ಬಳ್ಳಾರಿ : ನಗರದ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದಿದ್ದು, ತಕ್ಷಣವೇ ಎಚ್ಚೆತ್ತುಗೊಂಡ ರೈಲ್ವೆ ಪೊಲೀಸ್ ಮಹಿಳೆಯನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.
ಶನಿವಾರ ರಾತ್ರಿ 9 ರ ಸುಮಾರಿಗೆ ಮನುಗೂರ ಎಕ್ಸ್ ಪ್ರೆಸ್ ರೈಲು, ಬಳ್ಳಾರಿ ಮಾರ್ಗವಾಗಿ ಹೈದರಾಬಾದ್ ಗೆ ತೆರಳುತ್ತಿತ್ತು, ಆ ಸಮಯದಲ್ಲಿ ರಶ್ಮಿ ಎನ್ನುವ ಪ್ರಯಾಣಿಕರು ಸಮಯದ ಅಭಾವದಿಂದ ಆತುರಾತುರದಿಂದ ಓಡೋಡಿ ಬಂದು, ಚಲಿಸುತ್ತಿದ್ದ ರೈಲು ದ್ವಾರದ ಬಾಗಿಲು ಪ್ರವೇಶಿಸಲು ಮುಂದಾಗಿದ್ದಾರೆ, ಆದ್ರೆ ಪಾದರಕ್ಷೆಗಳು ಜಾರಿ ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ.
ಕೂಗಳತೆ ದೂರದಲ್ಲೆ ನಿಂತಿದ್ದ ರೈಲ್ವೇ ಪೊಲೀಸ್ ಸಿಬ್ಬಂದಿ ಎಸ್.ಎಂ.ರಫೀ ಎಂಬುವವರು ಅಪಾಯದ ಮೂನ್ಸೂಚನೆ ಅರಿತು ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ದೃಶ್ಯ ರೈಲ್ವೆ ನಿಲ್ದಾಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.