ETV Bharat / city

ಅಂಗನವಾಡಿ ಕಾರ್ಯಕರ್ತೆಯರಿಗೆ ದೀಪಾವಳಿ ಬಂಪರ್​​: 2000 ರೂ. ಗೌರವ ಧನ ಹೆಚ್ಚಿಸಿ ಸರ್ಕಾರ ಆದೇಶ

ರಾಜ್ಯ ಸರ್ಕಾರದಿಂದ ಶೇ.40 ರಷ್ಟು ಹಾಗೂ ಕೇಂದ್ರ ಸರ್ಕಾರದಿಂದ ಶೇ.60 ರಷ್ಟು ಸೇರಿಸಿ, ಅಂಗನವಾಡಿ‌ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಿಸುವ ಮೂಲಕ ಸರ್ಕಾರ, ದೀಪಾವಳಿ ಗಿಫ್ಟ್ ನೀಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ
author img

By

Published : Oct 25, 2019, 6:26 PM IST

ಬೆಂಗಳೂರು: ಅಂಗನವಾಡಿ‌ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಿಸುವ ಮೂಲಕ ಸರ್ಕಾರ, ದೀಪಾವಳಿ ಗಿಫ್ಟ್ ನೀಡಿದೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ 62, 580 ಜನ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸೇರಿ 1.28 ಲಕ್ಷ ಕಾರ್ಯಕರ್ತೆಯರಿದ್ದಾರೆ. 2018 ರ ಅಕ್ಟೋಬರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಲಾಗಿತ್ತು. ಈ ಪೈಕಿ ಶೇ.40 ರಷ್ಟು ರಾಜ್ಯ ಸರ್ಕಾರ, ಶೇ.60 ರಷ್ಟು ಕೇಂದ್ರ ಸರ್ಕಾರ ಗೌರವ ಧನ ನೀಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ 1500 ರೂ. ಹಾಗೂ ಈಗ 500 ರೂ. ಸೇರಿಸಿ 2000 ರೂ. ಗೌರವಧನ ಹೆಚ್ಚಳ‌ವಾಗಿ ನೀಡಲಾಗುವುದು.‌ ಒಂದು ವರ್ಷ ತಡೆಹಿಡಿದ ಗೌರವಧನ ಕೂಡ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ

ಯಾರಿಗೆ ಎಷ್ಟು ಹೆಚ್ಚಳ?: ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 8000 ರೂ. ಇತ್ತು. ಈಗ ರಾಜ್ಯ ಸರ್ಕಾರದ 1500 ರೂ. ಮತ್ತು ಕೇಂದ್ರ ಸರ್ಕಾರದ 500 ರೂ. ಸೇರಿ ಈಗ 10,000 ಗೌರವಧನ ಸಿಗಲಿದೆ‌. ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 4750 ರೂ. ಗೌರವ ಧನ ಇತ್ತು. ಈಗ ರಾಜ್ಯ ಸರ್ಕಾರದ 1250 ರೂ., ಕೇಂದ್ರ ಸರ್ಕಾರದ 500 ರೂ. ಸೇರಿ ಒಟ್ಟು 6500 ರೂ. ಗೌರವಧನ ಸಿಗಲಿದೆ. ಅಂಗನವಾಡಿ ಸಹಾಯಕಿಯರಿಗೆ ಈ ಹಿಂದೆ 4000 ರೂ. ಇತ್ತು. ಈಗ ರಾಜ್ಯ ಸರ್ಕಾರದಿಂದ 1000 ರೂ. ಕೇಂದ್ರದ 500 ರೂ. ಸೇರಿ ಒಟ್ಟು 5500 ರೂ. ಗೌರವ ಧನ ಸಿಗಲಿದೆ.

ಅಪೌಷ್ಟಿಕತೆ ಬಗ್ಗೆ ಆ್ಯಪ್ ಅಭಿವೃದ್ಧಿ:

ಶೇ.10-15 ರಷ್ಟು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಅಂಗನವಾಡಿಗೆ ಬರುತ್ತಿವೆ. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಇಲಾಖೆ ಹಾಗೂ ನಮ್ಮ ಇಲಾಖೆಗಳು ಜೊತೆಗೂಡಿ ಕೆಲಸ ಮಾಡಬೇಕಿದೆ. ಅದರ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜೊತೆ ಚರ್ಚೆ ಕೂಡ ಮಾಡಲಾಗಿದೆ. ಮೊಬೈಲ್ ಆ್ಯಪ್ ಮೂಲಕ ರಾಜ್ಯದ ಯಾವುದೇ ಮಗು ಅಪೌಷ್ಟಿಕತೆಯ ವಿಚಾರದಲ್ಲಿ ಹೇಗೆ ಇದೆ ಎಂದು ಕುಳಿತಲ್ಲೇ ನೋಡಬಹುದು. ಆದರೆ ಇದೂವರೆಗೆ ಆ ಆ್ಯಪ್‌ ಕರ್ನಾಟಕಕ್ಕೆ ಬಂದಿಲ್ಲ. ಅದನ್ನ ರಾಜ್ಯದಲ್ಲಿ ಸಮರ್ಥವಾಗಿ ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು‌ ಸ್ಪಷ್ಟಪಡಿಸಿದರು.

Intro:Body:KN_BNG_02_SHASHIKALAJOLLE_PRESSMEET_SCRIPT_7201951

ಅಂಗನವಾಡಿ ಕಾರ್ಯಕರ್ತರಿಗೆ ದೀಪಾವಳಿ ಕೊಡುಗೆ: 2000 ರು. ಗೌರವ ಧನ ಹೆಚ್ಚಳ

ಬೆಂಗಳೂರು: ಅಂಗನವಾಡಿ‌ ಕಾರ್ಯಕರ್ತೆಯರಿಗೆ ಸರ್ಕಾರ ದೀಪಾವಳಿ ಬಂಪರ್ ಕೊಡುಗೆ ನೀಡಿದೆ. ಸುಮಾರು 2000 ರು. ಗೌರವಧನ ಹೆಚ್ಚಿಸುವ ಮೂಲಕ ದೀಪಾವಳಿ ಗಿಫ್ಟ್ ನೀಡಿದೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ 62, 580 ಜನ ಅಂಗನವಾಡಿ ಕಾರ್ಯಕರ್ತರು ಸೇರಿ 1.28 ಲಕ್ಷ ಕಾರ್ಯಕರ್ತೆಯರಿದ್ದಾರೆ. 2018 ರ ಅಕ್ಟೋಬರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಲಗಿತ್ತು. ಈ ಪೈಕಿ 40% ರಾಜ್ಯ, 60% ಕೇಂದ್ರ ಗೌರವ ಧನ ನೀಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ 1500 ರೂ. ಹಾಗೂ 500 ರು. ಸೇರಿಸಿ 2000 ರೂ. ಗೌರವಧನ ಹೆಚ್ಚಳ‌ವಾಗಿ ನೀಡಲಾಗುವುದು.‌ ಒಟ್ಟು ಈಗ 10,000 ರೂ. ನೀಡಲಾಗುವುದು. 1/10/2018 ರಿಂದ ಈ ಆದೇಶ ಜಾರಿಗೆ ಬರಲಿದೆ. ಒಂದು ವರ್ಷ ತಡೆಹಿಡಿದ ಗೌರವಧನ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಯಾರಿಗೆ ಎಷ್ಟು ಹೆಚ್ಚಳ?:

ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 8000 ರು.ಇತ್ತು, ಈಗ ರಾಜ್ಯ ಸರ್ಕಾರದ 1500 ರು. ಮತ್ತು ಕೇಂದ್ರ ಸರ್ಕಾರದ 500 ರು. ಪಾಲು ಸೇರಿ ಈಗ 10,000 ಗೌರವಧನ ಸಿಗಲಿದೆ‌

ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 4750 ರು.ಗೌರವ ಧನ ಇತ್ತು. ಈಗ ರಾಜ್ಯ ಸರ್ಕಾರದ 1250 ರು., ಕೇಂದ್ರ ಸರ್ಕಾರದ 500 ರು. ಸೇರಿ ಒಟ್ಟು 6500 ರು. ಗೌರವಧನ ಸಿಗಲಿದೆ.

ಅಂಗನವಾಡಿ ಸಹಾಯಕಿಯರಿಗೆ ಈ ಹಿಂದೆ 4000 ರು. ಗೌರವ ಧನ ಇತ್ತು. ಈಗ ರಾಜ್ಯ ಸರ್ಕಾರದಿಂದ 1000 ರು., ಕೇಂದ್ರ ಸರ್ಕಾರದಿಂದ 500 ರು. ಸೇರಿ ಒಟ್ಟು 5500 ರು. ಗೌರವಧನ ಸಿಗಲಿದೆ.

ಅಪೌಷ್ಠಿಕತೆ ಬಗ್ಗೆ ಆ್ಯಪ್ ಅಭಿವೃದ್ಧಿ:

10-15% ಅಪೌಷ್ಠಿಕತೆಯ ಮಕ್ಕಳು ಅಂಗನವಾಡಿಗೆ ಬರುತ್ತಿವೆ. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಇಲಾಖೆ ಹಾಗೂ ನಮ್ಮ‌ ಇಲಾಖೆಗಳು ಜೊತೆಗೂಡಿ ಕೆಲಸ ಮಾಡಬೇಕಿದೆ. ಅದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಎಲ್ಲ ದೃಷ್ಟಿಕೋನದಿಂದ ಮಕ್ಕಳ ಬೆಳವಣಿಗೆಗೆ ಸಿದ್ಧತೆ ಮಾಡಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಜೊತೆ ಚರ್ಚೆ ಕೂಡ ಮಾಡಲಾಗಿದೆ. ಮೊಬೈಲ್ ಆಪ್ ಮೂಲಕ ರಾಜ್ಯದ ಯಾವುದೇ ಮಗು ಅಪೌಷ್ಠಿಕತೆಯ ವಿಚಾರದಲ್ಲಿ ಹೇಗೆ ಇದೆ ಎಂದು ಕುಳಿತಲ್ಲೇ ನೋಡಬಹುದು‌ ಎಂದು ವಿವರಿಸಿದರು.

ಆದರೆ ಇದೂವರೆಗೆ ಅದು‌ ಕರ್ನಾಟಕಕ್ಕೆ ಬಂದಿರಲಿಲ್ಲ. ಅದು ಯಾಕೆ ಬಂದಿರಲಿಲ್ಲ ಗೊತ್ತಿಲ್ಲ. ಈಗ ಅದನ್ನ ಸಂಪೂರ್ಣವಾಗಿ ಸಮರ್ಥವಾಗಿ ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು‌ ಸ್ಪಷ್ಟಪಡಿಸಿದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.