ETV Bharat / city

ಬಿಬಿಎಂಪಿ ಮುಖ್ಯ ಕಾರ್ಯದರ್ಶಿ ಪೂರ್ವ ವಲಯದ ವಾರ್ ರೂಂ ಪರಿಶೀಲನೆ - ಬೆಂಗಳೂರಿನಲ್ಲಿ ಕೋವಿಡ್‌ ವಾರ್‌ ರೂಂ

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಾಲಿಕೆ ಮುಖ್ಯ ಕಾರ್ಯದರ್ಶಿ ಪೂರ್ವ ವಲಯದ ವಾರ್ ರೂಂ ಗೆ ಭೇಟಿ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

BBMP Chief secretary visited covid-19 war room in Bangalore
ಬಿಬಿಎಂಪಿ ಮುಖ್ಯ ಕಾರ್ಯದರ್ಶಿ ಪೂರ್ವ ವಲಯದ ವಾರ್ ರೂಂ ಪರಿಶೀಲನೆ
author img

By

Published : Apr 25, 2021, 1:58 AM IST

ಬೆಂಗಳೂರು: ಪಾಲಿಕೆ ಮುಖ್ಯ ಕಾರ್ಯದರ್ಶಿ ನಿನ್ನೆ ಪೂರ್ವ ವಲಯದ ವಾರ್ ರೂಂ ಗೆ ಭೇಟಿ ನೀಡಿದ್ದರು. ವಾರ್ ರೂಂ ಕಾರ್ಯ ಚಟುವಟಿಕೆಗಳ ಟೆಸ್ಟಿಂಗ್, ಆಸ್ಪತ್ರೆಗಳ ಹಾಸಿಗೆ ಒದಗಿಸುವ ವ್ಯವಸ್ಥೆ, ಆಂಬ್ಯುಲೆನ್ಸ್ ಸೇವೆ, ಹೋಂ ಐಸೋಲೇಷನ್, ಕಾಂಟ್ಯಾಕ್ಟ್ ಟ್ರೇಸಿಂಗ್‌ಗಳು ಹಾಗೂ ಹೆಲ್ಪ್ ಲೈನ್ ಸೇವೆಯ ಪ್ರತಿ ದೂರವಾಣಿ ಕರೆ ಸ್ವೀಕರಿಸಿದ ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ಒದಗಿಸುವ ವ್ಯವಸ್ಥೆಯ ಕುರಿತು‌ ಪರಿಶೀಲನೆ ನಡೆಸಿದ್ರು. ಪರಿಶೀಲಿನೆ ನಂತರ ಸದರಿ ಹೆಲ್ಪ್‌ಲೈನ್‌ಗಳ ಸಂಖ್ಯೆ ಹಾಗೂ ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಪಾಲಿಕೆ ಮುಖ್ಯ ಕಾರ್ಯದರ್ಶಿಯಿಂದ ಹಿರಿಯ ಅಧಿಕಾರಿಗಳ ಸಭೆ

ಪಾಲಿಕೆ ಮುಖ್ಯ ಕಾರ್ಯದರ್ಶಿ ಅವರು ನಿನ್ನೆ ಪರಿಶೀಲನೆ ನಡೆಸಿದ ನಂತರ ಹಿರಿಯ ಅಧಿಕಾರಿಗಳೂಂದಿಗೆ ಸಭೆ ನಡೆಸಿದರು. ಈಗಿರುವ ಆಸ್ಪತ್ರೆಗಳಲ್ಲಿರುವ ಹಾಸಿಗೆ ಸೌಲಭ್ಯ ಹೆಚ್ಚಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ವೆಂಟಿಲೆಟರ್ ಸೌಲಭ್ಯವುಳ್ಳ ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ಹಾಗೂ ಅಗತ್ಯ ಸೌಲಭ್ಯ ಇರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆಗೊಳಿಸಲು ಸೂಚಿಸಿದರು. ಅಲ್ಲದೆ ಸಿ.ಎಸ್.ಐ ಸಂಸ್ಥೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ಥಳ ಒದಗಿಸಲು ಮುಂದೆ ಬಂದಿದ್ದು, ಸದರಿ ಸ್ಥಳದಲ್ಲಿ ಕೂಡಲೇ ಹಾಸಿಗೆ ಇನ್ನಿತರೆ ವ್ಯವಸ್ಥೆಗೊಳಿಸಲು ಹೇಳಿದರು. ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಎಲ್ಲಾ ಕೊವೀಡ್ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ 10 ರಷ್ಟು ಅಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.

BBMP Chief secretary visited covid-19 war room in Bangalore
ಬಿಬಿಎಂಪಿ ಮುಖ್ಯ ಕಾರ್ಯದರ್ಶಿ ಪೂರ್ವ ವಲಯದ ವಾರ್ ರೂಂ ಪರಿಶೀಲನೆ

ಇದನ್ನೂ ಓದಿ: ಲಾಕ್‌ಡೌನ್‌ ಭೀತಿಯಿಂದ ಮತ್ತೆ ಕಾರ್ಮಿಕರ ವಲಸೆ?; ಕಳೆದ ಬಾರಿ ರಾಜ್ಯದಿಂದ ಗುಳೇ ಹೋದವರೆಷ್ಟು?

ಬಳಿಕ ದೊಮ್ಮಲೂರು ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಟೆಸ್ಟಿಂಗ್ ಬಗ್ಗೆ ವಿಚಾರಿಸಿದರು. ಸದರಿ ಕೇಂದ್ರದಲ್ಲಿ ಟೆಸ್ಟಿಂಗ್ ಫಲಿತಾಂಶ ತಿಳಿಯಲು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವವರಿಗೆ ಸರಿಯಾದ ಮಾಹಿತಿ ಒದಗಿಸಲು ಸೂಚಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿರುವ 3 ವಲಯಗಳಲ್ಲಿ 23 ರಿಂದ 25 ಲಕ್ಷ ಜನ ಸಂಖ್ಯೆ ವಾಸಿಸುತ್ತಿದ್ದು, ಹೊರ ವಲಯಗಳಲ್ಲಿ 10 ಲಕ್ಷ ಜನಸಂಖ್ಯೆ ವಾಸಿಸುತ್ತಿದ್ದಾರೆ. ಈ ಸಂಬಂಧ ಪಾಲಿಕೆಯ ಆಯಾ ವಲಯ ಮಟ್ಟದ ವಾರ್ ರೂಂನಲ್ಲಿ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್, ಯಾರಿಗೆ ಹಾಸಿಗೆ ಬೇಕು, ಯಾರಿಗೆ ಹಾಸಿಗೆ ಬೇಡ ಎಂಬ ವ್ಯವಸ್ಥೆ, ಹೋಮ್ ಐಸೋಲೇಟ್ ನಲ್ಲಿರುವವರ ಮೇಲೆ ನಿಗಾವಹಿಸುವ ವ್ಯವಸ್ಥೆ, ಐಸೋಲೇಟ್‌ನಲ್ಲಿ ಇರುವವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುವುದು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಆರೋಗ್ಯ ಮಿತ್ರ ಎಲ್ಲಾ ಆಸ್ಪತ್ರೆಗಳಲ್ಲಿ ಇರಬೇಕು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಹಾಸಿಗೆಗಳ ಸಂಖ್ಯೆ ಹೆಚ್ಚಾಗಬೇಕು ಹಾಗೂ ಬೆಡ್ ಅಲಾಟ್ಮೆಂಟ್ ಸಿಸ್ಟಂ ಅನ್ನು ಉನ್ನತೀಕರಿಸಲು ಪಾಲಿಕೆ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಅದರಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.