ETV Bharat / city

ರಮೇಶ್ ಜಾರಕಿಹೊಳಿ ಹುಡುಗಾಟದ ರಾಜಕಾರಣಿ, ಅವರ ಪಾಪದ ಕೊಡ ತುಂಬಿದೆ: ಹೆಚ್​ಡಿಕೆ

ರಾಜೀನಾಮೆ ಕೊಟ್ಟಿರುವ ಅನರ್ಹ ಶಾಸಕರು, ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಮಾಡಿಕೊಂಡರು ಎಂಬುದನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು.

Former chief minister h.d.kumarswamy
author img

By

Published : Nov 19, 2019, 3:35 AM IST

ಗೋಕಾಕ್​: ರಾಜೀನಾಮೆ ಕೊಟ್ಟಿರುವ ಅನರ್ಹ ಶಾಸಕರು, ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಮಾಡಿಕೊಂಡರು ಎಂಬುದನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತೇವೆ. ರಮೇಶ್ ಜಾರಕಿಹೊಳಿ ಹುಡುಗಾಟದ ರಾಜಕಾರಣಿ. ಅವರ ಪಾಪದ ಕೊಂಡ ತುಂಬಿದೆ. ಇಲ್ಲಿನ ಜನರು ಹೊಸ ರಾಜಕೀಯದ ಇತಿಹಾಸ ಬರೆಯಲು ನಿರ್ಧರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ಗೋಕಾಕ್​​ ಉಪಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿ ಮಾತನಾಡಿದ ಅವರು, ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿದ್ದರು. ಈ ಪುಣ್ಯಾತ್ಮ ಬಾಂಬೆಯಲ್ಲಿದ್ದ. ಸಂತ್ರಸ್ತರ ಬದುಕು ಏನಾಗಿದೆ ಎಂದು ರಾಜೀನಾಮೆ ಕೊಟ್ಟವರಾರಿಗೂ ಗೊತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಉಪಚುನಾವಣೆ ತಂದವರು. ಅವರನ್ನು ಗೆಲ್ಲಿಸಿದರೆ, ಬರುವ ಪ್ರಯೋಜನ ಏನು ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ

ಮಾಧ್ಯಮದವರು ಬೆಳಗಾವಿಯ ಸಾಹುಕಾರ್‌ ಎನ್ನುತ್ತಾರೆ. ಅವರೇನು ದೊಡ್ಡ ಶ್ರೀಮಂತ ಅಲ್ಲ. ಇನ್ನೂ ಬೆಳಗಾವಿಯಲ್ಲಿ ಮೂರು ಲಕ್ಷ, ಗೋಕಾಕದಲ್ಲಿ 40 ಸಾವಿರ ರೈತರ ಸಾಲಮನ್ನಾ ಆಗಿದೆ. ಸಾಲಮನ್ನಾವಾದ ಮನೆಗಳಲ್ಲಿ ಮೂರು ಮತ ಬಿದ್ದರೂ ಜೆಡಿಎಸ್​ ಅಭ್ಯರ್ಥಿ ಗೆಲ್ಲುತ್ತಾನೆ. ನಮ್ಮಿಂದಾದ‌ ಲೋಪಗಳಿಂದ ಅತೀ ಕಡಿಮೆ ಮತಗಳಿಂದ ಅಶೋಕ ಪೂಜಾರಿ 2008ರಲ್ಲಿ ಸೋಲನುಭವಿಸಿದರು. ಆದರೂ, ತಾಲೂಕಿನ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರವಾಗಿದೆ ಎಂದು ಹೇಳಿದರು.

ಒಂದು ವಾರ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿ, ಎಲ್ಲ ವಿಷಯಗಳನ್ನು ಜನರ ಗಮನಕ್ಕೆ ತರುತ್ತೇನೆ. ರಾಜ್ಯದಲ್ಲಿ ಮೂರು ಪಕ್ಷಗಳಿಗೆ ಈ ಪರಿಸ್ಥಿತಿ ಅಗ್ನಿ ಪರೀಕ್ಷೆ ಆಗಿದೆ. ಯಾವ ಪಕ್ಷದೊಂದಿಗೂ ರಾಜಿ ಇಲ್ಲ. ಅಶೋಕ್ ಪೂಜಾರಿಯವರ ಗೆಲುವೆ ನನ್ನ ಮುಂದಿನ ಗುರಿ. ಮತ್ತೆ ಅಶೋಕ ಪೂಜಾರಿ ತವರು ಮನೆ ಸೇರಿದ್ದಾರೆ. 15 ವರ್ಷ ರಾಜಕೀಯದ ಕತ್ತಲೆ ಜೀವನ ಕಳೆದಿರುವ ಅವರು, 2020ಕ್ಕೆ ರಾಜಕೀಯ ಜೀವನ ಬೆಳಕಾಗಲಿದೆ ಎಂದರು.

Intro:ರಮೇಶ ಜಾರಕಿಹೊಳಿ ಅವರ ಪಾಪದ ಕೊಂಡ ತುಂಬಿದ್ದು: ಮಾಜಿ ಸಿಎಂ ಕುಮಾರಸ್ವಾಮಿBody:ಗೋಕಾಕ: ಗೋಕಾಕ ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನಗರಕ್ಕೆ ಆಗಮಿಸಿ ಅಶೋಕ ಪೂಜಾರಿ ಅವರ ಜ್ಞಾನ ಮಂದಿರಕ್ಕೆ ಆಗಮಿಸಿ ಪತ್ರಕರ್ತರ ಉದ್ದೇಶಿಸಿ ಮಾತನಾಡಿದರು.

2008 ರಲ್ಲಿ ಕೆಲವೇ ಮತಗಳಿಂದ ಅಶೋಕ ಪೂಜಾರಿ ಸೋತರು, ನಮ್ಮಿಂದ ಆದ‌ ಲೋಪಗಳಿಂದ ಅವರು ಯಶಸ್ಸು ಕಂಡಿಲ್ಲ, ಆದರೂ ಅವರು ತಾಲೂಕಿನ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರವಾಗಿದೆ. 18 ಜನ ಶಾಸಕರು ರಾಜೀನಾಮೆ‌ ಕೊಟ್ಟಿದ್ದಾರೆ. ಯಾವ ಕಾರಣಕ್ಕೆ ಅವರು ಭಿನ್ನಾಭಿಪ್ರಾಯ ಮಾಡಿಕೊಂಡರು ಎಂದು ಚುನಾವಣಾ ಪ್ರಚಾರದ ವೇಳೆ ಎಲ್ಲ ವಿಷಯ ಪ್ರಸ್ತಾಪ ಮಾಡುತ್ತೆ‌ನೆ. ರಮೇಶ್ ಜಾರಕಿಹೊಳಿ ಒಬ್ಬ ಹುಡುಗಾಟದ ರಾಜಕಾರಣಿ ಅವರ ಪಾಪದ ಕೊಂಡ ತುಂಬಿದ್ದು, ಇಲ್ಲಿಯ ಜನ ಹೊಸ ರಾಜಕೀಯದ ಇತಿಹಾಸ ಬರೆಯಲು ನಿರ್ಧಾರ ಮಾಡಿದ್ದಾರೆ ಎಂದರು.

ಮಳೆಯ ಅನಾಹುತದಲ್ಲಿ ಜನ ಸಂಕಷ್ಟದಲ್ಲಿದ್ದರು ಆದರೆ ಈ ಪುಣ್ಯಾತ್ಮ ಬಾಂಬೆಯಲ್ಲಿ ಕುಳಿತಿದ್ದ, ನೆರೆ ಸಂತ್ರಸ್ಥರ ಬದುಕು ಎನಾಗಿದೆ‌ ಎಂದು ಯಾರಿಗೂ ತಿಳಿದಿಲ್ಲ ಇಂತ ಸನ್ನಿವೇಶದಲ್ಲಿ ಎಲೆಕ್ಷ‌ನ ತಂದವರು.

ಪ್ರತಿನಿತ್ಯ ಮಾಧ್ಯಮದ ಮಿತ್ರರು ಬೆಳಗಾವಿ ಸಾಹುಕಾರ್‌ ಎಂದು ಹೇಳ್ತಾರೆ, ಅವರು ಯಾವಗ ಸಾಹುಕಾರ ಯಾರ ಮಾಡಿದರು ಗುರುತಿಲ್ಲ, ಯಾವ ರೀತಿ ಸಾವಕಾರ ಆದರೂ ಎಂದು ಪರಿಚಯ ತಿಳಿಯಬೇಕಿದೆ. ಅವರೇನು ದೊಡ್ಡ ಶ್ರೀಮಂತ ಅಲ್ಲ ಎಂದರು.ಇನ್ನೂ ಬೆಳಗಾವಿಯಲ್ಲಿ ಅತ್ಯಂತ ಹೆಚ್ಚಿನ ಅಂದರೆ ೩ ಲಕ್ಷ ರೈತ  ಕುಟುಂಬಗಳಿ ಸಾಲ ಮನ್ನಾ ಆಗಿದೆ, ಗೋಕಾಕ ಮತಕ್ಷೇತ್ರದಲ್ಲಿ ೪೦ ಸಾವಿರ ಜನ ರೈತರ ಸಾಲಮನ್ನಾ ಆಗಿದೆ, ಪ್ರತಿಯೊಬ್ಬರು ಮೂರು ಮೂರು ಓಟ್ ನಮಗೆ ಮತ ಹಾಕಿದರೂ ಸಹ ೧ ಲಕ್ಷಕ್ಕೂ ಅಧಿಕ ಮತಗಳಾಗ್ತವೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ನಾನು ಒಂದು ವಾರಗಳ ಕಾಲ ಬೆಳಗಾವಿಯಲ್ಲೆ ಇದ್ದು ಎಲ್ಲ ವಿಷಯಗಳನ್ನು ನಾನು ಜನರ ಗಮನಕ್ಕೆ ತರುತ್ತೆನೆ ಎಂದರು. ಇವತ್ತು ರಾಜ್ಯದಲ್ಲಿ ಮೂರು ಪಕ್ಷದ ಪರಿಸ್ಥಿತಿ ಅಗ್ನಿ ಪರೀಕ್ಷೆ ಆಗಿದೆ. ಯಾವುದೇ ಪಕ್ಷದ ಜೊತೆ ರಾಜಿ ಇಲ್ಲ. ಅಶೋಕ್ ಪೂಜಾರಿಯವರ ಗೆಲುವೆ ನನ್ನ  ಮುಂದಿನ ಗುರಿ ಎಂದರು.
ಅಶೋಕ ಪೂಜಾರಿ ಈಗ ಅವರ ತವರಮನೆಗೆ ಬಂದಿದ್ದಾರೆ ಅವರ ಸ್ವಂತ ಮನೆ ಜೆಡಿಎಸ್. ಹೊಸ ರಾಜಕೀಯದ ಭವಿಷ್ಯ 2020ಕ್ಕೆ ಬೆಳಗಾವಿಯಿಲ್ಲಿ ಆದಂತಹ ಅನಾಹುತಕ್ಕೆ ಮತ್ತು ಆ ಕುಟುಂಬಗಳಿಗೆ ಹೊಸ ಜೀವನ ಕಟ್ಟಿಕೊಡುತ್ತದೆ. ಮತ್ತು 15 ವರ್ಷ ರಾಜಕೀಯದ ಕತ್ತಲೆಯ ಜೀವನವನ್ನು ಅಶೋಕ್ ಪೂಜಾರಿಯವರು ಕಳೆದಿದ್ದಾರೆ, 2020ಕ್ಕೆ ಅವರ ರಾಜಕೀಯ ಜೀವನದಲ್ಲಿ ಬೆಳಕಾಗುತ್ತದೆ ಎಂದರು.

KN_GKK_02_18_KUMARSWAMY_PRESSMEET_VISAL_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.