ETV Bharat / city

ಟ್ರಂಪ್ ಇಲ್ಲಿ ಮಾರ್ಕೆಟಿಂಗ್ ಮಾಡಲು ಬಂದಿದ್ದಾರೆ.. ಸೀತಾರಾಮ ಯಚೂರಿ

author img

By

Published : Feb 25, 2020, 3:07 PM IST

ಟ್ರಂಪ್ ತಮ್ಮ ದೇಶದ ಮಾರ್ಕೆಟಿಂಗ್ ಮಾಡಲು ಬಂದಿದ್ದಾರೆ. ಅಮೆರಿಕಾದಲ್ಲಿ ಉತ್ಪಾದಿಸುವ ಕೃಷಿ ಪದಾರ್ಥಗಳಿಗೆ ಭಾರತೀಯ ಮಾರುಕಟ್ಟೆ ಒದಗಿಸಲು ಬಂದಿದ್ದಾರೆ. ಇದರಿಂದ ಭಾರತೀಯ ಅನ್ನದಾತರಿಗೆ ಪೆಟ್ಟಾಗಲಿದೆ ಎಂದು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ನಮಸ್ತೆ ಟ್ರಂಪ್ ವಿರುದ್ಧ ಕಿಡಿಕಾರಿದರು.

sitharama-yachuri-statement-on-trump-india-visit
ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ

ಬೆಳಗಾವಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿರುವುದು ಇಲ್ಲಿರುವ ಆರ್ಥಿಕತೆ ಹೆಚ್ಚು ಮಾಡಲು ಅಲ್ಲ. ತನ್ನ ಆರ್ಥಿಕತೆ ಹೆಚ್ಚು ಮಾಡಲು ಎಂದು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಆರೋಪಿಸಿದರು.

ನಮಸ್ತೆ ಟ್ರಂಪ್ ಕುರಿತು ಸಿಪಿಐಎಂ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸೀತಾರಾಮ ಯಚೂರಿ ಪ್ರತಿಕ್ರಿಯೆ..

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಂಪ್ ತಮ್ಮ ದೇಶದ ಮಾರ್ಕೆಟಿಂಗ್ ಮಾಡಲು ಬಂದಿದ್ದಾರೆ. ಅಮೆರಿಕಾದಲ್ಲಿ ಉತ್ಪಾದಿಸುವ ಕೃಷಿ ಪದಾರ್ಥಗಳಿಗೆ ಭಾರತೀಯ ಮಾರುಕಟ್ಟೆ ಒದಗಿಸಲು ಬಂದಿದ್ದಾರೆ. ಇದರಿಂದ ಭಾರತೀಯ ಅನ್ನದಾತರಿಗೆ ಪೆಟ್ಟಾಗಲಿದೆ. ಈಗಾಗಲೇ ನಮ್ಮ ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕಾದ ಔಷಧಿಗಳಿಗೆ ಮಾರುಕಟ್ಟೆ ಕಲ್ಪಿಸಲು ಬಂದಿದ್ದಾರೆ. ಮೋದಿ ಸರ್ಕಾರದ ಉದ್ದೇಶ ಬಡತನ ನಿರ್ಮೂಲನೆ ಅಲ್ಲ, ಬಡವರ ನಿರ್ಮೂಲನೆ ಎಂದು ಸೀತಾರಾಮ್‌ ಯಚೂರಿ ಕಿಡಿಕಾರಿದರು.

ಟ್ರಂಪ್‌ ಭಾರತದ ಪ್ರವಾಸಕ್ಕೆ ಮೋದಿ ನೂರಾರು ಕೋಟಿ ವೆಚ್ಚ ಮಾಡಿದ್ದು ಸರಿಯಲ್ಲ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗೆ ನಮ್ಮದು ವಿರೋಧವಿದೆ. ಬಿಜೆಪಿ ಕೋಮುವಾದದಿಂದಲೇ ಹಿಂದುತ್ವದ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಹುನ್ನಾರ ನಡೆಸಿದೆ. ಎನ್​​ಆರ್​ಸಿಗಾಗಿ ದೇಶದ ಜನತೆ ದಾಖಲಾತಿಗಾಗಿ ಪರದಾಡುವಂತಾಗಲಿದೆ. ದೇಶದ ಬಡವರು, ದಲಿತರು, ಆದಿವಾಸಿಗಳಿಗೆ ಮಾರಕವಾಗಿ ಪರಿಣಮಿಸಲಿದೆ. ಇದಕ್ಕೆ ದೆಹಲಿಯಲ್ಲಿನ ಹಿಂಸಾಚಾರಕ್ಕೆ ಸಾಕ್ಷಿ. ಇದರ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದರು.

ದೇಶದ್ರೋಹಿ ಕೇಸ್ ಬೆಂಗಳೂರಿನಲ್ಲಿ ನಡೆದಿದೆ. ಅವಳನ್ನ ಅರೆಸ್ಟ್ ಮಾಡಲಾಗಿದೆ. ಅಲ್ಲಿ ಬಿಟ್ಟರೆ ಬೇರೆಯಲ್ಲೂ ಪಾಕ್ ಪರ ಘೋಷಣೆ ಕೂಗಿಲ್ಲ. ನಾನು ಹೇಳ್ತೀನಿ ಹಿಂದೂಸ್ಥಾನ ಜಿಂದಾಬಾದ್. ಸೀತಾರಾಮ್ ಕೂಡ ಹಿಂದೂ ಇದ್ದಾನೆ. ಆದರೆ, ಬಿಜೆಪಿಯ ಕೋಮುವಾದಿ ವೋಟ್ ಬ್ಯಾಂಕ್ ಹಿಂದುತ್ವಕ್ಕೆ ನನ್ನ ವಿರೋಧವಿದೆ‌ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.