ಚಿಕ್ಕೋಡಿ: ಮನೆಯ ಮುಂದೆ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ.
![A child who playing in front of a house in Rayabaga is missing - case registered](https://etvbharatimages.akamaized.net/etvbharat/prod-images/13097767_aaaaa.jpg)
ಅಪಹರಣವಾಗಿರುವ ಮಗು 2 ವರ್ಷದ ಶರತ್ ಸಿದ್ದಪ್ಪ ಹಸರೆ. ನಾಪತ್ತೆಯಾದ ಮಗುವನ್ನು ಹುಡುಕಿಕೊಡುವಂತೆ ಮುಗುವಿನ ತಂದೆ ಸಿದ್ದಪ್ಪ ಬಸಪ್ಪ ಹಸರೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಲಸಿಕೆ ಪಡೆಯಲು ವೃದ್ಧೆ ಹಿಂದೇಟು.. ಸಾರಾಯಿ ಆಸೆಗೆ ವ್ಯಾಕ್ಸಿನ್ ಹಾಕಿಸಿಕೊಂಡ ವ್ಯಕ್ತಿ!
ಶುಕ್ರವಾರ ಮಗು ಶರತ್ ಮನೆ ಮುಂದೆ ಆಟವಾಡುವ ಸಮಯದಲ್ಲಿ ಯಾರೋ ದುರುದ್ದೇಶದಿಂದ ನನ್ನ ಮಗನನ್ನು ಅಪಹರಣ ಮಾಡಿದ್ದಾರೆ. ಮಗುವನ್ನು ದಯವಿಟ್ಟು ಹುಡುಕಿಕೊಡಿ ಎಂದು ಮುಗುವಿನ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.