ETV Bharat / city

ಸಚಿವ ಆನಂದ್‌ ಸಿಂಗ್‌ ಅವರ ಸಮಸ್ಯೆ ಕೂಡ ಪರಿಹಾರವಾಗುತ್ತೆ.. ಸಚಿವ ಕೆ ಎಸ್‌ ಈಶ್ವರಪ್ಪ

ಅಷ್ಟು ಜನರಿಗೆ ಮಂತ್ರಿ ಸ್ಥಾನ ಕೊಟ್ಟು ಉಳಿದಿದ್ದರಲ್ಲಿ ನಾವು ಹಂಚಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಂದೆರಡು ಮಂದಿಗೆ ಅಸಮಾಧಾನವಿದೆ. ಅದನ್ನ ಮುಖ್ಯಮಂತ್ರಿ ಬಗೆ ಹರಿಸುತ್ತಾರೆ. ಇದರಲ್ಲಿ ಆನಂದ್ ಸಿಂಗ್ ಅವರ ಸಮಸ್ಯೆ ಕೂಡ ಪರಿಹಾರ ಆಗುತ್ತದೆ..

Minister KS Eshwarappa
ಗ್ರಾಮ ಪಂಚಾಯತಿ ಅಧಿಕಾರಿಗಳ ಜತೆ ಸಚಿವ ಈಶ್ವರಪ್ಪ ಸಭೆ
author img

By

Published : Aug 11, 2021, 3:40 PM IST

ಚಿಕ್ಕೋಡಿ : ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇನೆ. ಈ ಬಗ್ಗೆ ಸಿಇಒ ಕಡೆಯಿಂದ ವರದಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು. ಜಲ ಪ್ರವಾಹದ ಕುರಿತು ವರದಿ ತರಿಸಿಕೊಳ್ಳುತ್ತಿದ್ದೇನೆ. ಆ ವರದಿ ಬಂದ ಕೂಡಲೇ ಸಿಎಂ ಜತೆ ಚರ್ಚೆ ಮಾಡಿ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದರು.

ನರೇಗಾ ಕಾಮಗಾರಿ ಕುರಿತಂತೆ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ

ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಈಗ ಸಚಿವ ಸಂಪುಟ ಹೊಸದಾಗಿ ರಚನೆಯಾಗಿದೆ. ಈ ಸಚಿವ ಸಂಪುಟ ರಚನೆಯಾಗಲು ಕಾಂಗ್ರೆಸ್, ಜೆಡಿಎಸ್​​ನಿಂದ ಬಂದವರು ಕಾರಣ‌. ಅವರ ಋಣವನ್ನು ನಾವು ತಿರಿಸಬೇಕು. ಅವರು ಬಿಜೆಪಿಗೆ ಸೇಪರ್ಡೆಯಾಗಿಲ್ಲದಿದ್ದರೆ ಈ ಸರ್ಕಾರ ಬರ್ತಿರಲಿಲ್ಲ.

ಅಷ್ಟು ಜನರಿಗೆ ಮಂತ್ರಿ ಸ್ಥಾನ ಕೊಟ್ಟು ಉಳಿದಿದ್ದರಲ್ಲಿ ನಾವು ಹಂಚಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಂದೆರಡು ಮಂದಿಗೆ ಅಸಮಾಧಾನವಿದೆ. ಅದನ್ನ ಮುಖ್ಯಮಂತ್ರಿ ಬಗೆ ಹರಿಸುತ್ತಾರೆ. ಇದರಲ್ಲಿ ಆನಂದ್ ಸಿಂಗ್ ಅವರ ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಎಂದರು.

ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ಧ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಗ್ಪುರದಲ್ಲಿ ಟ್ರೈನಿಂಗ್ ಕೊಟ್ಟಿದ್ದಕ್ಕೆ ಆ ಪದ ನನ್ನ ಬಾಯಲ್ಲಿ ಬರಬಾರದಿತ್ತು ಎಂದು ಹೇಳಿದ್ದೇನೆ. ಆದರೆ, ಬಿ ಕೆ ಹರಿಪ್ರಸಾದ್ ಅವರು ಈಶ್ವರಪ್ಪ ಜೋಕರ್ ಎಂದು ಹೆಸರು ಬದಲಿಸಿಕೊಳ್ಳಬೇಕು ಎಂದರು.

ಅಲ್ಲದೇ ಸುಲಭ ಶೌಚಾಲಯಗಳಿಗೆ ನರೇಂದ್ರ ಮೋದಿ ಹೆಸರಿಡಬೇಕು ಎಂದರು. ಇದನ್ನ ಕಾಂಗ್ರೆಸ್​​ನವರು ಒಪ್ಪುವುದಾದರೆ ಸರಿ. ಇಲ್ಲ ಇಟಲಿ ಯೂನಿವರ್ಸಿಟಿಯಲ್ಲಿ ಅವರಿಗೆ ಕೊಟ್ಟ ಟ್ರೈನಿಂಗ್​​ನಿಂದ ಕ್ಷಮೆ ಕೇಳಲ್ಲ ಎಂದುಕೊಳ್ಳುವೆ ಎಂದರು.

ಇದನ್ನೂ ಓದಿ: 'ಆ' ಮಾತನ್ನು ವಾಪಸ್ ಪಡೆದಿದ್ದೇನೆ: ಕೆ.ಎಸ್. ಈಶ್ವರಪ್ಪ

ಕಾಂಗ್ರೆಸ್​​ನವರು ಪ್ರತಿಭಟನೆ ಮಾಡಲಿ. ಬೇಡ ಅಂದವರು ಯಾರು?. ಕೆಟ್ಟು ಕನಸು ಬೀಳುತ್ತಿರುವುದು ಸಿದ್ದರಾಮಯ್ಯನವರಿಗೆ. ನನಗೆ ಕನಸು ಬೀಳುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಅಧಿಕಾರ ಕಳೆದುಕೊಂಡಾಗಿನಿಂದ‌ ಸಿದ್ದರಾಮಯ್ಯಗೆ ಕೆಟ್ಟ ಕನಸು ಬೀಳುತ್ತಿವೆ: ಈಶ್ವರಪ್ಪ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.