ETV Bharat / city

ಪೂಜಾರಿ ಮನವೊಲಿಸಲು ಬಿಜೆಪಿ ನಾಯಕರ ದಂಡು... ಇಂದು ನಿರ್ಧಾರ ಪ್ರಕಟ - ಅಶೋಕ್​ ಪೂಜಾರಿ ಮನವೊಲಿಕೆ

ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಟಿಕೆಟ್​ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುನಿಸಿಕೊಂಡಿರುವ ಅಶೋಕ ಪೂಜಾರಿ ಅವರನ್ನು ಮನವೊಲಿಸಲು ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಪ್ರಯತ್ನಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಮ್ಮ ಪುತ್ರ ಅಮರನಾಥ ಹಾಗೂ ಎಸ್.ಎ. ಕೊತವಾಲ ಅವರೊಂದಿಗೆ ಆಗಮಿಸಿ ಚರ್ಚಿಸಿದ್ದಾರೆ.

Ashok pujari demand for by-election Ticket
author img

By

Published : Nov 17, 2019, 6:24 AM IST

ಗೋಕಾಕ್​​: ಗೋಕಾಕ್​ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಟಿಕೆಟ್​​ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಬಿಜೆಪಿಯ ನಾಯಕರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಅಶೋಕ ಪೂಜಾರಿ ಅವರನ್ನು ಮನವೊಲಿಸಲು ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ಪ್ರಯತ್ನ ನಡೆಸಿದ್ದಾರೆ. ಮೊದಲು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಗೋಕಾಕ ಉಸ್ತುವಾರಿ ಎ. ಎಸ್. ಪಾಟೀಲ (ನಡಹಳ್ಳಿ), ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಿಕಾಯಿ ಅವರು ಸಂಜೆಗೆ ಅಶೋಕ ಪೂಜಾರಿ ಮನೆಗೆ ಆಗಮಿಸಿ ಚರ್ಚಿಸಿದರು. ಅದೇ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಮ್ಮ ಪುತ್ರ ಅಮರನಾಥ ಹಾಗೂ ಎಸ್.ಎ. ಕೊತವಾಲ ಅವರೊಂದಿಗೆ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸಿದರು.

ಅಶೋಕ ಪೂಜಾರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ

ಭೇಟಿಯ ಬಳಿಕ ಸುರೇಶ ಅಂಗಡಿ ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ಅಶೋಕ ಪೂಜಾರಿ ತಮ್ಮ ನಿರ್ಧಾರವನ್ನು ನಾಳೆ ಸಂಜೆಗೆ ತಿಳಿಸುವುದಾಗಿ ಹೇಳಿದ್ದಾರೆ. ಅವರು ಪಕ್ಷ ಸೂಚಿಸುವ ಅಭ್ಯರ್ಥಿಯ ಪರ ಕೆಲಸ ಮಾಡುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದರು.

ರಮೇಶ ಜಾರಕಿಹೊಳಿ ಮಾತನಾಡಿ, ಅಶೋಕ ಪೂಜಾರಿ ನನ್ನ ಸ್ನೇಹಿತ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಮುನಿಸಿಕೊಂಡಿದ್ದ ಅಶೋಕ ಪೂಜಾರಿ ಮನವೊಲಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದು, ಅವರ ನಿಲುವು ಏನು ಎಂಬುದನ್ನು ತಿಳಿದುಕೊಳ್ಳಲು ಭಾನುವಾರದವರೆಗೂ ಕಾಯಬೇಕಿದೆ.

Intro:ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಂದ ಅಶೋಕ ಪೂಜಾರಿ ಅವರ ಮನವೊಲಿಕೆಗೆ ಯತ್ನBody:ಗೋಕಾಕ: ಉಪಚುನಾವಣೆಯ ನಾಮಪತ್ರ ಸಲ್ಲಿಸಲು ಕೊನೆಯ ದಿನ ಸಮೀಪಿಸುತ್ತಿರಾಗ ಬಿಜೆಪಿ ಪಕ್ಷದ ಭಿನ್ನಾಭಿಪ್ರಾಯ ಅಂತ್ಯಗೊಳಿಸಲು ಪ್ರಯತ್ನಗಳು ನಡೆದಿವೆ. ಅದೇ ನಿಟ್ಟಿನಲ್ಲಿ ಕೇಂದ್ರದ ರೇಲ್ವೆ ಸಚಿವ ಸುರೇಶ ಅಂಗಡಿ ಅವರು ನಗರಕ್ಕೆ ಆಗಮಿಸಿ ಬಿಜೆಪಿ ಪಕ್ಷದ ಟಿಕಿಟ್ ಆಕಾಂಕ್ಷಿಯಾಗಿದ್ದ ಅಶೋಕ ಪೂಜಾರಿ ಅವರನ್ನು ಮನವೊಲಿಸಲು ಪ್ರಯತ್ನ ನಡೆಸಿದರು.

ಮೊದಲು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಗೋಕಾಕ ಉಸ್ತುವಾರಿ ಎ.ಎಸ್. ಪಾಟೀಲ (ನಡಹಳ್ಳಿ), ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಸಂಜೆಗೆ ಅಶೋಕ ಪೂಜಾರಿ ಅವರ ಮನೆಗೆ ಆಗಮಿಸಿ ಚರ್ಚಿಸಿದರು. ಅದೇ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ತಮ್ಮ ಸುಪುತ್ರ ಅಮರನಾಥ ಹಾಗೂ ಎಸ್.ಎ.ಕೊತವಾಲ ಅವರೊಂದಿಗೆ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸಿದರು.

ಚರ್ಚೆಯ ನಂತರ ಕೇಂದ್ರ ರೇಲ್ವೆ ಸಚಿವ ಸುರೇಶ ಅಂಗಡಿ ಪತ್ರಕರ್ತರ ಜೊತೆ ಮಾತನಾಡಿ  ಗೋಕಾಕ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಅತ್ಯಧಿಕ ಮತಗಳಿಂದ ಆರಿಸಿ ತರಬೇಕೆಂದು ಕೇಳಿಕೊಳ್ಳುವದಕ್ಕೆ ಆಗಮಿಸಿದ್ದು ಅಶೋಕ ಪೂಜಾರಿ ಅವರು ನಮ್ಮ ಪಕ್ಷದ ಮುಖಂಡರಿದ್ದು ಅವರನ್ನು ಭೇಟಿಯಾಗಿ ಚರ್ಚಿಸಿದೆ ಎಂದು ಹೇಳಿದರು. ಅಶೋಕ ಪೂಜಾರಿ ಅವರು ತಮ್ಮ ನಿರ್ಧಾರವನ್ನು ನಾಳೆ ಸಂಜೆಗೆ ತಿಳಿಸುವದಾಗಿ ಹೇಳಿದ್ದು ಅವರು ನಮ್ಮ ಪಕ್ಷದ ಅಭ್ಯರ್ಥಿಪರ ಕಾರ್ಯ ಮಾಡುವರೆಂಬ ಆಶಾಭಾವನೆ ಹೊಂದಿರುವಾಗಿ ಸುರೇಶ ಅಂಗಡಿ ತಿಳಿಸಿದರು.

ರಮೇಶ ಜಾರಕಿಹೊಳಿ ಮಾತನಾಡಿ ಅಶೋಕ ಪೂಜಾರಿ ನನ್ನ ಸ್ನೇಹಿತ. ಅವರು ನಾಳೆ ತಮ್ಮ ನಿರ್ಧಾರ ತಿಳಿಸುವದಾಗಿ ಹೇಳಿದ್ದಾರೆ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪ್ರಯತ್ನಿಸುವದಾಗಿ ತಿಳಿಸಿದರಲ್ಲದೆ ಅಶೋಕ ಪೂಜಾರಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವರೆಂಬ ವಿಶ್ವಾಸವಿದೆ ಎಂದರು.

ಒಟ್ಟಾರೆ ಅಶೋಕ ಪೂಜಾರಿ ಅವರ ಮನವೊಲಿಸಲು ಬಿಜೆಪಿ ಮುಖಂಡರು ಸರ್ವ ರೀತಿಯಿಂದ ಪ್ರಯತ್ನಿಸುತ್ತಿದ್ದು ಅವರು ತಮ್ಮ ನಿಲುವು ಪ್ರಕಟಿಸದೆ ಗುಟ್ಟಾಗಿ ಕಾಯ್ದುಕೊಂಡಿದ್ದು ಅದರ ಫಲಶ್ರುತಿಗಾಗಿ ನಾಳೆಯವರೆಗೆ ಕಾಯುವಂತಾಗಿದೆ.

KN_GKK_03_16_SURESHANGADI_STATEMENT_VISAL_KAC10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.