ETV Bharat / city

ಸುವರ್ಣಸೌಧದವರೆಗೆ ಪಾದಯಾತ್ರೆ.. ಭಜನಾ ತಂಡದ ಜತೆ ನೃತ್ಯ ಮಾಡಿದ ಶಾಸಕಿ ನಿಂಬಾಳ್ಕರ್

ಖಾನಾಪುರ ಅಭಿವೃದ್ಧಿಗೆ ಆಗ್ರಹಿಸಿ ನಿನ್ನೆ(ಭಾನುವಾರ) ಮಧ್ಯಾಹ್ನ 3 ಗಂಟೆಯಿಂದ ಶಾಸಕಿ ನಿಂಬಾಳ್ಕರ್ ಪಾದಯಾತ್ರೆ ಆರಂಭಿಸಿದ್ದರು. ಇಂದು ಬೆಳಗ್ಗೆ 5.30ಕ್ಕೆ ಆರಂಭವಾದ ಪಾದಯಾತ್ರೆ ಬೆಳಗ್ಗೆ 8.30ರ ಹೊತ್ತಿಗೆ ಯಡಿಯೂರಪ್ಪ ಮಾರ್ಗಕ್ಕೆ ತಲುಪಿತು. ಉಪಹಾರದ ವಿರಾಮದ ವೇಳೆ ಯಡಿಯೂರಪ್ಪ ಮಾರ್ಗದಲ್ಲಿ ಶಾಸಕಿ ನಿಂಬಾಳ್ಕರ್ ನೃತ್ಯ ಮಾಡಿದರು.

MLA Anjali Nimbalkar dance with  Bhajana Team
ಭಜನಾ ತಂಡದ ಜತೆ ನೃತ್ಯ ಮಾಡಿ ಗಮನ ಸೆಳೆದ ಶಾಸಕಿ ಅಂಜಲಿ ನಿಂಬಾಳ್ಕರ್
author img

By

Published : Dec 13, 2021, 9:42 AM IST

ಬೆಳಗಾವಿ: ಖಾನಾಪುರದಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸುತ್ತಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಮಾರ್ಗಮಧ್ಯೆ ಭಜನಾ ತಂಡದ ಜತೆಗೆ ನೃತ್ಯ ಮಾಡಿ ಗಮನ ಸೆಳೆದರು.

ಭಜನಾ ತಂಡದ ಜತೆ ನೃತ್ಯ ಮಾಡಿ ಗಮನ ಸೆಳೆದ ಶಾಸಕಿ ಅಂಜಲಿ ನಿಂಬಾಳ್ಕರ್

ವಿಠ್ಠಲ ವಿಠ್ಠಲ ಪಾಂಡುರಂಗ ಎಂಬ ಭಜನಾ ತಂಡದ ಹಾಡಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಭಕ್ತಿ ಪೂರ್ವಕವಾಗಿ ಹೆಜ್ಜೆ ಹಾಕಿದರು. ಇಂದು ಬೆಳಗ್ಗೆ 5.30ಕ್ಕೆ ಆರಂಭವಾದ ಪಾದಯಾತ್ರೆ ಬೆಳಗ್ಗೆ 8.30ರ ಹೊತ್ತಿಗೆ ಯಡಿಯೂರಪ್ಪ ಮಾರ್ಗಕ್ಕೆ ತಲುಪಿತು. ಉಪಹಾರದ ವಿರಾಮದ ವೇಳೆ ಯಡಿಯೂರಪ್ಪ ಮಾರ್ಗದಲ್ಲಿ ಶಾಸಕಿ ನಿಂಬಾಳ್ಕರ್ ನೃತ್ಯ ಮಾಡಿದರು.

ಖಾನಾಪುರ ಅಭಿವೃದ್ಧಿಗೆ ಆಗ್ರಹಿಸಿ ನಿನ್ನೆ(ಭಾನುವಾರ) ಮಧ್ಯಾಹ್ನ 3 ಗಂಟೆಯಿಂದ ಶಾಸಕಿ ನಿಂಬಾಳ್ಕರ್ ಪಾದಯಾತ್ರೆ ಆರಂಭಿಸಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಮತ್ತೆ ಪಾದಯಾತ್ರೆ ಆರಂಭಿಸಿದ್ದು, ಸುವರ್ಣಸೌಧಕ್ಕೆ ತಲುಪಲಿದೆ.

ಇಂದು ಯಡಿಯೂರಪ್ಪ ಮಾರ್ಗದ ಮೂಲಕ ಸುವರ್ಣ ಸೌಧಕ್ಕೆ ಪಾದಯಾತ್ರೆ ತೆರಳಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಖಾನಾಪುರದಿಂದ ಸುವರ್ಣಸೌಧದವರೆಗೆ 'ಸಂಘರ್ಷ ಪಾದಯಾತ್ರೆ' ಕೈಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.