ETV Bharat / city

ಬಿಬಿಎಂಪಿ ಬಜೆಟ್ ಮಂಡನೆಗೆ ಸಕಲ ತಯಾರಿ.. ಈ ಬಾರಿ ಯಾವುದೇ ಹೊಸ ಯೋಜನೆಗಳಿಲ್ಲ

ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿ ಬಜೆಟ್ ಮಂಡನೆಗೆ ಅಧಿಕಾರಿಗಳು ಸಕಲ ತಯಾರಿ ನಡೆಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಲಿಕೆಗೆ ಹೊರೆಯಾಗದಂತೆ ವಾಸ್ತವಿಕ ಬಜೆಟ್ ಮಂಡನೆಗೆ ತಯಾರಿ ನಡೆಸಲಾಗಿದೆ.

author img

By

Published : Jan 31, 2022, 10:54 PM IST

budget
ಬಿಬಿಎಂಪಿ ಬಜೆಟ್

ಬೆಂಗಳೂರು: ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿ ಬಜೆಟ್ ಮಂಡನೆಗೆ ಅಧಿಕಾರಿಗಳು ಸಕಲ ತಯಾರಿ ನಡೆಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಲಿಕೆಗೆ ಹೊರೆಯಾಗದಂತೆ ವಾಸ್ತವಿಕ ಬಜೆಟ್ ಮಂಡನೆಗೆ ತಯಾರಿ ನಡೆಸಲಾಗಿದೆ.

ಕಳೆದ ಬಾರಿ 10295 ಕೋಟಿ ರೂ.ಗಳ ಬಜೆಟ್​ಗೆ ಸರ್ಕಾರ ಅನುಮೋದನೆ ನೀಡಿತ್ತು. ಈ ಬಾರಿ ಬೆಂಗಳೂರಿಗೆ ಯಾವುದೇ ಹೊಸ ಯೋಜನೆ ಪ್ರಕಟಿಸದೇ, ಹೊಸ ಕಾಮಗಾರಿ ಕೈಗೊಳ್ಳದೆ ಬಜೆಟ್ ಮಂಡನೆ ಮಾಡಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟಿನ್ ಯೋಜನೆಗೂ ಹಣ ಮೀಡಲಿಡುವುದು ಅನುಮಾನವಾಗಿದೆ. ಕೇವಲ ಆಸ್ತಿ ತೆರಿಗೆಯಲ್ಲಿ ಬಿಬಿಎಂಪಿ ನಂಬಿಕೊಂಡಿರುವುದರಿಂದ ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ ಮಾಡಿ ಆರ್ಥಿಕ ಸಂಕಷ್ಟದಿಂದ ಕೊಂಚ ರಿಲೀಫ್ ಪಡೆಯುವುದು ಪಾಲಿಕೆ ಅಧಿಕಾರಿಗಳ ಪ್ಲಾನ್ ಆಗಿದೆ ಎನ್ನಲಾಗುತ್ತಿದೆ.

ಓದಿ: ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಕೇಸ್​: ಎಎಸ್​​ಐಗೆ 20 ವರ್ಷ ಜೈಲು ಶಿಕ್ಷೆ

ಪಾಲಿಕೆಗೆ ಆಸ್ತಿ ತೆರಿಗೆಯಿಂದ 2670 ಕೋಟಿ ಹಾಗೂ ಇತರ ಮೂಲಗಳಿಂದ 1 ಸಾವಿರ ಕೋಟಿ ಮತ್ತು ಇದರ ಜೊತೆಗೆ ಸರ್ಕಾರ 3500 ಕೋಟಿ ರೂ.ಗಳ ಅನುದಾನ ನೀಡುವ ಸಾಧ್ಯತೆಗಳಿವೆ. ಹೀಗಾಗಿ ನಿರೀಕ್ಷಿತ ಆದಾಯವಾದ ಸುಮಾರು 7000 ಕೋಟಿ ರೂ.ಗಳಲ್ಲಿ ವಾಸ್ತವಿಕ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ದೊರೆತಿದೆ.

ಗುತ್ತಿಗೆದಾರರಿಗೆ 2 ಸಾವಿರ ಕೋಟಿ ರೂ. ಬಾಕಿ: ಸಂಬಳ, ಕಚೇರಿಗಳ ವಿದ್ಯುತ್ ಬಿಲ್, ಪಾರ್ಕ್ ನಿರ್ವಹಣೆ, ಸೇರಿದಂತೆ ಇತರ ಖರ್ಚುಗಳು ಸೇರಿದಂತೆ ತಿಂಗಳಿಗೆ 300 ಕೋಟಿ ರೂ. ಖರ್ಚು ಆಗಲಿದೆ. ಕಳೆದ ಹಲವಾರು ವರ್ಷಗಳಿಂದ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಸುಮಾರು 2 ಸಾವಿರ ಕೋಟಿ ರೂ. ಬಾಕಿ ನೀಡಬೇಕಿದೆ ಎಂದು ತಿಳಿದು ಬಂದಿದೆ.

ಬೀದಿ ಬದಿ ವ್ಯಾಪಾರಿಗಳ ನೋಂದಣಿ: ಬೀದಿ ಬದಿ ವ್ಯಾಪಾರಿಗಳಿಂದ ನೋಂದಣಿ ಮಾಡಿಸಿ ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವ ಮೂಲಕ ಹಣ ಸಂಗ್ರಹಿಸಲು ಯೋಜನ ರೂಪಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಸುಮಾರು 500 ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತಿಂಗಳಿಗೆ ತಲಾ 10 ಸಾವಿರ ರೂ. ಶುಲ್ಕ ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ ಎನ್ನುವ ಮಾಹಿತಿ ದೊರೆತಿದೆ.

ಶೀಘ್ರದಲ್ಲಿ ಕಾರ್ಪೊರೇಟರ್​ಗಳ ಆಯ್ಕೆ: ಮುಂದಿನ ಎರಡು ಮೂರು ತಿಂಗಳಿನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದು ಜನಪ್ರತಿನಿಧಿಗಳು ಆರಿಸಿ ಬರುವ ಸಾಧ್ಯತೆ ಇದೆ. ಕಾರ್ಪೊರೇಟರ್​ಗಳು ಆಯ್ಕೆಯಾದರೆ ಪೂರಕ ಬಜೆಟ್ ಮಂಡನೆ ಮಾಡಿಕೊಳ್ಳುವುದು ಖಚಿತ ಹೀಗಾಗಿ ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ ಮಾಡಲು ಸಕಲ ತಯಾರಿ ನಡೆಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.