ETV Bharat / city

ವಕೀಲರನ್ನು ನೇಮಿಸಿಕೊಳ್ಳುವುದು ಬ್ಯಾಂಕ್ ವಿವೇಚನೆಗೆ ಬಿಟ್ಟದ್ದು: ಹೈಕೋರ್ಟ್ - ಬ್ಯಾಂಕ್​ಗೆ ವಕೀಲರ ನೇಮಕಾತಿ ಬಗ್ಗೆ ಹೈಕೋರ್ಟ್ ತೀರ್ಪು

ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್ ವಿವೇಚನೆಗೆ ಬಿಟ್ಟಿರುವ ವಿಚಾರ. ಹಾಗೆಯೇ ಇದೊಂದು ಕಕ್ಷಿದಾರ ಮತ್ತು ವಕೀಲರ ನಡುವಿನ ಸಂಬಂಧದಂತೆಯೇ ಇರುತ್ತದೆ. ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಹೈಕೋರ್ಟ್ ಆದೇಶ,High court on appointing lawyers to bank
ಕರ್ನಾಟಕ ಹೈಕೋರ್ಟ್ ಆದೇಶ
author img

By

Published : Dec 10, 2021, 5:37 PM IST

Updated : Dec 10, 2021, 7:56 PM IST

ಬೆಂಗಳೂರು: ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್​​ನ ವಿವೇಚನೆಗೆ ಬಿಟ್ಟ ವಿಚಾರ. ಇಂತಹ ವಿಷಯಗಳಲ್ಲಿ ರಿಟ್ ಕೋರ್ಟ್ ಸಾಮಾನ್ಯವಾಗಿ ಮಧ್ಯಪ್ರವೇಶಿಸಲು ಮತ್ತು ಆಳವಾಗಿ ಪರೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮ್ಮನ್ನು ಬ್ಯಾಂಕ್ ಪ್ಯಾನಲ್​​ನಿಂದ ಕೈಬಿಟ್ಟ ಕ್ರಮ ಪ್ರಶ್ನಿಸಿ ವಕೀಲ ತಿಮ್ಮಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್ ವಿವೇಚನೆಗೆ ಬಿಟ್ಟಿರುವ ವಿಚಾರ. ಹಾಗೆಯೇ ಇದೊಂದು ಕಕ್ಷಿದಾರ ಮತ್ತು ವಕೀಲರ ನಡುವಿನ ಸಂಬಂಧದಂತೆಯೇ ಇರುತ್ತದೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿವಾದಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಮುನ್ಸೂಚನೆ ನೀಡದೇ, ನೋಟಿಸನ್ನೂ ಕೊಡದೇ ವಕೀಲರನ್ನು ಪ್ಯಾನಲ್​​ನಿಂದ ಕೈಬಿಟ್ಟಿದೆ. ಈ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ವಾದ ಪರಿಗಣಿಸಿಲು ನಿರಾಕರಿಸಿರುವ ಪೀಠ, ಪ್ಯಾನಲ್​​ಗೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಬ್ಯಾಂಕ್​​ಗೆ ಬಿಟ್ಟಿ ವಿಚಾರ. ಬ್ಯಾಂಕ್​​ನ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.

(ಇದನ್ನೂ ಓದಿ: ವಿರುಷ್ಕಾ ಮನೆ ಪಕ್ಕದಲ್ಲೇ ವಿಕ್ಕಿ - ಕತ್ರಿನಾ ಮನೆ: ಬೇಗ ಬನ್ನಿ ಎಂದ ಅನುಷ್ಕಾ.. ಯಾಕೆ ಗೊತ್ತಾ..!)

Last Updated : Dec 10, 2021, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.