ETV Bharat / city

ನರೇಗಾ ಅನುದಾನ ಬಳಕೆಗೆ ಚಿಂತನೆ; ಕೂಲಿಕಾರ್ಮಿಕರ ಉಳಿತಾಯ ಖಾತೆಗೆ 3 ಸಾವಿರ? - Narega Plan grant utilization

ಬಳ್ಳಾರಿ ತಾಲೂಕು ಹಾಗೂ ಹೊಸಪೇಟೆಯಲ್ಲಿ ನರೇಗಾ ಯೋಜನೆ ಅನ್ವಯವಾಗದ ಕಾರಣ, ನಾವು ಏನು ಮಾಡಬೇಕೆಂಬ ತೀರ್ಮಾನ ಕೈಗೊಳ್ಳುವೆ. ನಾವು ಏನು ಮಾಡಿದರೂ ಏಪ್ರಿಲ್ 30ರೊಳಗೆ ತೀರ್ಮಾನ ಕೈಗೊಳ್ಳುವುದಾಗಿ ಆನಂದ್​​​ ಸಿಂಗ್ ಭರವಸೆ ನೀಡಿದ್ದಾರೆ.

narega-plan-grant-utilization
ಆನಂದ್​​​ ಸಿಂಗ್
author img

By

Published : Apr 13, 2020, 6:29 PM IST

ಬಳ್ಳಾರಿ: ಲಾಕ್​​​ಡೌನ್ ಅನ್ನು ಸಮರ್ಥವಾಗಿ ಎದುರಿಸಲು ನರೇಗಾ ಯೋಜನೆ ಅನುದಾನ ಬಳಕೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್​​ ಸಿಂಗ್ ಅವರ ಸಮಕ್ಷಮದಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಕನಿಷ್ಠ 14ದಿನಗಳ ಕಾಲ ಕೂಲಿ ಕೆಲಸ ಮಾಡಿದ ಕುಟುಂಬ ಸದಸ್ಯರಿಗೆ ತಲಾ 3,000 ರೂ ಖಾತೆಗಳಿಗೆ ಜಮಾವಣೆ ಮಾಡಲಾಗುತ್ತದೆ. ಅಂದಾಜು 1.60 ಲಕ್ಷ ಕುಟುಂಬಗಳಿಗೆ ಸಹಾಯವಾಗಲಿದೆಂಬ ಉದ್ದೇಶದೊಂದಿಗೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆನಂದ್​​ ಸಿಂಗ್ ತಿಳಿಸಿದರು.

‌ಮೊದಲಿಗೆ 50 ದಿನಗಳ ಕಾಲ ಕೆಲಸ ಮಾಡಿರುವ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಅಭಿಪ್ರಾಯ ಬಂದಿತ್ತು. ಆದರೆ, 50 ದಿನ ಕೆಲಸ ಮಾಡಿದವರ ಸಂಖ್ಯೆ ಕಡಿಮೆಯಿದೆ. ಹೀಗಾಗಿ, 14 ದಿನ ಕೆಲಸ ಮಾಡಿದ ಕುಟುಂಬಗಳಿಗೂ ಹಣವನ್ನು ಜಮೆ ನಿರ್ಧಾರಕ್ಕೆ ಬರಲಾಯಿತು. ಮುಂದಿನ ಎರಡು ದಿನಗಳಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.