ETV Bharat / city

ಗೂಗಲ್ ಸಹಭಾಗಿತ್ವದಲ್ಲಿ ಬೆಂಗಳೂರು ಟ್ರಾಫಿಕ್‌ ನಿರ್ವಹಣೆ: ಪೊಲೀಸರ ಹೊಸ ಹೆಜ್ಜೆ - ಗೂಗಲ್‌ ಮ್ಯಾಪ್‌

ಗೂಗಲ್ ಸಹಭಾಗಿತ್ವದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ನಿರ್ವಹಣೆಗೆ ಮುಂದಾಗಿದ್ದಾರೆ.

ಗೂಗಲ್‌
Google
author img

By

Published : Jul 29, 2022, 12:16 PM IST

ಬೆಂಗಳೂರು: ಗಾರ್ಡನ್ ಸಿಟಿ, ಐಟಿ ಸಿಟಿ ಎಂಬ ಬಿರುದಾವಳಿಗಳ ಜೊತೆಗೆ ಟ್ರಾಫಿಕ್ ಸಿಟಿ ಅಂತಲೂ ಕರೆಸಿಕೊಳ್ಳುವ ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ನಗರದ ಟ್ರಾಫಿಕ್ ಪೊಲೀಸರು ದೇಶದಲ್ಲೇ ಮೊದಲ ಬಾರಿಗೆ ಗೂಗಲ್​ನೊಂದಿಗೆ ಕೈಜೋಡಿಸಿದ್ದಾರೆ. ಇನ್ನು ಮುಂದೆ ವಾಹನ ಸವಾರರಿಗೆ ಗೂಗಲ್‌ ಮ್ಯಾಪ್‌ ಮೂಲಕವೇ ಸ್ಪೀಡ್‌ ಲಿಮಿಟ್‌, ಸಂಚಾರ ದಟ್ಟಣೆಯಿರುವ ಮಾರ್ಗಗಳು ತಿಳಿಯಲಿದೆ.

ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳು, ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧವಿರುವ ರಸ್ತೆಗಳ ಮಾಹಿತಿ ಗೂಗಲ್ ಮೂಲಕವೇ ಲಭ್ಯವಾಗಲಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು‌ ಅನುಕೂಲವಾಗಲಿದೆ. ಇದರಿಂದಾಗಿ ಅನಗತ್ಯ ಸಂಚಾರ ದಟ್ಟಣೆ, ಕಾಯುವ ಸಮಯ, ಇಂಧನ ಬಳಕೆ ತಪ್ಪಿಸಬಹುದು.

"ಪ್ರಾಯೋಗಿಕವಾಗಿ ನಗರದ ಕತ್ರಿಗುಪ್ಪೆ ಸರ್ಕಲ್​ನಲ್ಲಿ ಸಂಚರಿಸುವ ವಾಹನಗಳ ನಂಬರ್ ಆಧರಿಸಿ ಅವುಗಳ ವೇಗದ ಅನ್ವಯ ಆಟೋಮ್ಯಾಟಿಕ್ ಸಿಗ್ನಲ್ ಬದಲಾವಣೆಯ ತಂತ್ರಜ್ಞಾನವನ್ನ ಗೂಗಲ್ ಸಹಭಾಗಿತ್ವದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ತಕ್ಕಮಟ್ಟಿನ ಯಶಸ್ಸು ಕಾಣಲಾಗಿದೆ. ಮುಂದಿನ ದಿನಗಳಲ್ಲಿ ಗೂಗಲ್‌ ಸಂಸ್ಥೆಯೊಂದಿಗಿನ ಈ ಒಪ್ಪಂದವು ಆಧುನಿಕ ತಂತ್ರಜ್ಞಾನದ ನೆರವಿನಿಂದ ವಾಹನ ಸಂಚಾರ ನಿರ್ವಹಣೆ ಜತೆಗೆ ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ" ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣ: ಮಂಗಳೂರಿನ 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.