ಚಿಕ್ಕೋಡಿ : ಕಳೆದ ಹತ್ತು ದಿನದಿಂದ ಸ್ವಯಂ ಘೋಷಿತ ಲಾಕ್‌ಡೌನ್‌ಗೊಳಗಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ನಾಳೆಯಿಂದ ಅನ್‌ಲಾಕ್ ಆಗಲಿದೆ.
ನಾಳೆಯಿಂದ ಚಿಕ್ಕೋಡಿ ಪಟ್ಟಣ ಅನ್‌ಲಾಕ್ ಪಟ್ಟಣದ ಪುರಸಭೆ ಆವರಣದಲ್ಲಿ ಲಾಕ್‌ಡೌನ್ ಕುರಿತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಮುಖ್ಯ ಸಚೇತಕ ಜಗದೀಶ ಕವಟಗಿಮಠ, ನಾಳೆಯಿಂದ ಚಿಕ್ಕೋಡಿಯಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಈಗಾಗಲೇ 10 ದಿನಗಳಿಂದ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಜಾರಿ ಇತ್ತು. ಅಗತ್ಯ ವಸ್ತುಗಳಿಗೆ ಪರದಾಡುತ್ತಿರುವ ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ನಡೆದ ಸಭೆಯಲ್ಲಿ ನಾಳೆಯಿಂದ ಲಾಕ್‌ಡೌನ್ ತೆರುವುಗೊಳಿಸಲು ನಿರ್ಧರಿಸಲಾಗಿದೆ ಎಂದರು.ಸಾರ್ವಜನಿಕರು ಹಾಗೂ ರೈತರ ಮನವಿ ಮೇರೆಗೆ ಲಾಕ್‌ಡೌನ್ ತೆರವು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಸಾರ್ವಜನಿಕರು ಕೋವಿಡ್-19 ಸೋಂಕು ತಡೆಯಲು ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಟೈಸ್ ಬಳಕೆ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ.