ETV Bharat / city

ಈ ವರ್ಷ ಅಪರಾಧ ಪ್ರಮಾಣದಲ್ಲಿ ಇಳಿಕೆ: ಸೈಬರ್, ಡ್ರಗ್ಸ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

author img

By

Published : Dec 29, 2020, 10:54 PM IST

ಕೆಲಸ ಕಳೆದುಕೊಂಡಿದ್ದ ಕೆಲವರು ಲಾಕ್​​ಡೌನ್​ ಅವಧಿಯನ್ನು ದುರುಪಯೋಗಪಡಿಸಿಕೊಂಡು ಅಡ್ಡ ದಾರಿಗಳತ್ತ ಹೆಜ್ಜೆ ಹಾಕಿದರು. ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾದರೂ ಸೈಬರ್ ಅಪರಾಧ ಹಾಗೂ ಡ್ರಗ್ಸ್​​ ಪ್ರಕರಣಗಳು ಕಳೆದ ವರ್ಷಕ್ಕಿಂತ ತುಸು ಏರಿಕೆ ಕಂಡಿವೆ.

annual-crime-report-of-the-year-2020
ಸೈಬರ್, ಡ್ರಗ್ ಪ್ರಕರಣದ ಸಂಖ್ಯೆಯಲ್ಲಿ ತುಸು ಏರಿಕೆ

ಬೆಂಗಳೂರು: ಕೊರೊನಾ ಬಂದ ನಂತರ ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಮಾಣ ಇಳಿಕೆ ಕಂಡಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಮಾರ್ಚ್​​​ 25ರಿಂದ ಲಾಕ್​ಡೌನ್​ ಜಾರಿಯಾದ ನಂತರ ಸುಮಾರು ಏಳೆಂಟು ತಿಂಗಳ ಕಾಲ ಜನರ ಜೀವನ ಅಸ್ತವ್ಯಸ್ತಗೊಂಡಿತು. ಈ ಸಂದರ್ಭದಲ್ಲಿ ಪುಡಿರೌಡಿಗಳು ಕೊರೊನಾಗೆ ಹೆದರಿ ಅಡಗಿಕೊಂಡಿದ್ದರು. ನ್ಯಾಯಾಲಯದ ಚಟುವಟಿಕೆ ನಿಂತ ಕಾರಣ ಜೈಲಿನಿಂದ ಬಿಡುಗಡೆಯಾಗಬೇಕಿದ್ದವರಿಗೆ ಜಾಮೀನು ಸಿಗದೆ ಸೆರೆ ವಾಸದಲ್ಲೇ ಇರಬೇಕಾಗಿ ಬಂತು.

ಬಹುತೇಕ ‌ಮಂದಿ ಕೆಲಸ ಕಳೆದುಕೊಂಡಿದ್ದವರು ಲಾಕ್​​ಡೌನ್​ ಅವಧಿಯನ್ನು ದುರುಪಯೋಗಪಡಿಸಿಕೊಂಡರು. ಹಣದ ಅನಿವಾರ್ಯತೆಯಿಂದ ಅಡ್ಡ ದಾರಿಗಳತ್ತ ಹೆಜ್ಜೆ ಹಾಕಿದರು. ಲಾಕ್​​ಡೌನ್​ನಲ್ಲಿ ಕಡಿವಾಣ ಬಿದ್ದಿದ್ದ ಅಪರಾಧ ಪ್ರಕರಣಗಳು (ಮನೆಗಳ್ಳತನ, ಸರಗಳ್ಳತನ, ಕೊಲೆ, ವಾಹನ ಕಳ್ಳತನ...) ಅನ್​ಲಾಕ್​ ನಂತರ ಹೆಚ್ಚಾದವು. ಅಂತಹವರನ್ನು ಹೆಡೆಮುರಿ ಕಟ್ಟುವಲ್ಲಿ ನಮ್ಮ ಬೆಂಗಳೂರು ಪೊಲೀಸರು ಕೂಡ ಯಶಸ್ವಿಯಾಗಿದ್ದಾರೆ. ಅಪರಾಧ ಪ್ರಕರಣಗಳು ಕಡಿಮೆಯಾದರೂ ಸೈಬರ್ ಅಪರಾಧ ಹಾಗೂ ಡ್ರಗ್ಸ್​​ ಪ್ರಕರಣಗಳು ಈ ಬಾರಿ ಕಳೆದ ವರ್ಷಕ್ಕಿಂತ ತುಸು ಏರಿಕೆ ಕಂಡಿವೆ.

ಇದನ್ನೂ ಓದಿ...ತುರ್ತು ಸಾಲದ ಆ್ಯಪ್​​​ಗಳಿಂದ ದೂರಪಯೋಗ: ಆರ್ಥಿಕ ನೆರವಿಗೆ ಬ್ಯಾಂಕ್​ಗಳೇ ಉತ್ತಮ

ಲಾಕ್​​ಡೌನ್​ ಸಂದರ್ಭದಲ್ಲಿ ಬಹುತೇಕ ಮಂದಿ ವರ್ಕ್​​ ಫ್ರಂ ಮಾಡಿದರು. ಆನ್​​ಲೈನ್​​ ವಹಿವಾಟು, ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ, ಆನ್​ಲೈನ್ ತರಗತಿಗಳು ಹೆಚ್ಚಾದ ಕಾರಣ ಸೈಬರ್ ಖದೀಮರ ಹಾವಳಿಯೂ ಹೆಚ್ಚಾಯಿತು. ಇದನ್ನೇ ಬಂಡವಾಳ ‌ಮಾಡಿಕೊಂಡ ಖದೀಮರು ಬಹುತೇಕ ಜನರ ಖಾಸಗಿ ಮಾಹಿತಿಗೆ ಕನ್ನ ಹಾಕಿ ಕೋಟ್ಯಂತರ ರೂಪಾಯಿ ದೋಚಿದ್ದಾರೆ. ಹಾಗೆಯೇ ಮದ್ಯದಂಗಡಿಗಳು ಬಂದ್​ ಆಗಿದ್ದ ಕಾರಣ ಬಹುತೇಕರು ಆನ್​​ಲೈನ್ ಮುಖಾಂತರ ಡ್ರಗ್ಸ್​​ ತರಿಸಿಕೊಳ್ಳುತ್ತಿದ್ದರು. ಈ ವರ್ಷ ಎನ್​ಸಿಬಿ (ಮಾದಕ ವಸ್ತು ನಿಯಂತ್ರಣ ಬ್ಯುರೋ) ಹಾಗೂ ಬೆಂಗಳೂರು ಪೊಲೀಸರು ಉತ್ತಮ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

Annual crime report of the year 2020
ಅಪರಾಧ ಪ್ರಕರಣಗಳ ವಾರ್ಷಿಕ ವರದಿ

ಸೈಬರ್ ಅಪರಾಧ: ಕೊರೊನಾ ಸಮಯದಲ್ಲಿ ಬಹಳ ಮಂದಿ ನಿರುದ್ಯೋಗಿಗಳಾದರು. ಇನ್ನು ಕೆಲವರು ವರ್ಕ್ ಫ್ರಮ್ ಹೋಂನಲ್ಲಿ ನಿರತರಾದರು. ಹ್ಯಾಕರ್ಸ್​ ಇದನ್ನು​​​ ಸದುಪಯೋಗ ಮಾಡಿಕೊಂಡು ಬಹಳಷ್ಟು ಮಂದಿಗೆ ವಂಚಿಸಿದರು. ಇನ್ನು ಈ ವರ್ಷ ಸೈಬರ್ ಅಪರಾಧ ಪ್ರಕರಣಗಳತ್ತ ಕಣ್ಣಾಡಿಸಿದರೆ 8,167 ಪ್ರಕರಣ ದಾಖಲಾಗಿದ್ದು, ಅದರಲ್ಲಿ 201 ಪ್ರಕರಣಗಳು ಪತ್ತೆಯಾಗಿವೆ. ತುರ್ತು ಸಾಲ ನೀಡುವುದಾಗಿ ವಂಚನೆ, ಕೆಲಸ ಕೊಡಿಸುವುದಾಗಿ ಆಮಿಷ, ಮ್ಯಾಟ್ರಿಮೋನಿಯಲ್ ದೋಖಾ, ಅಶ್ಲೀಲ ಸಂದೇಶ, ಫೋಟೋ ರವಾನೆಯಂತಹ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚು ದಾಖಲಾದ ಜಿಲ್ಲೆಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮೈಸೂರು ನಗರ, ಮಂಗಳೂರು ನಗರ, ಚಿಕ್ಕಮಗಳೂರು, ಕೋಲಾರ, ಧಾರವಾಡ, ದಾವಣಗೆರೆ, ಶಿವಮೊಗ್ಗ ಹೀಗೆ ಹಲವು ಜಿಲ್ಲೆಗಳಿವೆ.

ಡ್ರಗ್ಸ್​ ಪ್ರಕರಣ: ಜನವರಿಯಿಂದ ಈವರೆಗೂ ದಾಖಲಾದ ಪ್ರಕರಣಗಳನ್ನು ನೋಡುವುದಾದರೆ ಬೆಂಗಳೂರಿನ 7 ವಿಭಾಗಗಳಲ್ಲಿ 735 ಪ್ರಕರಣಗಳು ದಾಖಲಾಗಿವೆ. ಆದರೆ ಪೊಲೀಸರು ಹೇಳುವ ಪ್ರಕಾರ ಕೊರೊನಾವಧಿಯಲ್ಲಿ ಡ್ರಗ್ಸ್​​ ಪೆಡ್ಲರ್​​​ಗಳು ‌ಪೊಲೀಸರ ಕಣ್ತಪ್ಪಿಸಿ ಕೊಕೇನ್, ಅಫೀಮು, ಗಾಂಜಾ, ಹಶೀಶ್, ಹೆರಾಯಿನ್, ಎಲ್​​ಎಸ್​​ಡಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಈ ವಿಚಾರ ತಿಳಿದು ಸ್ಯಾಂಡಲ್​​ವುಡ್​​ ನಟಿಮಣಿರು ಮತ್ತು ಅವರ ಆಪ್ತರನ್ನು ಖೆಡ್ಡಾಕ್ಕೆ ಕೆಡವಲಾಯಿತು.

ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​

ಸಂಚಾರ ನಿಯಮ ಉಲ್ಲಂಘನೆ: ನಗರ ಸಂಚಾರಿ ಪೊಲೀಸರು ಈ ವರ್ಷ 732489 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದು, ₹ 83,22,22,910 ರೂ. ದಂಡ ಸಂಗ್ರಹಿಸಿದ್ದಾರೆ. ಲಾಕ್​​ಡೌನ್​ ಸಮಯದಲ್ಲಿ ಕದ್ದುಮುಚ್ಚಿ ಓಡಾಡಿದವರ ಸಂಖ್ಯೆಯೇ ಅಧಿಕವಾಗಿದೆ. ಆದರೆ ಪೊಲೀಸರು ತಂತ್ರಜ್ಞಾನದ ಮುಖಾಂತರ ಸಿಗ್ನಲ್ ಬಳಿ‌ ಇರುವಂತಹ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಬಹುತೇಕ ಸವಾರರಿಗೆ ದಂಡ ವಿಧಿಸಿ ಮನೆ ಬಾಗಿಲಿಗೇ ನೋಟಿಸ್ ನೀಡಿ ದಂಡ ವಸೂಲಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.