ETV Bharat / city

17ಸಚಿವರಿಗೆ ಮೂವರು ಡಿಸಿಎಂ, ಬಾಕಿ ಮಂತ್ರಿ ಸ್ಥಾನಕ್ಕೆ ಮತ್ತೆ ಮೂವರಾ?: ದಿನೇಶ್ ಗುಂಡೂರಾವ್ ವ್ಯಂಗ್ಯ

ಗೆಲ್ಲದ ಮತ್ತು ಹಲವಾರು ಆರೋಪಗಳಿರುವ ವ್ಯಕ್ತಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಿದ್ದಾರೆ. ಈಶ್ವರಪ್ಪ, ಅಶೋಕ್​ ಅವರು ಇದನ್ನು ಒಪ್ಪಿಕೊಳ್ಳಬಾರದು. ಹಿರಿಯರಾದ ಜಗದೀಶ್ ಶೆಟ್ಟರ್ ಅವರಿಗೆ ನೀಡಬೇಕಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

August 29 coAugust 29 congress protest against bjp at Bangalorengress protest against bjp at Bangalore
author img

By

Published : Aug 27, 2019, 7:50 PM IST

ಬೆಂಗಳೂರು: ಅರ್ಧಕ್ಕೂ ಹೆಚ್ಚು ಪ್ರಮುಖ ಇಲಾಖೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 17 ಮಂದಿಗೆ ಮೂವರು ಉಪಮುಖ್ಯಮಂತ್ರಿ ಆಗಿದ್ದಾರೆ. ಉಳಿದ 17ಕ್ಕೆ ಇನ್ನೂ ಮೂವರು ಡಿಸಿಎಂ ಆಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹೋದಲೆಲ್ಲ ಶಾಸಕರು ಬೆಂಬಲಿಸುತ್ತಿಲ್ಲ. ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ವಪಕ್ಷ ಸಭೆ ಕರೆದಿಲ್ಲ. ಕೇಂದ್ರದಿಂದ ಅನುದಾನ ಬಂದಿಲ್ಲ, ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ಆಡಳಿತವಿರುವ ಕಾರಣ ಬಿಜೆಪಿ ಆಡಳಿತ ಯಂತ್ರ ಸಂಪೂರ್ಣ ನಾಶವಾಗಿದೆ ಎಂದು ಆರೋಪಿಸಿದರು.

ಇದರಿಂದ ಸರ್ಕಾರದ ನಿಲುವು, ವಿರೋಧ ಪಕ್ಷಕ್ಕೆ ನೀಡದ ಗೌರವ ಖಂಡಿಸಿ ನಾಡಿದ್ದು (ಆಗಸ್ಟ್​ 29) ಬೆಳಗ್ಗೆ10ರಿಂದ ಸಂಜೆ 6ಗಂಟೆ ತನಕ ಮೌರ್ಯ ವೃತ್ತದಲ್ಲಿ ಸತ್ಯಗ್ರಹ ನಡೆಸುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಪ್ರಧಾನಿಗೆ ವರದಿ: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವರದಿಯನ್ನು ಶೀಘ್ರದಲ್ಲೇ ರಾಜ್ಯಪಾಲರಿಗೆ ನೀಡಲಿದ್ದೇವೆ. ಅವರ ಮೂಲಕ ಪ್ರಧಾನಿ ಮೋದಿಗೆ ವರದಿ ಒಪ್ಪಿಸುತ್ತೇವೆ. ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ, ರಾಜ್ಯದ ಕಾರ್ಯಕರ್ತರನ್ನು ಒಗ್ಗೂಡಿಸಿ ದಿಲ್ಲಿಯ ಜಂತರ್ ಮಂತರ್​ಗೆ ತೆರಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಅತಿವೃಷ್ಟಿ ಜೊತೆಗೆ ಬರ ತೀವ್ರ ತಾಂಡವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಕೆಟ್ಟ ಆಡಳಿತ ನಡೆಸುತ್ತಿರುವುದು ಬೇಸರದ ಸಂಗತಿ. ಮೈತ್ರಿ ಸರ್ಕಾರ ಬೀಳಿಸಲು ನಾನಾ ತಂತ್ರಗಳನ್ನು ನಡೆಸಿದ್ರು. ಸುಖಾ ಸುಮ್ಮನೆ ಆರೋಪ ಮಾಡುತ್ತಾ, ಆಪರೇಷನ್ ಕಮಲ ಮಾಡಿ ಅದರಲ್ಲಿ ಯಶಸ್ವಿಯಾಗಿ ಭ್ರಷ್ಟಾಚಾರದಿಂದ ಸರ್ಕಾರ ರಚಿಸಿಕೊಂಡರು ಎಂದು ಟೀಕಿಸಿದರು.

ಗೆಲ್ಲದ ಮತ್ತು ಹಲವಾರು ಆರೋಪಗಳಿರುವ ವ್ಯಕ್ತಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಿದ್ದಾರೆ. ಈಶ್ವರಪ್ಪ, ಅಶೋಕ್​ ಅವರು ಇದನ್ನು ಒಪ್ಪಿಕೊಳ್ಳಬಾರದು. ಹಿರಿಯರಾದ ಜಗದೀಶ್ ಶೆಟ್ಟರ್ ಅವರಿಗೆ ನೀಡಬೇಕಾಗಿತ್ತು. ಹಿಟ್ಲರ್ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ದೆಹಲಿಯಿಂದ ಬರುವ ಆದೇಶಕ್ಕೆ ಯಡಿಯೂರಪ್ಪ ತಲೆದೂಗಬೇಕಾಗಿದೆ ಎಂದರು.

Intro:newsBody:ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಹಿಟ್ಲರ್ ಶಾಹಿ ಆಡಳಿತ ನಡೆಯುತ್ತಿದೆ ದಿನೇಶ್ ಗುಂಡೂರಾವ್

ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯ ಹಿಟ್ಲರ್ ಶಾಹಿ ಆಡಳಿತ ನಡೆಯುತ್ತಿದೆ. ಆಡಳಿತ ಯಂತ್ರ ನಾಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಿಜೆಪಿಯ ಸಚಿವರು ಹೋದ ಕಡೆಯೆಲ್ಲಾ ಶಾಸಕರು ಬೆಂಬಲಿಸಿ ಬರುತ್ತಿಲ್ಲ. ಅರ್ಧಕ್ಕೂ ಹೆಚ್ಚು ಪ್ರಮುಖ ಇಲಾಖೆಗಳನ್ನು ಸಿಎಂ ಬಿಎಸ್ವೈ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 17 ಮಂದಿಗೆ ಮೂವರು ಉಪಮುಖ್ಯಮಂತ್ರಿ ಆಗಿದ್ದಾರೆ. ಉಳಿದ 17 ಕ್ಕೆ ಇನ್ನೂ ಮೂವರು ಡಿಸಿಎಂ ಆಗಬಹುದು. ಸರ್ಕಾರದ ಇಂಜಿನ್ನೇ ಆನ್ ಆಗಿಲ್ಲ. ಕೀ ಹಾಕಿ ತಿರುಗಿಸುತ್ತಿದ್ದಾರೆ.
ಪ್ರವಾಹ ಪರಿಸ್ಥಿತಿಯಿಂದ ಸಮಸ್ಯೆಗೆ ಒಳಗಾಗಿರುವ ಭಾಗಗಳಿಗಾಗಿ ಸರ್ಕಾರ ಸ್ಪಂಧಿಸಿಲ್ಲ, ಸರ್ವಪಕ್ಷ ಸಭೆ ಕರೆದಿಲ್ಲ, ಕೇಂದ್ರದಿಂದ ಅನುದಾನ ಬಂದಿಲ್ಲ, ರಾಷ್ಟ್ರೀಯ ವಿತ್ತು ಎಂದು ಘೋಷಣೆಯಾಗಿಲ್ಲ. ಇದರಿಂದ ಸರ್ಕಾರದ ನಿಲುವು, ವಿರೋಧ ಪಕ್ಷಕ್ಕೆ ನೀಡದ ಗೌರವ ಖಂಡಿಸಿ ನಾಡಿದ್ದು ಬೆಳಗ್ಗೆ10 ರಿಂದ ಸಂಜೆ 6 ಗಂಟೆವರೆಗೆ ಮೌರ್ಯ ವೃತ್ತದಲ್ಲಿ ಬೃಹತ್ ದರಣಿ ಸತ್ಯಾಗ್ರಹ ನಡೆಸುತ್ತೇವೆ. ಸರ್ಕಾರದ ನಿಲುವು ಖಂಡಿಸಿ ಹಿರಿಯ ನಾಯಕರ ಸಮ್ಮುಖದಲ್ಲಿ ಧರಣಿ ನಡೆಸುತ್ತೇವೆ ಎಂದರು.
ಪ್ರಧಾನಿಗೆ ವರದಿ
ನಾವು ಹಲವರು ವಿವಿಧ ಜಿಲ್ಲೆಗೆ ಭೇಟಿ ಕೊಟ್ಟು ಬಂದಿದ್ದೇವೆ. ನಮ್ಮ ವರದಿ ಸಿದ್ಧಪಡಿಸಿ ರಾಜ್ಯಪಾಲರಿಗೆ ನೀಡಲಿದ್ದೇವೆ. ಅವರ ಮೂಲಕ ಪ್ರಧಾನಿ ಗಳಿಗೆ ವರದಿ ಒಪ್ಪಿಸುತ್ತೇವೆ. ಕೇಂದ್ರ ಸರ್ಕಾರದ ನಿಲುವು ಇದೇ ರೀತಿ ಮುಂದುವರಿದರೆ, ಜನರ ಸಮಸ್ಯೆಗೆ ಸ್ಪಂಧಿಸದಿದ್ದರೆ ನಾವು ಎಲ್ಲ ರಾಜ್ಯದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ದಿಲ್ಲಿಯ ಜಂತರ್ ಮಂತರ್ ಗೆ ತೆರಳಿ ಪ್ರತಿಭಟನೆ ನಡೆಸಬೇಕಾಗಿ ಬರಲಿದೆ ಎಂದು ವಿವರಿಸಿದರು.
ದಿಗ್ಭ್ರಮೇ ಆಗ್ತಿದೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆದಮೇಲೆ ಎಲ್ಲರಿಗೂ ದಿಗ್ಭ್ರಮೇ ಆಗ್ತಿದೆ. ರಾಜ್ಯದಲ್ಲಿ ಅತಿವೃಷ್ಟಿ ಜೊತೆಗೆ ಬರ ಇದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡಿದ್ರು. ಇವರ ಆಡಳಿತ ನೋಡಿದ್ರೆ ಇಂತಹ ಕೆಟ್ಟ ಆಡಳಿತ ಇದುವರೆಗೂ ನಡೆದಿಲ್ಲ. ನಮ್ಮ ಮೇಲೆ ಸುಳ್ಳಿನ ಆರೋಪ ಮಾಡಿದ್ರು , ಸರ್ಕಾರವನ್ನು ಬೀಳಿಸಲು ತಂತ್ರಗಳನ್ನು ಮಾಡುತ್ತಿದ್ರು. ಅವರಿಗೆ ಅವಾಗ ಆಡಳಿತ ಸರಿಯಾಗೆ ನಡೆಯಬೇಕು ಅನ್ನುವುದಕ್ಕಿಂತ ಬೀಳಿಸಬೇಕು ಎಂಬುದಿತ್ತು. ಆಪರೇಷನ್ ಕಮಲ ಮಾಡಿ ಅದರಲ್ಲಿ ಯಶಸ್ವಿಯಾದ್ರು. ಭ್ರಷ್ಟಾಚಾರದಿಂದ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ನೀವು ಯಾರನ್ನು ಕಟ್ಟಿಕೊಂಡು ಅಧಿಕಾರ ರಚನೆ ಮಾಡುತ್ತಿದ್ದಿರ ಅದು ಸಾಧ್ಯ ಇಲ್ಲ. ಯಡಿಯೂರಪ್ಪ ಅವರು ಒನ್ ಮ್ಯಾನ್ ಆರ್ಮಿ ಆಗಿದ್ದರು. ಆಗ ಹೋಲಿಕೆ ಮಾಡಿದ್ರೆ ಇವಾಗ ಇನ್ನೂ ಹದಗೆಟ್ಟಿದೆ. ಇವಾಗ ಮಂತ್ರಿಗಾಗಿ ಪಕ್ಷದಲ್ಲಿ ಕಿತ್ತಾಟ ಬಂದಿದೆ. ಗೆಲ್ಲದ ವ್ಯಕ್ತಿಯನ್ನು ಕರೆದುಕೊಂಡು ಬಂದು ಮಂತ್ರಿ ಮಾಡಿದ್ದಾರೆ. ಅವರ ಮೇಲೆ ಹಲವಾರು ಆರೋಪಗಳಿವೆ ಆದರು ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಈಶ್ವರಪ್ಪ , ಅಶೋಕ್ ಅವರು ಇದನ್ನು ಒಪ್ಪಿಕೊಳ್ಳಬಾರದು. ಜಗದೀಶ್ ಶೆಟ್ಟರ್ ಅವರು ಹಿರಿಯರಿದ್ದಾರೆ ಅವರಿಗೆ ನೀಡಬೇಕಾದ ಉನ್ನತ ಹುದ್ದೆಯನ್ನು ಬೇರೆಯವರಿಗೆ ನೀಡಿದ್ದಾರೆ. ಹಿಟ್ಲರ್ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ದೆಹಲಿಯಿಂದ ಏನ್ ಆದೇಶ ಬರುತ್ತೆ ಅದನ್ನು ಯಡಿಯೂರಪ್ಪ ಅವರು ಒಪ್ಪಿಕೊಳ್ಳಬೇಕಾಗುತ್ತದೆ. ಇವತ್ತು ಪ್ರಜಾಪ್ರಭುತ್ವ ಇಲ್ಲದಾಗಿದೆ ಎಂದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿಎಸ್ ಉಗ್ರಪ್ಪ ಮತ್ತಿತರು ಉಪಸ್ಥಿತರಿದ್ದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.