ಬೆಂಗಳೂರು: ಅನ್‌ಲಾಕ್ ನಂತರ ನಗರದಲ್ಲಿ ದಿನೇ ದಿನೇ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂದಾಗಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಮಾತನಾಡಿದ ಅವರು, ಯುನಿಯನ್ ಬ್ಯಾಂಕ್ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಖುದ್ದು ಕೆಲ ಠಾಣೆಗಳಿಗೆ ಭೇಟಿ ನೀಡಿದ್ದೇನೆ. ಇಂತಹ ಘಟನೆ ನಡೆಯಲು ಕಾರಣವೇನು?. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಎಂಬುವುದರ ಬಗ್ಗೆ ಇನ್ಸ್ಪೆಕ್ಟರ್ಗೆ ಕೇಳಿದ್ದೇನೆ ಎಂದರು.
ಅಶೋಕ್ ನಗರ ಠಾಣೆ ವ್ಯಾಪ್ತಿಯಲ್ಲಿ ಅರುಣ್ ಕುಮಾರ್ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಬಬ್ಲಿ ಎಂಬಾತನ ಬಂಧನ ಮಾಡದ ವಿಚಾರ ಸಂಬಂಧ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಅವರಿಂದ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಪ್ರತ್ಯೇಕ ತನಿಖೆ ಮಾಡಲು ಸಿಸಿಬಿ ಡಿಸಿಪಿ ಬಸವರಾಜ ಅಂಗಡಿ ಅವರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಬಬ್ಲಿಯನ್ನ ಬಂಧಿಸದಿರಲು ನಿಖರ ಕಾರಣಗಳೇನು? ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಬರ್ಬರ ಕೊಲೆ!