ಬೆಳಗಾವಿ: ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಡೈಮಂಡ್ ಇದ್ದಂತೆ. ಅವರು ವಿಧಾನಸಭೆ ಹಿರಿಯ ಸದಸ್ಯ ಕೂಡ ಹೌದು. ಈ ಸಲ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷ ರಮೇಶ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಒಮ್ಮೊಮ್ಮೆ ತ್ಯಾಗ ಮಾಡಬೇಕಾಗುತ್ತದೆ. ಸರ್ಕಾರದ ರಚನೆಗೆ ಹೊರಗಿನಿಂದ ಬಂದವರೇ ಮುಖ್ಯ ಕಾರಣ. ಅವರಿಗೆ ಮೊದಲು ಅವಕಾಶ ನೀಡಬೇಕಾದ ಅನಿವಾರ್ಯತೆ ಎದುರಾಯಿತು. ಇದು ಸಹಜ ಪ್ರತಿಕ್ರಿಯೆ ಕೂಡ.
ಈ ಕಾರಣಕ್ಕೆ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಲಭಿಸಲು ತಡವಾಗಿದೆ. ಸಂಪುಟ ವಿಸ್ತರಣೆ ವೇಳೆ ಉಮೇಶ ಕತ್ತಿಗೆ ಮಂತ್ರಿ ಸ್ಥಾನ ನೀಡುವ ಆತ್ಮವಿಶ್ವಾಸ ನನಗಿದೆ. ಅನುಭವಕ್ಕೆ ತಕ್ಕಂತೆ ಉಮೇಶ ಕತ್ತಿಗೆ ಪಕ್ಷ ಸ್ಥಾನ ಮಾನ ನೀಡಲಿದೆ ಎಂದರು.