ETV Bharat / city

ಕಲ್ಕೆರೆ ಕೆರೆ ಕೋಡಿ 2 ಅಡಿ ತಗ್ಗಿಸಿ: ಅಧಿಕಾರಿಗಳಿಗೆ BBMP ಆಯುಕ್ತ ಗೌರವ್ ಗುಪ್ತ ಸೂಚನೆ

ಕೆಆರ್​​ಪುರ ಕ್ಷೇತ್ರದ ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಹೆಬ್ಬಾಳ ವ್ಯಾಲಿ ಪಕ್ಕದಲ್ಲಿರುವ ಬಡಾವಣೆ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳು ಜಲಾವೃತವಾಗುವುದನ್ನು ತಡೆಯಲು ಕಲ್ಕೆರೆ ಕೆರೆ ಕೋಡಿಯನ್ನು ಎರಡು ಅಡಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

BBMP commissioner Gaurav Gupta  Notice to Officers
ಹೊರಮಾವು ವಾರ್ಡ್​ಗೆ ಸಚಿವ ಭೈರತಿ ಬಸವರಾಜ್ ಹಾಗು ಬಿಬಿಎಂಪಿ ಆಯುಕ್ತರ ಭೇಟಿ..
author img

By

Published : Nov 24, 2021, 9:39 AM IST

ಕೆಆರ್​​ಪುರ(ಬೆಂಗಳೂರು): ಕೆಆರ್​​ಪುರ ಕ್ಷೇತ್ರದ ಹೊರಮಾವು ವಾರ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ಮತ್ತು ಮನೆಗಳಿಗೆ ಮಳೆ ನೀರು ತುಂಬಿಕೊಂಡು ಅವಾಂತರ ಸೃಷ್ಟಿಸಿದೆ. ಈ ಹಿನ್ನೆಲೆ ನಿನ್ನೆ (ಮಂಗಳವಾರ) ಸಚಿವ ಭೈರತಿ ಬಸವರಾಜ್ ಹಾಗೂ ಬಿಬಿಎಂಪಿ ಆಯುಕ್ತರು ಮತ್ತು ವಿಶೇಷ ಆಯುಕ್ತರು ಭೇಟಿ ನೀಡಿದರು.

ಹೊರಮಾವು ವಾರ್ಡ್​ಗೆ ಸಚಿವ ಭೈರತಿ ಬಸವರಾಜ್ ಹಾಗೂ ಬಿಬಿಎಂಪಿ ಆಯುಕ್ತರ ಭೇಟಿ..

ಕೆಆರ್​​ಪುರ ಕ್ಷೇತ್ರದ ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಹೆಬ್ಬಾಳ ವ್ಯಾಲಿ ಪಕ್ಕದಲ್ಲಿರುವ ಬಡಾವಣೆ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳು ಜಲಾವೃತವಾಗುವುದನ್ನು ತಡೆಯಲು ಕಲ್ಕೆರೆ ಕೆರೆ ಕೋಡಿಯನ್ನು ಎರಡು ಅಡಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳಿಗೆ ಆಯುಕ್ತರ ಖಡಕ್​ ಸೂಚನೆ

ಸ್ಥಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಹೆಬ್ಬಾಳ ವ್ಯಾಲಿ ಹಾಗೂ ಕಲ್ಕೆರೆ ಪಕ್ಕದಲ್ಲಿ ಬಾಲಾಜಿ ಲೇಔಟ್, ಕಾವೇರಿ ನಗರ, ಸಾಯಿ ಲೇಔಟ್ ಹಾಗೂ ಸುತ್ತಮುತ್ತಲಿನ ಬಡಾವಣೆ, ವಸತಿ ಪ್ರದೇಶಗಳು ತಗ್ಗು ಪ್ರದೇಶದಲ್ಲಿರುವ ಕಾರಣ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಸಂಬಂಧ ಇನ್ನಿತರ ಜಲಾವೃತವಾಗುವ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮವನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಕೆರೆ ಕೆರೆಯ ಕೋಡಿಯನ್ನು ಎರಡು ಅಡಿ ತಗ್ಗಿಸಿದರೆ ಸ್ಥಳದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದ್ದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

ಜೋರು ಮಳೆಯಾದ ವೇಳೆ ಹೆಬ್ಬಾಳ ವ್ಯಾಲಿಯಲ್ಲಿ ಹರಿದು ಬರುವ ನೀರು ಕಾಲುವೆ ತುಂಬಿ ಹಿನ್ನೀರು ವಡ್ಡರಪಾಳ್ಯ, ಸಾಯಿಬಾಬ ಬಡಾವಣೆ, ಅನುಗ್ರಹ ಬಡಾವಣೆ ಜಲಾವೃತಗೊಳ್ಳಲಿವೆ. ಹೆಬ್ಬಾಳ ವ್ಯಾಲಿಗೆ ಈಗಾಗಲೇ ಕೆಲವು ಭಾಗದಲ್ಲಿ ಆರ್​​ಸಿಸಿ ತಡೆಗೋಡೆ ನಿರ್ಮಿಸಿದ್ದು, ಉಳಿಡೆಯ ಕಚ್ಚಾ ರಾಜಕಾಲುವೆಗೆ ಆರ್.ಸಿ.ಸಿ ತಡೆಗೋಡೆ ನಿರ್ಮಿಸಿ ಬಡಾವಣೆಗಳಿಗೆ ನೀರು ನುಗ್ಗದಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಹೆಬ್ಬಾಳ ವ್ಯಾಲಿ ಹಾದು ಹೋಗುವ ಭಾಗದಲ್ಲಿ ರೈಲ್ವೇ ಹಳಿ ಬಳಿ 5 ಮೀಟರ್ ಅಗಲದ 2 ವೆಂಟ್‌ಗಳಿದ್ದು, ಹಾಲಿ ಕಿರಿದಾಗಿರುವ ವೆಂಟ್‌ಗಳನ್ನು ಅಗಲೀಕರಣ ಮಾಡುವ ಕೆಲಸ ಆಗಬೇಕಿದೆ. ಈ ಸಂಬಂಧ ರೈಲ್ವೆ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಮಹದೇವಪುರ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಇಂಜಿನಿಯರ್​​ಗಳಾದ ಪರಮೇಶ್ವರ್, ಸುಗುಣಾ ಹಾಗು ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.