ETV Bharat / city

ಅಥಣಿಯಲ್ಲಿ ಕಾಲೇಜು ಬಸ್​ಗೆ ಕ್ಯಾಂಟರ್ ಡಿಕ್ಕಿ.. ಚಾಲಕರಿಬ್ಬರೂ ಸಾವು, ಹಲವು ವಿದ್ಯಾರ್ಥಿಗಳ ಸ್ಥಿತಿ ಗಂಭೀರ - Etv Bharat Kannada

ಅಥಣಿಯಲ್ಲಿ ಕಾಲೇಜು ಬಸ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಥಣಿಯಲ್ಲಿ ಕಾಲೇಜು ಬಸ್​ಗೆ ಕ್ಯಾಂಟರ್ ಡಿಕ್ಕಿ
ಕಾಲೇಜು ಬಸ್ ಕ್ಯಾಂಟರ್ ಮಧ್ಯೆ ಡಿಕ್ಕಿ
author img

By

Published : Aug 20, 2022, 10:19 AM IST

Updated : Aug 20, 2022, 3:06 PM IST

ಅಥಣಿ (ಬೆಳಗಾವಿ): ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ‌ ಮುಖಾಮುಖಿ‌ ಭೀಕರ ರಸ್ತೆ ಅಪಘಾತದಲ್ಲಿ 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ವಾಹನ ಚಾಲಕರು ಸ್ಥಳದಲ್ಲೇ ‌ಸಾವನ್ನಪ್ಪಿದ ಘಟನೆ ಅಥಣಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಅಪಘಾತ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ‌ಖಾಸಗಿ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಹಾಗೂ ಕ್ಯಾಂಟರ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾಲೇಜು ವಾಹನ ಚಾಲಕ ಮತ್ತು ಕ್ಯಾಂಟರ್ ವಾಹನ ಚಾಲಕ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ರಘುನಾಥ ಅವತಾಡೆ (45) ಹಾಗೂ ಮಲೀಕಸಾಬ ಮುಜಾವರ (23) ಮೃತಪಟ್ಟ ಚಾಲಕರೆಂದು ತಿಳಿದು ಬಂದಿದೆ.

ಅಥಣಿಯಲ್ಲಿ ಕಾಲೇಜು ಬಸ್​ಗೆ ಕ್ಯಾಂಟರ್ ಡಿಕ್ಕಿ

ಇನ್ನೂ 75ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಬಸ್​​ನಲ್ಲಿ 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಈಗಾಗಲೇ ಅಥಣಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಬಸ್​ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರತೆಗೆಯುತ್ತಿದ್ದಾರೆ. ಈ ವೇಳೆ, ಭಯಗೊಂಡ ವಿದ್ಯಾರ್ಥಿಗಳು ಕಿರುಚಾಟ ನಡೆಸುತ್ತಿದ್ದಾರೆ. ಅಪಘಾತದ ಸುದ್ದಿ ತಿಳಿದು ಕುಟುಂಬಸ್ಥರು ಕೂಡ ಆತಂಕ್ಕೆ ಒಳಗಾಗಿದ್ದಾರೆ. ಇದರಿಂದ ಸ್ಥಳದಲ್ಲೇ ಜನಜಂಗುಳಿ ತುಂಬಿದ್ದು, ಅವರನ್ನು ‌ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಅಥಣಿಯಲ್ಲಿ ಕಾಲೇಜು ಬಸ್​ಗೆ ಕ್ಯಾಂಟರ್ ಡಿಕ್ಕಿ

(ಇದನ್ನೂ ಓದಿ: ಭೂ ಕುಸಿತದಿಂದ ಪಂಚಾಯಿತಿ ಅಧ್ಯಕ್ಷನ ಮನೆ ನೆಲಸಮ.. ಏಳು ಜನ ಸಾವು, ಘಟನಾ ಸ್ಥಳಕ್ಕೆ ತಲುಪದ ರಕ್ಷಣಾ ತಂಡ)

ಅಥಣಿ ಪಟ್ಟಣದಿಂದ ಕಾಲೇಜು ಕಡೆ ಬರುತ್ತಿರುವ ಬಸ್ ಹಾಗೂ ಕಾಗವಾಡ ಕಡೆಯಿಂದ ಅಥಣಿ ಕಡೆ ಬರುತ್ತಿರುವ ಗೂಡ್ಸ್ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಇದಾಗಿದೆ. ಈ ಬಸ್​ನಲ್ಲಿ 75 ಜನರನ್ನು ಕರೆದುಕೊಂಡು ಕಾಲೇಜಿಗೆ ಹೊರಟಿರುವಾಗ ಈ ಅಪಘಾತ ಸಂಭವಿಸಿದೆ. 39 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಓರ್ವ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಚಿಕಿತ್ಸೆ ಬೇಕಾಗಿದೆ. ಇದರಲ್ಲಿ ಇಬ್ಬರೂ ವಾಹನ ಚಾಲಕರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಮಾಹಿತಿ ನೀಡಿದರು.

Last Updated : Aug 20, 2022, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.