ETV Bharat / city

ಆದಿತ್ಯ ಆಳ್ವ ನನ್ನ ಬಾಲ್ಯ ಸ್ನೇಹಿತ, ಒಂದು ತಿಂಗಳಿನಿಂದ ಭೇಟಿಯಾಗಿಲ್ಲ: ಮುತ್ತಪ್ಪ ರೈ ಪುತ್ರ

author img

By

Published : Oct 7, 2020, 4:00 PM IST

ಸ್ಯಾಂಡಲ್​ವುಡ್​ ಡ್ರಗ್​ ನಂಟು ಪ್ರಕರಣದ ಆರೋಪಿ ಆದಿತ್ಯ ಆಳ್ವಾ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಮಾಜಿ ಡಾನ್​ ಪುತ್ರ ರಿಕ್ಕಿ ರೈಯನ್ನು ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

Rikki Rai
ರಿಕ್ಕಿ ರೈ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ವಿಚಾರಣೆಗೆ ಹಾಜರಾಗಿರುವ ಮುತ್ತಪ್ಪ ರೈ‌ ಪುತ್ರ ರಿಕ್ಕಿ ರೈನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ಗಂಟೆಗಳಿಂದ ರಿಕ್ಕಿ ರೈಯನ್ನು ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದೆ. ಬಿಡದಿ ಹಾಗೂ ಸದಾಶಿನಗರದಲ್ಲಿರುವ ‌ರಿಕ್ಕಿ ರೈ ನಿವಾಸಗಳ ಮೇಲೆ ನಿನ್ನೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೊಬೈಲ್ ಜಪ್ತಿ ಮಾಡಿಕೊಂಡಿದ್ದರು. ಸೀಜ್ ಮಾಡಿಕೊಂಡಿದ್ದ ಮೊಬೈಲ್​ನಲ್ಲಿನ‌ ಸಂದೇಶಗಳ‌ ಕುರಿತಾಗಿ ವಿಚಾರಣೆ ನಡೆಯುತ್ತಿದೆ.

ಆದಿತ್ಯ ಆಳ್ವಾ ನನ್ನ ಬಾಲ್ಯ ಸ್ನೇಹಿತ ಎಂದು ಹೇಳುತ್ತಿರುವ ರಿಕ್ಕಿ ರೈ, ಕಾಟನ್ ಪೇಟೆಯಲ್ಲಿ ಕೇಸ್ ದಾಖಲಾಗುವರೆಗೂ ಆದಿತ್ಯ ಆಳ್ವಾ ಸಂಪರ್ಕದಲ್ಲಿದ್ದ. ಸೆಪ್ಟೆಂಬರ್​ನಲ್ಲಿ ಆದಿತ್ಯ ನನ್ನ ಸಂಪರ್ಕಕ್ಕೆ ಬಂದಿಲ್ಲ. ಒಂದು ತಿಂಗಳಿಂದ ನಮ್ಮಿಬ್ಬರ ನಡುವೆ ಯಾವುದೇ ಪೋನ್ ಕಾಂಟ್ಯಾಕ್ಟ್ ಇಲ್ಲ ಎಂದು ವಿಚಾರಣೆ ವೇಳೆ ರೈ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ‌. ಈಗಾಗಲೇ ರಿಕ್ಕಿ ರೈನ ಕಾಲ್ ಲಿಸ್ಟ್ ಜೊತೆ ಮೆಸೆಂಜರ್, ಇನ್ಸ್​​ಟಾಗ್ರಾಂ ಸಂದೇಶಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.