್ಲ, ಅವರು ಸಿಎಂ ಸ್ಥಾನ ಸಿಗುತ್ತೆ ಅಂದಾಗ ಮುನ್ನೆಲೆಗೆ ಬರ್ತಾರೆ ಎಂದು ಟಾಂಗ್ ನೀಡಿದರು.

ಡಿಕೆ ಬ್ರದರ್ಸ್ ಈ ರೀತಿ ಜಾತಿ ರಾಜಕೀಯ ಮಾತಾಡೋದು ಸರಿಯಲ್ಲ. ಕಾಂಗ್ರೆಸ್ ಜಾತಿ ತರುತ್ತಿರುವುದನ್ನು ನಾವು ಖಂಡಿಸುತ್ತೇವೆ. ಸಮಾಜ ಒಡೆಯುವ ಪ್ರಯತ್ನ ಕಾಂಗ್ರೆಸ್ ಮಾಡಬಾರದು ಎಂದರು. ಮುನಿರತ್ನ ಪರ ಜನ ಬೆಂಬಲ ಎದ್ದು ಕಾಣುತ್ತಿದೆ. ನಮ್ಮ ಪಕ್ಷ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತದೆ ಎಷ್ಟು ಮತದಾನ ಆಗುತ್ತದೆಯೋ ಅಷ್ಟು ಗೆಲುವಿನ ಅಂತರ ಜಾಸ್ತಿ ಆಗಲಿದೆ. ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಕೋವಿಡ್-19 ಸಂದರ್ಭದಲ್ಲಿಯೂ ಬಹಳ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಹಳ ಒಳ್ಳೆ ಅಭಿವೃದ್ಧಿ ಮಾಡಿದ್ದಾರೆ ಎಲ್ಲಾ ಕಡೆ ಬಿಜೆಪಿ ಖಂಡಿತ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.