ಬಳ್ಳಾರಿ: ರಾಜ್ಯ ಸರ್ಕಾರ ಟ್ರಾನ್ಸ್ಜೆಂಡರ್ಗೆ ಶೇ 1 ರಷ್ಟು ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕೆಂದು ಸಂಗಮ ಸಂಸ್ಥೆ ಆಗ್ರಹಿಸಿದೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಗಮ ಸಂಸ್ಥೆಯ ನೌಕರೆ ಅಶ್ವಿನಿ ರಾಜಣ್ಣ, ಟ್ರಾನ್ಸ್ಜೆಂಡರ್ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಲಾದರೂ ಶ್ರಮಿಸಬೇಕಿದೆ. ಟ್ರಾನ್ಸ್ಜೆಂಡರ್ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಮೀಸಲಾತಿ ಜಾರಿ ಮಾಡಿದೆ. ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದರು.
ಇನ್ನು ಈ ಮೀಸಲಾತಿ ಕೇವಲ ಕಾಗದ ಪತ್ರಕ್ಕೆ ಮಾತ್ರ ಮೀಸಲಾಗದೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಅಶ್ವಿನಿ ರಾಜಣ್ಣ ಆಗ್ರಹಿಸಿದರು.