ETV Bharat / business

ರೆಪೋ, ರಿವರ್ಸ್​​ ರೆಪೋ ದರದಲ್ಲಿ ಯಥಾಸ್ಥಿತಿ : ಸತತ 11ನೇ ಬಾರಿಗೆ ಆರ್​​ಬಿಐ ನಿರ್ಧಾರ - ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಮೇ 2020ರಿಂದ ರೆಪೊ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಆರ್​ಬಿಐ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಸತತವಾಗಿ 11ನೇ ಬಾರಿಗೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ..

RBI keeps repo, reverse repo rates unchanged for 11th time in row
ರೆಪೋ, ರಿವರ್ಸ್​​ ರೆಪೋ ದರಲ್ಲಿ ಯಥಾಸ್ಥಿತಿ: ಸತತ 11ನೇ ಬಾರಿಗೆ ಆರ್​​ಬಿಐ ನಿರ್ಧಾರ
author img

By

Published : Apr 8, 2022, 1:08 PM IST

ಮುಂಬೈ, ಮಹಾರಾಷ್ಟ್ರ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಈ ಬಾರಿಯೂ ಕೂಡ ರೆಪೋ ದರ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತವಾಗಿ 11ನೇ ಬಾರಿಗೆ ಇಂತಹ ನಿರ್ಧಾರವನ್ನು ಆರ್​ಬಿಐ ತೆಗೆದುಕೊಂಡಿದೆ. ರೆಪೋ ದರ ಈಗ ಶೇ.ರ4ರಷ್ಟಿದೆ. ಯಥಾಸ್ಥಿತಿಯನ್ನು ಕಾಪಾಡಲು ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧಾರ ಮಾಡಿದೆ ಎಂದು ಆರ್​​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು 'ರೆಪೋ ದರ' ಎನ್ನುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಳಸುವ ಮಾರ್ಗ ಇದಾಗಿದೆ. ರೆಪೋ ದರ ಕಡಿಮೆ ಇದ್ದರೆ, ಅಂದರೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೆ ಬ್ಯಾಂಕ್​ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯುತ್ತದೆ. ಗ್ರಾಹಕರಿಗೂ ಹೆಚ್ಚಿನ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲು ಸಾಧ್ಯವಾಗುತ್ತದೆ. ಈಗ ರೆಪೋ ದರ ಶೇಕಡಾ 4ರಷ್ಟಿದೆ.

ಕೇವಲ ಬ್ಯಾಂಕ್​ಗಳು ಮಾತ್ರವಲ್ಲ. ಆರ್​ಬಿಐ ಕೂಡ ವಾಣಿಜ್ಯ ಬ್ಯಾಂಕುಗಳಿಂದ ಅವಶ್ಯಕತೆಗೆ ತಕ್ಕಂತೆ ಸಾಲವನ್ನು ತೆಗೆದುಕೊಳ್ಳುತ್ತದೆ. ಈ ವೇಳೆ ತೆಗೆದುಕೊಂಡ ಸಾಲಕ್ಕೆ ಬಡ್ಡಿ ದರವನ್ನು ನಿಗದಿಪಡಿಸುವ ಅಧಿಕಾರವೂ ಆರ್​ಬಿಐಗೆ ಇರುತ್ತದೆ. ಇದನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಈ ರಿವರ್ಸ್ ರೆಪೋ ದರದಲ್ಲಿಯೂ ಕೂಡ ಈ ಬಾರಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಈಗ ಪ್ರಸ್ತುತ ರಿವರ್ಸ್ ರೆಪೋ ದರವು ಶೇ.3.35ರಷ್ಟಿದೆ.

ನಾವು ಬಹುದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಮೊದಲು ಕೋವಿಡ್ ಸಾಂಕ್ರಾಮಿಕ ನಮ್ಮ ಆರ್ಥಿಕತೆ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿತ್ತು. ಈಗ ಪ್ರಮುಖ ಸರಕುಗಳ ಕೊರತೆ, ಅಂತಾರಾಷ್ಟ್ರೀಯ ಹಣಕಾಸು ವಿಚಾರದಲ್ಲಿ ನಷ್ಟ, ಉಕ್ರೇನ್ ಮತ್ತು ರಷ್ಯಾ ಯುದ್ಧ, ಭೌಗೋಳಿಕ ಮತ್ತು ರಾಜಕೀಯ ವಿಚಾರಗಳು ಪರಿಣಾಮ ಬೀರುತ್ತಿವೆ. ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯೂ ಕೂಡ ಹಣಕಾಸು ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದೇವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಣಕ್ಕಾಗಿ ಆರ್​ಬಿಐ ಆಗಾಗ ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಬದಲಾವಣೆಯಲ್ಲಿ ತೊಡಗುತ್ತದೆ. ಒಂದು ವೇಳೆ ರಿವರ್ಸ್ ರೆಪೋ ದರದಲ್ಲಿನ ಹೆಚ್ಚಳವಾದರೆ ಹಣದ ಪೂರೈಕೆ ಕಡಿಮೆಯಾಗಲಿದೆ. ರಿವರ್ಸ್ ರೆಪೋ ದರದಲ್ಲಿ ಹೆಚ್ಚಳ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಹಣವನ್ನು ಆರ್‌ಬಿಐನಲ್ಲಿ ಇಡಲು ಹೆಚ್ಚಿನ ಉತ್ಸಾಹ ತೋರುತ್ತವೆ. ಈ ಹಣಕ್ಕೆ ಆರ್​​​ಬಿಐ ಬಡ್ಡಿ ನೀಡಬೇಕಾಗಿರುವುದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ನಿಯಂತ್ರಣಕ್ಕೆ ಬರಲಿದೆ. ಮೇ 2020ರಿಂದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಆರ್​ಬಿಐ ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ: 2021-22ರಲ್ಲಿ 1 ಲಕ್ಷ ಕೋಟಿ ರೂ. ಗಡಿ ದಾಟಿದ ವಾಣಿಜ್ಯ ತೆರಿಗೆ ಸಂಗ್ರಹ : ಆದರೂ ಮುಂದುವರಿದ ಜಿಎಸ್​​ಟಿ ತೆರಿಗೆ ಕೊರತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.