ಚಿಕ್ಕೋಡಿ: ಮಹದಾಯಿ ನೀರನ್ನ ನಮ್ಮ ಭಾಗಕ್ಕೆ ಸರಿಯಾಗಿ ಬಿಡದೇ ಹೋದರೆ, ನಮಗೆ ಪ್ರತ್ಯೇಕ ರಾಜ್ಯ ನೀಡಲಿ. ನಾವು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಕರಾಡ, ಸೊಲ್ಲಾಪುರ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ, ಪ್ರತ್ಯೇಕ ರಾಜ್ಯ ಮಾಡತ್ತೇವೆ ಎಂದು ಶಾಸಕ ಉಮೇಶ್ ಕತ್ತಿ,ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೀರಾ ಶುಗರ್ಸ್ ಕಾರ್ಖಾನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ಮಹದಾಯಿ ಯೋಜನೆ ಅಲಾರ್ಟ್ಮೆಂಟ್ ಆಗಿ 7 ವರ್ಷವಾದರೂ ಸಹ ಕೆಲಸ ಮಾಡಲು ಆಗಿಲ್ಲ. ಕೆಲಸ ಮಾಡದೆ ಮಹಾರಾಷ್ಟ್ರಕ್ಕೆ ನೀರು ಕೊಡುತ್ತೇವೆ ಎಂಬ ಸಿಎಂ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ, ನಮ್ಮಗೆ ಪ್ರತ್ಯೇಕ ರಾಜ್ಯ ನೀಡಲಿ. ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಕರಾಡ, ಸೊಲ್ಲಾಪುರ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ, ನಾವು ಪ್ರತ್ಯೇಕ ರಾಜ್ಯ ಮಾಡತ್ತೇವೆ. ಈ ಭಾಗಕ್ಕೆ ಅನ್ಯಾಯವಾದರೆ ನಾನು ಸಾಯೋವರೆಗೂ ಸಹ ನನ್ನ ಹೋರಾಟ ಅಛಲ ಎಂದರು.
ಕೃಷ್ಣಾ ಬಚಾವೋ ಯೋಜನೆಯಲ್ಲಿ 740 ಟಿಎಂಸಿ ಸದ್ಬಳಕೆ ಆಗುತ್ತಿಲ್ಲ. ಇದಕ್ಕಾಗಿ ಜಗದೀಶ್ ಶೆಟ್ಟರ್ ಸರ್ಕಾರ ಈ ಹಿಂದೆ 1700 ಕೋಟಿ ರೂ. ಮೀಸಲಿಟ್ಟಿದೆ. ಕರ್ನಾಟಕದ 42 ತಾಲೂಕುಗಳಿಗೆ ಮಹದಾಯಿ ನೀರು ವರದಾನವಾಗಬೇಕಿದೆ. ಮಹದಾಯಿ ನದಿಯಲ್ಲಿ ನಮಗೆ ಬಂದಿರುವ 40 ಟಿಎಂಸಿ ನೀರು ಸದ್ಬಳಕೆ ಆಗಬೇಕಿದೆ. ಚುನಾವಣೆ ಬಂದಾಗ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆ ಎನ್ನುವುದು ತುಂಬಾ ಹಗುರವಾದ ಮಾತು. ನಮಗೆ ನೀರು ಬಿಡಿ ಎಂದು ಹೇಳಿದರೂ, ನೀರು ಬಿಟ್ಟಿಲ್ಲ.
ನಮಗೆ ಮೊದಲು ನೀರು ಕೊಡಿ. ವೋಟ್ ಗಿಟ್ಟಿಸಿಕೊಳ್ಳಲು ಎನೇನೋ ಮಾತನಾಡುವುದು ಸರಿಯಲ್ಲ. ಅದು ಚುಣಾವನೆಯಲ್ಲಿ ವೋಟು ಗಿಟ್ಟಿಸಿಕೊಳ್ಳಲು ಮಾಡಿದ ಭಾಷಣವಷ್ಟೆ. ಸುವರ್ಣ ಸೌಧ ಕಟ್ಟಿದ್ದಾರೆ. ಆದರೆ,ಅಲ್ಲಿ ಅಧಿವೇಶನವನ್ನೆ ನಡೆಸುತ್ತಿಲ್ಲ. 400 ಕೋಟಿ ರೂ. ಕೊಟ್ಟು ಸುವರ್ಣ ಸೌಧ ನಿರ್ಮಾಣ ಮಾಡಿದ್ದಾರೆ. ಆದರೆ,ಅದೂ ಸಹ ಬಳಕೆ ಆಗುತ್ತಿಲ್ಲ. ಡಿಸಿಎಂ ಹುದ್ದೆ ನಾಮಕವಸ್ತೆ ಅಷ್ಟೇ. ನಾನು ಆದರೆ ಅಖಂಡ ಕರ್ನಾಟಕದ ಮುಖ್ಯಂಮತ್ರಿಯಾಗುತ್ತೇನೆ ಎಂದರು.