ETV Bharat / city

ದೇಶದಲ್ಲೀಗ ನಡೆಯುತ್ತಿರುವ ರೈತರ ಹೋರಾಟಕ್ಕೆ ಪ್ರಾಯೋಜಕತ್ವವಿದೆ : ಕಡಾಡಿ ಆರೋಪ - farmers protest against farm bills

ನೂನತ ಕೃಷಿ ಮಸೂದೆಗಳ ಬಗ್ಗೆ ಪ್ರಧಾನಿ ಹಾಗೂ ಕೃಷಿ ಸಚಿವರು ಉಭಯ ಸದನಗಳಲ್ಲಿ ತಿಳಿಸಿದ್ದಾರೆ. ಎಂಎಸ್‍ಪಿ ದರದ ಅನ್ವಯ ಪಂಜಾಬಿ ಗೋದಿ ಹಾಗೂ ಹರಿಯಾಣದ ಅಕ್ಕಿ ಶೇ. 60ರಷ್ಟು ದೇಶಾದ್ಯಂತ ಖರೀದಿಯಾಗಿದೆ. ರೈತರ ಹೋರಾಟಕ್ಕೆ ನಮ್ಮ ರಾಜ್ಯದ ರೈತರೇಕೆ ಬೆಂಬಲಿಸುತ್ತಿದ್ದಾರೆ..

farmer-protest-are-sponsored
ಈರಣ್ಣ ಕಡಾಡಿ
author img

By

Published : Feb 6, 2021, 5:47 PM IST

ಬೆಳಗಾವಿ : ಕೇಂದ್ರದ ನೂತನ ಕೃಷಿ ಕಾನೂನು ಜಾರಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪ್ರಾಯೋಜಕತ್ವವಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟ ಇಂದು ರೈತರ ಕೈಯಲ್ಲಿ ಉಳಿದಿಲ್ಲ, ಅದನ್ನು ಹೈಜಾಕ್ ಮಾಡಲಾಗಿದೆ. ಪ್ರಧಾನಿ ವಿರುದ್ಧ ಮಾತನಾಡಲು ಯಾವ ಅಂಶಗಳು ಪ್ರತಿಪಕ್ಷಗಳಿಗೆ ಸಿಗುತ್ತಿಲ್ಲ.

ಅಮಾಯಕ ರೈತರನ್ನು ಪ್ರಚೋದಿಸುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಮಾಡುತ್ತಿವೆ. ಕೇಂದ್ರದ ನೂತನ ಕೃಷಿ ಮಸೂದೆಗಳಲ್ಲಿ ಯಾವ ಅಂಶ ಒಳ್ಳೆಯದಿಲ್ಲ ಎಂದು ಹೇಳಲು ರೈತರು ವಿಫಲರಾಗಿದ್ದಾರೆ.

ದೇಶದಲ್ಲಿನ ಈ ರೈತರ ಹೋರಾಟಕ್ಕೆ ಪ್ರಯೋಜಕತ್ವವಿದೆ..

ನೂತನ ಮಸೂದೆಯ ಲೋಪ ಯಾರೂ ಹೇಳುತ್ತಿಲ್ಲ : ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಪ್ರತಿಪಕ್ಷದ ಸದಸ್ಯರು ನೂತನ ಮಸೂದೆಯಲ್ಲಿನ ಲೋಪ ಹೇಳುತ್ತಿಲ್ಲ. ಕೇವಲ ನೂತನ ಮಸೂದೆಗಳು ರೈತ ವಿರೋಧಿ ಎಂದು ಜನರಲ್ ಹೇಳಿಕೆ ನೀಡುತ್ತಿದ್ದಾರೆ. ಆದರೆ, ರೈತರಾಗಲಿ, ಪ್ರತಿಪಕ್ಷದವರು ಕೃಷಿ ಮಸೂದೆಯಲ್ಲಿನ ಲೋಪ ತಿಳಿಸಲು ಯಾರಿಗೂ ಸಾಧ್ಯವಾಗಿಲ್ಲ. ಇವತ್ತು ನಡೆಯುತ್ತಿರುವ ಹೋರಾಟ ರೈತ ಹೋರಾಟವಾಗಿಲ್ಲ, ಇದು ಪ್ರಾಯೋಜಕತ್ವದ ಹೋರಾಟವಾಗಿದೆ.

ಪಂಜಾಬಿನ ರೈತರಿಗೆ ನಮ್ಮ ರೈತರಿಂದೇಕೆ ಬಂಬಲ? : ಭಾರತದ ಹೋರಾಟಕ್ಕೆ ವಿದೇಶಿಗರು ಬೆಂಬಲ ನೀಡುವ ಮಟ್ಟಿಗೆ ಈ ಹೋರಾಟ ಬಂದು ನಿಂತಿದೆ. ನೂನತ ಕೃಷಿ ಮಸೂದೆಗಳ ಬಗ್ಗೆ ಪ್ರಧಾನಿ ಹಾಗೂ ಕೃಷಿ ಸಚಿವರು ಉಭಯ ಸದನಗಳಲ್ಲಿ ತಿಳಿಸಿದ್ದಾರೆ. ಎಂಎಸ್‍ಪಿ ದರದ ಅನ್ವಯ ಪಂಜಾಬಿ ಗೋದಿ ಹಾಗೂ ಹರಿಯಾಣದ ಅಕ್ಕಿ ಶೇ. 60ರಷ್ಟು ದೇಶಾದ್ಯಂತ ಖರೀದಿಯಾಗಿದೆ. ರೈತರ ಹೋರಾಟಕ್ಕೆ ನಮ್ಮ ರಾಜ್ಯದ ರೈತರೇಕೆ ಬೆಂಬಲಿಸುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ.

ರೈತ ಮುಖಂಡರು ತಮ್ಮ ಬೇಡಿಕೆ ಕುರಿತು ರೈತರಿಗೆ ತಿಳಸಲಿ : ಹೋರಾಟ ಮಾಡುತ್ತಿರುವ ರೈತ ಮುಖಂಡರು ತಮ್ಮ ಪ್ರಮುಖ ಬೇಡಿಕೆ ಏನು ಎಂಬುವುದನ್ನು ರಾಜ್ಯದ ರೈತರಿಗೆ ಉತ್ತರಿಸಬೇಕಿದೆ. ರೈತರ ಆದಾಯ ದ್ವಿಗುಣವಾಗಬೇಕು ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತಂದಿದೆ. ಹೋರಾಟಗಾರರ ಜತೆಗೆ 11 ಸಲ ಕೇಂದ್ರ ಸರ್ಕಾರ ಸಭೆ ನಡೆಸಿದೆ. ಸಭೆಯಲ್ಲಿ ಮಸೂದೆಯಲ್ಲಿನ ಲೋಪವನ್ನು ಯಾವೊಬ್ಬ ಮುಖಂಡರು ಹೇಳುತ್ತಿಲ್ಲ. ಲೋಪ ಇಲ್ಲದ ಮಸೂದೆಯನ್ನು ಹಿಂಪಡೆಯಿರಿ ಎಂಬ ಬೇಡಿಕೆ ಇಡುತ್ತಿರುವುದು ವಿಪರ್ಯಾಸ ಎನಿಸುತ್ತಿದೆ ಎಂದು ಈರಣ್ಣ ಕಡಾಡಿ ಪ್ರತಿಕ್ರಿಯೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.