ETV Bharat / city

ಬೆಂಗಳೂರಲ್ಲಿ ಮರ್ಡರ್: ಪಾರ್ಟಿ ಮಾಡುವಾಗಲೇ ಸ್ನೇಹಿತನ ಪ್ರಾಣ ತೆಗೆದ - ಬೆಂಗಳೂರು ಕ್ರೈಂ ನ್ಯೂಸ್

ಸ್ನೇಹಿತರಾಗಿದ್ದ ನಿತೇಶ್ ಹಾಗೂ ಪ್ರಶಾಂತ್ ತಡರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು.‌ ಕುಡಿದ ಅಮಲಿನಲ್ಲಿ ನಿತೇಶ್ ಕಾಲಿಗೆ ಒದ್ದಿದ್ದಾನೆ. ಇದರಿಂದ ಅಸಮಾಧಾನಗೊಂಡು ಪ್ರಶಾಂತ್ ಜಗಳ ತೆಗೆದ. ನಂತರ ನಡೆದಿದ್ದು ಕೊಲೆ.

ಬೆಂಗಳೂರಲ್ಲಿ ಕೊಲೆ
ಬೆಂಗಳೂರಲ್ಲಿ ಕೊಲೆ
author img

By

Published : Aug 20, 2021, 10:27 AM IST

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ದಿನವೇ ನಗರದಲ್ಲಿ ನೆತ್ತರು ಹರಿದಿದೆ‌. ತಡರಾತ್ರಿ ಕುಡಿದ ಅಮಲಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೇವರಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಡಿ.ಜೆ ಹಳ್ಳಿಯ ಶ್ರೀನಿವಾಸನಗರ ನಿವಾಸಿ ನಿತೇಶ್ ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಮೃತರ ಸ್ನೇಹಿತ ಪ್ರಶಾಂಶ್​​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಹಿತರಾಗಿದ್ದ ನಿತೇಶ್ ಹಾಗೂ ಪ್ರಶಾಂತ್ ತಡರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು.‌ ಕುಡಿದ ಅಮಲಿನಲ್ಲಿ ನಿತೇಶ್ ಕಾಲಿಗೆ ಒದ್ದಿದ್ದಾನೆ. ಇದರಿಂದ ಅಸಮಾಧಾನಗೊಂಡು ಪ್ರಶಾಂತ್ ಜಗಳ ತೆಗೆದಿದ್ದಾನೆ.

ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಅಲ್ಲೇ ಇದ್ದ ಹಾಲೋ ಬ್ರಿಕ್ಸ್‌ ಅನ್ನು ನಿತೇಶ್ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪ್ರಶಾಂತ್ ಸ್ಥಳದಿಂದ ಕಾಲ್ಕಿತ್ತಿದ್ದ ಎನ್ನಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಮೆಟ್ಟಿಲಿಂದ ಬಿದ್ದಳೆಂದು ಆಸ್ಪತ್ರೆಗೆ ಸೇರಿಸಿದ ಪತಿ; ಆಕೆ ಸತ್ತಾಗ ಬಯಲಾಯಿತು ಕೊಲೆ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.