ETV Bharat / city

ರಾಜ್ಯ ಪ್ರವಾಹ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಹರಿದುಬಂದ ಹಣವೆಷ್ಟು ಗೊತ್ತಾ?

ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ಜನರು, ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ನೌಕರರು, ವಿವಿಧ ನಿಗಮ-ಮಂಡಳಿಗಳ ನೌಕರರು ಆಗಸ್ಟ್ 9 ರಿಂದ ಸೆಪ್ಟೆಂಬರ್ 18 ರ ವರೆಗೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ನೀಡಿರುವ ದೇಣಿಗೆಯಿಂದ ಒಟ್ಟು 137.32 ಕೋಟಿ ರೂ. ಸಂಗ್ರಹವಾಗಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ
author img

By

Published : Sep 19, 2019, 9:45 PM IST

ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ನಾಡಿನ ಜನತೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ದೇಣಿಗೆ ನೀಡುತ್ತಿದ್ದು, ಆಗಸ್ಟ್ 9 ರಿಂದ ಸೆಪ್ಟೆಂಬರ್ 18 ರ ವರೆಗೆ ಒಟ್ಟು 137.32 ಕೋಟಿ ರೂ. ಜಮಾ ಆಗಿದೆ ಎಂದು‌ ಸಿಎಂ‌ ಕಚೇರಿ ಮಾಹಿತಿ ನೀಡಿದೆ.

ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ನೌಕರರು, ವಿವಿಧ ನಿಗಮ-ಮಂಡಳಿಗಳ ನೌಕರರು ಉದಾರವಾಗಿ ದೇಣಿಗೆ ನೀಡಿದ್ದಾರೆ. ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 25 ಕೋಟಿ ರೂ., ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ 10 ಕೋಟಿ ರೂ., ಎನ್ಎಂಡಿಸಿ 10 ಕೋಟಿ ರೂ. ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 5 ಕೋಟಿ ರೂ. ದೇಣಿಗೆ ನೀಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘದವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒಂದು ದಿನದ ವೇತನ ನೀಡುವುದಾಗಿ ಹೇಳಿದ್ದಾರೆ. ನಿಗಮ, ಮಂಡಳಿಗಳು ಸಹ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿದ್ದಾರೆ ಎಂದು ಸಿಎಂ ಕಚೇರಿಯಿಂದ ತಿಳಿದುಬಂದಿದೆ.

ಉದ್ಯಮಿಗಳು, ಸೇವಾ ಸಂಸ್ಥೆಗಳು, ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರ ನೆರವಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. ದೇಣಿಗೆ ನೀಡಲು ಬಯಸುವವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಆನ್​ಲೈನ್​ನಲ್ಲಿ ದೇಣಿಗೆ ಜಮಾ ಮಾಡಬಹುದು. ಅಥವಾ ಚೆಕ್ ಅಥವಾ ಡಿಡಿ ಮೂಲಕವೂ ದೇಣಿಗೆ ನೀಡಬಹುದು ಎಂದು ವಿವರವನ್ನು ನೀಡಲಾಗಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ (ಪ್ರಕೃತಿ ವಿಕೋಪ):
1.ಬ್ಯಾಂಕ್​: ಭಾರತೀಯ ಸ್ಟೇಟ್​ ಬ್ಯಾಂಕ್​
ಶಾಖೆ: ವಿಧಾನಸೌಧ
ಖಾತೆ ಸಂಖ್ಯೆ: 37887098605
IFSC ಕೋಡ್​: SBIN0040277
MICR​ ಕೋಡ್: 56002419

2.ಬ್ಯಾಂಕ್: HDFC Bank Ltd.
ಶಾಖೆ: ಶೇಷಾದ್ರಿಪುರಮ್​, ಬೆಂಗಳೂರು
ಖಾತೆ ಸಂಖ್ಯೆ: 50100309178784
IFSC ಕೋಡ್: HDFC0000367
MICR ಕೋಡ್: 560240018

ಇದಲ್ಲದೆ, https://cmrf.karnataka.gov.in ವೆಬ್​​ಸೈಟ್ ಮೂಲಕ ಹಾಗೂ ಭೀಮ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಯುಪಿಐ ಆ್ಯಪ್​ಗಳ ಮೂಲಕವೂ ಹಣ ವರ್ಗಾಯಿಸಬಹುದು ಎಂದು ತಿಳಿಸಿದೆ.

Intro:.Body:

ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ನಾಡಿನ ಜನತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ವಯಂ ಸ್ಫೂರ್ತಿಯಿಂದ ದೇಣಿಗೆ ನೀಡುತ್ತಿದ್ದು, ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಆಗಸ್ಟ್ 9 ರಿಂದ ಸೆಪ್ಟೆಂಬರ್ 18 ರ ವರೆಗೆ 137.32 ಕೋಟಿ ರೂ. ದೇಣಿಗೆ ಜಮಾ ಆಗಿದೆ ಎಂದು‌ ಸಿಎಂ‌ ಕಚೇರಿ ಮಾಹಿತಿ ನೀಡಿದೆ.

ವಿವಿಧ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ನೌಕರರು, ವಿವಿಧ ನಿಗಮ-ಮಂಡಳಿಗಳ ನೌಕರರು ಉದಾರವಾಗಿ ದೇಣಿಗೆ ನೀಡಿದ್ದು, ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 25 ಕೋಟಿ ರೂ., ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷೆ ಸುಧಾ ಮೂರ್ತಿ ಅವರು 10 ಕೋಟಿ ರೂ. ದೇಣಿಗೆ ನೀಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅಂತೆಯೇ ಎನ್ಎಂಡಿಸಿ 10 ಕೋಟಿ ರೂ. , ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 5 ಕೋಟಿ ರೂ. ದೇಣಿಗೆ ನೀಡಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘಗಳು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒಂದು ದಿನದ ವೇತನ ನೀಡುವುದಾಗಿ ವಾಗ್ದಾನ ಮಾಡಿವೆ. ನಿಗಮ, ಮಂಡಳಿಗಳು ಸಹ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.

ಉದ್ಯಮಿಗಳು, ಸೇವಾ ಸಂಸ್ಥೆಗಳು, ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರ ನೆರವಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.ದೇಣಿಗೆ ನೀಡಲು ಬಯಸುವವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ನಲ್ಲಿ ದೇಣಿಗೆ ಜಮಾ ಮಾಡಬಹುದು. ಅಥವಾ ಚೆಕ್ ಅಥವಾ ಡಿಡಿ ಮೂಲಕವೂ ದೇಣಿಗೆ ನೀಡಬಹುದು ಎಂದು ವಿವರವನ್ನು ನೀಡಿದೆ.

Chief Minister’s Relief Fund (Natural Calamity)
Bank: State Bank of India,
Branch: Vidhanasoudha
A/C No. 37887098605
IFSC Code: SBIN0040277
MICR No: 56002419

Bank Name: HDFC Bank Ltd.
Branch: Seshadripuram, Bangalore
A/C No.: 50100309178784
IFSC Code: HDFC0000367
MICR Code: 560240018

ಇದಲ್ಲದೆ, https://cmrf.karnataka.gov.in ವೆಬ್ ಸೈಟ್ ಮೂಲಕ ಹಾಗೂ ಭೀಮ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಯುಪಿಐ ಆಪ್ ಗಳ ಮೂಲಕವೂ ಹಣ ವರ್ಗಾಯಿಸಬಹುದು ಎಂದು ತಿಳಿಸಿದೆ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.