ETV Bharat / city

ಕೊರೊನಾ ತಂದ ಸಂಕಷ್ಟ... ಕೆಎಸ್ಆರ್​ಟಿಸಿಗೆ ಕೋಟ್ಯಂತರ ರೂ. ನಷ್ಟ

author img

By

Published : Mar 22, 2020, 11:35 PM IST

ಕೊರೊನಾ‌ ಎಫೆಕ್ಟ್​ನಿಂದಾಗಿ ಕೆಎಸ್ಆರ್​ಟಿಸಿ ಇದುವರೆಗೆ 28 ಕೋಟಿ ರೂ. ನಷ್ಟ ಅನುಭವಿಸಿದೆ.

KSRTC
ಕೆಎಸ್ಆರ್​ಟಿಸಿ

ಬೆಂಗಳೂರು: ಕೊರೊನಾ‌ ಎಫೆಕ್ಟ್​ನಿಂದಾಗಿ ಜನಸಾಮಾನ್ಯರು ಸಾರಿಗೆ ಸೇವೆ ಬಳಸಲು ಹಿಂದೇಟು ಹಾಕುತ್ತಿದ್ದು, ಹಿಗಾಗಿ ಕೆಎಸ್ಆರ್​ಟಿಸಿ ಇದುವರೆಗೆ 28 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಅಂದಹಾಗೆ ಭಾನುವಾರ ಮತ್ತು ಸೋಮವಾರ ಕೆಎಸ್ಆರ್​ಟಿಸಿಯಿಂದ ಯಾವುದೇ ಬಸ್ ಓಡಾಟ‌ ಇರುವುದಿಲ್ಲ(ನಗರ ಸಾರಿಗೆ,‌ ಗ್ರಾಮಾಂತರ,‌ ಅಂತರನಗರ ಎಲ್ಲಾ ಸೇರಿ). ಮಾರ್ಚ್ 24 ರಂದು ಹವಾನಿಯಂತ್ರಿತ ಬಸ್ಸುಗಳನ್ನು ಹೊರತುಪಡಿಸಿ, ಇನ್ನೆಲ್ಲಾ ಬಸ್ಸುಗಳ‌ ಕಾರ್ಯಾಚರಣೆ ಪ್ರಾರಂಭವಾಗುತ್ತದೆ‌. ಮಾರ್ಚ್ 31 ರವರೆಗೆ ಯಾವುದೇ ಹವಾನಿಯಂತ್ರಿತ ಬಸ್ಸುಗಳು ಕಾರ್ಯಾಚರಣೆ ಇರುವುದಿಲ್ಲ.

ಮಾರ್ಚ್ 31ರವರೆಗೆ ನಮ್ಮ ಮೆಟ್ರೋ ಸೇವೆ ಸ್ಥಗಿತ...

ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಾರ್ಚ್ 31 ರವರೆಗೆ ನಮ್ಮ ಮೆಟ್ರೋ ಸೇವೆ ಸಂಪೂರ್ಣ ಸ್ತಬ್ಧವಾಗಲಿದೆ. ಬೆಳಗ್ಗೆ ಹಾಗೂ ಸಂಜೆ ರೈಲುಗಳು ಓಡಾಡಲಿವೆ. ಇದು ನಿತ್ಯ ಪರೀಕ್ಷೆಗಾಗಿ ಇದ್ದು, ಜನರಿಗೆ ಪ್ರವೇಶವಿರುವುದಿಲ್ಲ ಅಂತ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಮೆಟ್ರೋ ಸೇವೆ ಸ್ಥಗಿತ
ಮೆಟ್ರೋ ಸೇವೆ ಸ್ಥಗಿತ

ಬಿಎಂಟಿಸಿ ಎಸಿ ಬಸ್ಸುಗಳ ಸಂಚಾರ ಸ್ಥಗಿತ...

ಸೋಮವಾರದಿಮದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಎಲ್ಲ ಹವಾನಿಯಂತ್ರಣ ವಾಹನಗಳನ್ನು ಮಾರ್ಚ್ 31 ರವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು. ಸಂಚಾರ ದಟ್ಟಣೆ ಮತ್ತು ಪ್ರಯಾಣಿಕರ ಅವಶ್ಯಕತೆಗನುಗುಣವಾಗಿ 50% ಸಾಮಾನ್ಯ ಸಾರಿಗೆ ಸೌಲಭ್ಯವನ್ನು ಮಾತ್ರ ಕಲ್ಪಿಸಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.