ಬೆಂಗಳೂರು: ರಾಜ್ಯದ ಕೋವಿಡ್ ಸ್ಥಿತಿಗತಿಗೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಸಭೆ ನಡೆಸುತ್ತಿದ್ದಾರೆ.
ಆರ್.ಟಿ ನಗರದಲ್ಲಿ ಖಾಸಗಿ ನಿವಾಸದಿಂದ ವರ್ಚುವಲ್ ಮೂಲಕ ಸಿಎಂ ಸಭೆ ನಡೆಸಿದ್ದು, ಆರೋಗ್ಯ ಸಚಿವ ಸುಧಾಕರ್ ಹಾಗೂ ಇತರೆ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವರ್ಚುವಲ್ ಮೂಲಕವೇ ಸಭೆಗೆ ಹಾಜರಾದರು.
ರಾಜ್ಯದಲ್ಲಿ ಎರಡು ವಾರಗಳ ಕೋವಿಡ್ ಕಠಿಣ ನಿಯಮ ಜಾರಿಗೊಳಿಸಿದ್ದು, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, ಹೋಟೆಲ್, ಸಿನಿಮಾ ಮಂದಿರ ಇತ್ಯಾದಿಗಳಲ್ಲಿ ಶೇ.50 ರ ನಿರ್ಬಂಧ ಅನುಷ್ಠಾನಕ್ಕೆ ತರಲಾಗಿದೆ. ಕಠಿಣ ನಿಯಮ ಜಾರಿ ನಂತರ ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ, ಮೂರನೇ ಅಲೆ ನಿಯಂತ್ರಣಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಸಿಎಂ ಬೊಮ್ಮಾಯಿ ಅವಲೋಕನ ಮಾಡಿದರು. ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರು ನಗರದಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಸಭೆಯಲ್ಲಿ ವ್ಯಕ್ತವಾಯಿತು ಎನ್ನಲಾಗ್ತಿದೆ.
ಸಿಎಂ ಬೊಮ್ಮಾಯಿ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ವರ್ಚುವಲ್ ಸಭೆ ಮಾಡುತ್ತಿದ್ದಾರೆ.
(ಇದನ್ನೂ ಓದಿ: ವಿಜಯಪುರದಲ್ಲಿ ಜನಿಸಿದ 7 ದಿನಕ್ಕೇ ಟಗರು ಮರಿ ದಾಖಲೆಯ 2 ಲಕ್ಷ ರೂಪಾಯಿಗೆ ಮಾರಾಟ!!)