ETV Bharat / city

ಅಕ್ಟೋಬರ್‌ 25ರವರೆಗೂ ಕೋವಿಡ್ ಮಾರ್ಗಸೂಚಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

ಶಾಲಾ-ಕಾಲೇಜು, ವೈದ್ಯಕೀಯ ಕಾಲೇಜು ಮತ್ತು ಸಂಬಂಧಿತ ಸಂಸ್ಥೆಗಳ ಪುನರ್ ಆರಂಭ, ಅಗತ್ಯವಿದ್ದರೆ ಹೆಚ್ಚುವರಿ ನಿಯಂತ್ರಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ..

ಕೋವಿಡ್ ಮಾರ್ಗಸೂಚಿ
ಕೋವಿಡ್ ಮಾರ್ಗಸೂಚಿ
author img

By

Published : Oct 8, 2021, 10:59 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಬಹುತೇಕ ನಿರ್ಬಂಧಗಳನ್ನು ಸಡಿಲಗೊಳಿಸಿ ಮಾರ್ಗಸೂಚಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ರಂಗಮಂದಿರ, ಪಬ್ ಸೇರಿ ಎಲ್ಲೆಡೆ ಶೇ.100ರಷ್ಟು ಅವಕಾಶ ಸೇರಿ ಎಲ್ಲವೂ ವಿಸ್ತರಣೆಯಾಗಲಿದೆ.

ಹೀಗಾಗಿ, ರಾಜ್ಯಾದ್ಯಂತ ಅಕ್ಟೋಬರ್ 25ರ ಬೆಳಗ್ಗೆ 6 ಗಂಟೆವರೆಗೆ ಹಾಲಿ ಮಾರ್ಗಸೂಚಿಗಳೇ ಅನ್ವಯವಾಗಲಿವೆ. ಇದರ ಪ್ರಕಾರ 5ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಮುಂದುವರೆಯಲಿವೆ.

ಅದೇ ರೀತಿ ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಜಾತ್ರೆ, ಧಾರ್ಮಿಕ ಉತ್ಸವ, ಮೆರವಣಿಗೆಗಳಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆ ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ವೇಳೆಯೂ ಸಾರ್ವಜನಿಕ ಮೆರವಣಿಗೆಗೆ ಅವಕಾಶವಿಲ್ಲ. ಜೊತೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಜನರು ಭಾಗವಹಿಸಿ ಪ್ರಾರ್ಥನೆ ಅಥವಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಶಾಲಾ-ಕಾಲೇಜು, ವೈದ್ಯಕೀಯ ಕಾಲೇಜು ಮತ್ತು ಸಂಬಂಧಿತ ಸಂಸ್ಥೆಗಳ ಪುನರ್ ಆರಂಭ, ಅಗತ್ಯವಿದ್ದರೆ ಹೆಚ್ಚುವರಿ ನಿಯಂತ್ರಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಜಲಕ್ರೀಡೆಗಳಿಗೆ ನೀಡಿರುವ ಅನುಮತಿ ಹಾಗೂ ವಸ್ತು ಪ್ರದರ್ಶನ, ಸಿನಿಮಾ ಮಂದಿರ, ಪಬ್‌ಗಳಿಗೆ ನೀಡಿರುವ ಅವಕಾಶ ಸೇರಿದಂತೆ ಎಲ್ಲಾ ಆದೇಶಗಳೂ ಅಕ್ಟೋಬರ್ 25ರವರೆಗೂ ವಿಸ್ತರಿಸಲಾಗಿದೆ ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.

(Mysuru Dasara: ನಾಡಹಬ್ಬ ದಸರಾಗೆ ಸರ್ಕಾರದ ಮಾರ್ಗಸೂಚಿ ಹೀಗಿದೆ..)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.