ETV Bharat / city

ಪುತ್ರ ವಿಜಯೇಂದ್ರಗೆ ಭವಿಷ್ಯ ಕಲ್ಪಿಸಲು ತ್ಯಾಗ.. ಸ್ವಪ್ರೇರಣೆಯಿಂದ ಸಿಎಂ ಕುರ್ಚಿ ಬಿಡಲು ನಿರ್ಧರಿಸಿದರೇ ಬಿಎಸ್‌ವೈ!?

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೆ ತಮ್ಮ ಕಣ್ಮುಂದೆಯೇ ಮಗನ ರಾಜಕೀಯ ಭವಿಷ್ಯ ಉಜ್ವಲವಾಗುವುದನ್ನು ನೋಡಬಹದು ಎನ್ನುವ ಉದ್ದೇಶದಿಂದಲೂ ಸ್ವಯಂ ನಿರ್ಧಾರದಿಂದ ಯಡಿಯೂರಪ್ಪನವರು ರಾಜೀನಾಮೆಗೆ ಆಸಕ್ತಿ ತೋರಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ..

cm bsy resignation issue updates
ಸಿಎಂ ಪದವಿಗೆ ಗುಡ್ ಬೈ: ಇದು ಬಿಎಸ್​ವೈ ಸ್ವಯಂ ನಿರ್ಧಾರ!
author img

By

Published : Jul 20, 2021, 8:42 PM IST

ಬೆಂಗಳೂರು : ಆಪರೇಶನ್ ಕಮಲದ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಉಪಚುನಾವಣೆಯಲ್ಲಿ ವಲಸಿಗ ಶಾಸಕರನ್ನು ಗೆಲ್ಲಿಸಿಕೊಂಡು, ಹೆಜ್ಜೆಹೆಜ್ಜೆಗೂ ಸವಾಲುಗಳನ್ನು ಎದುರಿಸಿ, ರಾಜಕೀಯ ಹೋರಾಟದಿಂದ ಅಧಿಕಾರ ದಕ್ಕಿಸಿಕೊಂಡಿದ್ದ ಮುಖ್ಯಮಂತ್ರಿ ಪದವಿಗೆ ಸಿಎಂ ಯಡಿಯೂರಪ್ಪ ಸ್ವಪ್ರೇರಣೆಯಿಂದ ವಿದಾಯ ಹೇಳುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದು ಅಚ್ಚರಿಯ ಸಂಗತಿಯಾದರೂ ನಂಬಲೇಬೇಕು. ರಾಜಕೀಯ ಹೋರಾಟದ ಮೂಲಕ ಪಡೆದುಕೊಂಡಿದ್ದ ಮುಖ್ಯಮಂತ್ರಿ ಹುದ್ದೆಯನ್ನು ಯಡಿಯೂರಪ್ಪನವರು ಬಿಜೆಪಿಯ ಹೈಕಮಾಂಡ್​ನ ಯಾವುದೇ ಒತ್ತಡವಿಲ್ಲದೇ ಸ್ವಯಂ ನಿರ್ಧಾರದಿಂದ ಬಿಟ್ಟುಕೊಡುತ್ತಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎನ್ನುವ ವದಂತಿಗಳು ಕಳೆದ ಒಂದು ವರ್ಷದಿಂದಲೂ ಬಲವಾಗಿ ಕೇಳಿ ಬರುತ್ತಿತ್ತು. ಹಿಂದೆ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿ ಬಂದಾಗಲೆಲ್ಲಾ ಯಡಿಯೂರಪ್ಪನವರು ಅದನ್ನು ಅಲ್ಲಗಳೆಯುತ್ತಿದ್ದರು. ಅಷ್ಟೇ ಅಲ್ಲ, ತಾವೇ ಪೂರ್ಣಾವಧಿ ತನಕ ಸಿಎಂ ಆಗಿರುವುದಾಗಿ ಆತ್ಮವಿಶ್ವಾಸದಿಂದ ಹೇಳುತ್ತಿದ್ದರು.

ಅಷ್ಟೇ ಏಕೆ, ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವ ಬದಲಾವಣೆ ಗೊಂದಲ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದಾಗಲೂ ಸಹ ಯಡಿಯೂರಪ್ಪನವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದರು. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ದೆಹಲಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಬಂದ ಬೆನ್ನಲ್ಲಿಯೇ ಮುಖ್ಯಮಂತ್ರಿ ಪದವಿಗೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆನ್ನುವ ಸುದ್ದಿ ದಟ್ಟವಾಗಿ ಹರಡಿದೆ.

ಹೈಕಮಾಂಡ್​​ಗೆ ಸ್ವಯಂ ನಿರ್ಧಾರ ತಿಳಿಸಿದ ಬಿಎಸ್‌ವೈ!

ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಪ್ರೇರಣೆಯಿಂದ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪನವರು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಪದವಿ ನಿಭಾಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ, ಸ್ವಯಂ ನಿರ್ಧಾರದಿಂದ ಮುಖ್ಯಮಂತ್ರಿಗಿರಿಗೆ ರಾಜೀನಾಮೆ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ಪುತ್ರನ ಭವಿಷ್ಯಕ್ಕೆ ಪದವಿ ತ್ಯಾಗ?

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಯಡಿಯೂರಪ್ಪನವರು ಸಿಎಂ ಪದವಿಗೆ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಲು ಒಲವು ತೋರಿದ್ದಾರೆಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಗೆ ರಾಜೀನಾಮೆ ನೀಡಿದ ಬಳಿಕ ಮಗ ವಿಜಯೇಂದ್ರ ಅವರಿಗೆ ಉಪಮುಖ್ಯಮಂತ್ರಿ ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಮಹತ್ವದ ಖಾತೆಗಳನ್ನು ನೀಡಬೇಕೆನ್ನುವ ಷರತ್ತು ವಿಧಿಸಿ ಸ್ವಪ್ರೇರಣೆಯಿಂದ ರಾಜೀನೇಮೆಗೆ ಸಿದ್ದವಿರುವ ಸಂದೇಶವನ್ನು ದೆಹಲಿ ಭೇಟಿ ವೇಳೆ ಹೈಕಮಾಂಡ್​​ಗೆ ನೀಡಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸಿಎಂ ವಿದಾಯಕ್ಕೆ ವೇದಿಕೆ ಸಜ್ಜು : ಜು.26 ರಂದು ಬಿಎಸ್​ವೈ ರಾಜೀನಾಮೆ ನಿರ್ಧಾರ?

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೆ ತಮ್ಮ ಕಣ್ಮುಂದೆಯೇ ಮಗನ ರಾಜಕೀಯ ಭವಿಷ್ಯ ಉಜ್ವಲವಾಗುವುದನ್ನು ನೋಡಬಹದು ಎನ್ನುವ ಉದ್ದೇಶದಿಂದಲೂ ಸ್ವಯಂ ನಿರ್ಧಾರದಿಂದ ಯಡಿಯೂರಪ್ಪನವರು ರಾಜೀನಾಮೆಗೆ ಆಸಕ್ತಿ ತೋರಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.