ETV Bharat / city

ನಮ್ಮನ್ನೆಲ್ಲ ನೆಗ್ಲೆಟ್ ಮಾಡಿರುವುದೇ ಪರಿಷತ್ ಚುನಾವಣೆ ಸೋಲಿಗೆ ಕಾರಣ : ಶಾಸಕ ಯತ್ನಾಳ್

author img

By

Published : Dec 15, 2021, 1:57 PM IST

Updated : Dec 15, 2021, 4:04 PM IST

Basanagouda Yatnal : ವಿಧಾನ ಪರಿಷತ್‌ ಚುನಾವಣೆ ವೇಳೆ ನಮ್ಮನ್ನು ಕಡೆಗಣಿಸಿರುವುದೇ ಬಿಜೆಪಿ ಹಿನ್ನಡೆಗೆ ಕಾರಣ ಎಂದು ಶಾಸಕ ಬಸನಗೌಡ ಯತ್ನಾಳ್‌ ಹೇಳಿದ್ದಾರೆ..

All of us have neglected to lose the council elections: Basanagouda Yatnal
ನಮ್ಮನ್ನೆಲ್ಲ ನೆಗ್ಲೆಟ್ ಮಾಡಿರುವುದೇ ಪರಿಷತ್ ಚುನಾವಣೆ ಸೋಲಿಗೆ ಕಾರಣ: ಯತ್ನಾಳ್

ಬೆಳಗಾವಿ : ನಮ್ಮನ್ನೆಲ್ಲ ನೆಗ್ಲೆಟ್‌ ಮಾಡಿರುವುದೇ ವಿಧಾನ ಪರಿಷತ್‌ ಚುನಾವಣೆಯಲ್ಲಿನ ಹಿನ್ನಡೆಗೆ ಕಾರಣ ಎಂದು ಶಾಸಕ ಬಸನಗೌಡ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ನಮ್ಮನ್ನೆಲ್ಲ ನೆಗ್ಲೆಟ್ ಮಾಡಿರುವುದೇ ಪರಿಷತ್ ಚುನಾವಣೆ ಸೋಲಿಗೆ ಕಾರಣ : ಶಾಸಕ ಯತ್ನಾಳ್

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಎರಡನೇ ಪ್ರಾಶಸ್ತ್ಯದಲ್ಲಿ ಬಿಜೆಪಿ ಗೆಲುವು ಹಿನ್ನಡೆಯಲ್ವಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಯಾಕೆ ಹಿನ್ನಡೆ ಆಗ್ತಿದೆ ಅಂದ್ರೆ ನಮ್ನನ್ನೆಲ್ಲ ನೆಗ್ಲೆಟ್ ಮಾಡಿದ್ದಾರೆ. ಸಿಂಧಗಿಯಲ್ಲಿ ಜವಾಬ್ದಾರಿ ಕೊಟ್ಟಿದ್ದರು. 34 ಸಾವಿರ ಮತಗಳಲ್ಲಿ ಗೆಲ್ಲಿಸಿದ್ದೆ.

ಈ ಚುನಾವಣೆಗೆ ಪ್ರಚಾರಕ್ಕೆ ಕರೆಯಲಿಲ್ಲ. ಬಿಜೆಪಿಗೆ ಮತ ಹಾಕಿ ಎಂದು ಹೇಳಿ ಮನೆಯಲ್ಲಿ ಕೂತೆ. ಯಡಿಯೂರಪ್ಪನವರು ಬಂದಿದ್ದರು, ಯಾವುದೋ ಯಾತ್ರೆ ತೆಗೆದುಕೊಂಡು ಆಗ್ಲೂ ಕರೆಯಲಿಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಪದೇಪದೆ ಯಡಿಯೂರಪ್ಪ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ನವಗ್ರಹಗಳು ಇರುತ್ತೆ, ಅದಕ್ಕೆ ಶಾಂತಿ ಮಾಡಬೇಕಾಗುತ್ತದೆ. ರಾಹು-ಕೇತು ಎರಡು ದೊಡ್ಡ ಗ್ರಹಗಳು. ಈ ಗ್ರಹಗಳಿಂದ ಭವಿಷ್ಯದಲ್ಲಿ ಸಮಸ್ಯೆ ಆಗಬಾರದು. ಇದಕ್ಕಾಗಿ ಶಾಂತಿ ಮಾಡಬೇಕಿದೆ ಎಂದು ಟಾಂಗ್ ನೀಡಿದರು.

ಸಿಎಂಗೆ ಯಾವ ಶಾಂತಿ ಮಾಡಿಸಿದ್ರೆ ಒಳ್ಳೆಯದ್ ಎಂಬ ಪ್ರಶ್ನೆಗೆ, ಮೊನ್ನೆ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿ ಬಂದಿದ್ದಾರೆ. ಈಗ ರಾಹು-ಕೇತು ಶಾಂತ ಆಗುತ್ತೆ ಎಂದರು.

ಎಲ್ಲೆಲ್ಲಿ ಸೋಲಾಗಿದೆ ಎಂಬುದರ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜ್ಯಾಧ್ಯಕ್ಷರು ಯಾಕೆ ಸೋಲಾಯ್ತು ಅನ್ನೋದ್ರ ಬಗ್ಗೆ ಚರ್ಚೆ ಮಾಡಬೇಕು. ಎಲ್ಲಾ ನಾಯಕರನ್ನ ಕರೆದು ಚರ್ಚೆ ಮಾಡಬೇಕು. ಯಾರೆಲ್ಲ ನಾಯಕರನ್ನ‌ ದೂರ ತಳ್ಳಿದ್ದಾರೆ ಅವರನ್ನ ಕರೆಸಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.

ನಾನು ಸಾಮಾನ್ಯ ಎಂಎಲ್‌ಎ ಇದ್ದೇನೆ. ನಮ್ಮಂತ ಅಪ್ರಮಾಣಿಕ ಭ್ರಷ್ಟರನ್ನ, ಅಯೋಗ್ಯರನ್ನ ಎಲ್ಲಿ ಸಚಿವರನ್ನಾಗಿ ಮಾಡ್ತಾರೆ. ಪ್ರಮಾಣಿಕರನ್ನು ಸಚಿವರನ್ನಾಗಿ ಮಾಡ್ತಾರೆ ಎಂದು ಕುಟುಕಿದ ಯತ್ನಾಳ್‌, ಬದಲಾವಣೆ ಮಾಡದಿದ್ದರೆ ಆ ಕಡೆ ಹೋಗ್ತೀವಿ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನದ್ದು ಮುಗಿದ ಕಥೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ

Last Updated : Dec 15, 2021, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.