ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ರೇಣು ದೇವಿ ಅವರು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸದ ರೇಸ್ ವ್ಯೂ ಕಾಟೇಜ್ಗೆ ಆಗಮಿಸಿದ ಬಿಹಾರ ಡಿಸಿಎಂ ರೇಣುದೇವಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.
ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸಿ, ನಂತರ ಉಭಯ ನಾಯಕರು 20 ನಿಮಿಷಗಳ ಕಾಲ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಅದೃಷ್ಟ ಪರೀಕ್ಷೆಯಲ್ಲಿ ಸಿಎಂ ಧಾಮಿಗೆ ಗೆಲುವು... ಚಂಪಾವತ್ ಉಪಚುನಾವಣೆಯಲ್ಲಿ ಜಯಭೇರಿ