ಹೈದರಾಬಾದ್: ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 5 ಲಕ್ಷದವರೆಗೆ ಗುಂಪು ಆರೋಗ್ಯ ವಿಮಾ ಪಾಲಿಸಿ ಮೂಲಕ ರಕ್ಷಣೆ ನೀಡುತ್ತದೆ. ಈ ಸಂದರ್ಭದಲ್ಲಿ ಉದ್ಯೋಗಿ ಮತ್ತೊಂದು ಪಾಲಿಸಿ ತೆಗೆದುಕೊಳ್ಳಬೇಕೇ? ಅಥವಾ ಟಾಪ್ ಅಪ್ ಸಾಕೇ? ಎಂಬುದನ್ನು ಅಗತ್ಯವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಗುಂಪು ಆರೋಗ್ಯ ವಿಮೆ ಕೇವಲ ಹೆಚ್ಚುವರಿ ರಕ್ಷಣೆಯಾಗಿದೆ. ಕೆಲಸದಲ್ಲಿರುವಾಗ ಇದು ಉಪಯುಕ್ತವಾಗಿದೆ. ಅಗತ್ಯ ಇದ್ದರೆ ಟಾಪ್-ಅಪ್ ಪಾಲಿಸಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
75 ಸಾವಿರ ಸಂಬಳ ಪಡೆಯುವವರು 50 ಲಕ್ಷದ ಟರ್ಮ್ ಪಾಲಿಸಿ ಮಾಡಿಸಬಹುದೇ?: 45 ವರ್ಷದ ವ್ಯಕ್ತಿಯೊಬ್ಬರು ನಾಲ್ಕು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ 50 ಲಕ್ಷ ರೂ.ಗಳ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಂಡಿದ್ದರು. ಈಗ ಅವರು 50 ಲಕ್ಷದವರೆಗೆ ಮತ್ತೊಂದು ಪಾಲಿಸಿ ತೆಗೆದುಕೊಳ್ಳಬಹುದೇ? ತಿಂಗಳಿಗೆ 75 ಸಾವಿರ ರೂಪಾಯಿವರೆಗೆ ಅವರು ಸಂಬಳ ಪಡೆಯುತ್ತಿದ್ದಾರೆ ಎಂದು ಇಟ್ಟುಕೊಂಡರೆ, ಅವರು 50 ಲಕ್ಷ ರೂ.ಗಳ ಹೆಚ್ಚುವರಿ ಪಾಲಿಸಿ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ. ವಿಮಾ ಕಂಪನಿಗಳು ಸಾಮಾನ್ಯವಾಗಿ ಪಾಲಿಸಿದಾರರ ವಯಸ್ಸಿನ ಆಧಾರದ ಮೇಲೆ ವಾರ್ಷಿಕ ಆದಾಯದ 10 - 22 ಪಟ್ಟು ಜೀವ ವಿಮೆಯನ್ನು ನೀಡುತ್ತವೆ.
ನಿಮ್ಮ ವಾರ್ಷಿಕ ಆದಾಯದ 10-12 ಪಟ್ಟು ವಿಮೆ ಮಾಡಿಸುವುದು ಸುರಕ್ಷಿತವಾದ ಕ್ರಮವಾಗಿದೆ. ಹೊಸ ಪಾಲಿಸಿ ತೆಗೆದುಕೊಳ್ಳುವಾಗ ಹಳೆಯ ಪಾಲಿಸಿ ವಿವರ, ಆದಾಯ ಮತ್ತು ಆರೋಗ್ಯದ ಮಾಹಿತಿಯನ್ನು ಕಡ್ಡಾಯ ನೀಡುವುದು ಅಗತ್ಯವಾಗಿದೆ. ಪ್ರೀಮಿಯಂ ಮರುಪಾವತಿ ನೀತಿಗಳು ಸಾಕಷ್ಟು ದುಬಾರಿಯಾಗಿದೆ. ಆದ್ದರಿಂದ, ಬದಲಿಗೆ ನಿಯಮಿತ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳಿ. ಉತ್ತಮ ಪಾವತಿ ಇತಿಹಾಸ ಹೊಂದಿರುವ ಕಂಪನಿಯಿಂದ ವಿಮಾ ಪಾಲಿಸಿಯನ್ನು ಪಡೆಯುವುದು ಉತ್ತಮ.
10 ವರ್ಷದ ಮಗಳಿಗೆ ತಿಂಗಳಿಗೆ 15 ಸಾವಿರ ಹೂಡಿಕೆ ಮಾಡಿದರೆ, 15 ವರ್ಷದಲ್ಲಿ ಎಷ್ಟು ಹಣ ಕೂಡಿಡಬಹುದು?: ಒಬ್ಬ ಬಾಲಕಿಗೆ 10 ವರ್ಷ ಎಂದು ಇಟ್ಟುಕೊಂಡರೆ, ಆಕೆಯ ಪೋಷಕರು ಬಾಲಕಿ ಹೆಸರಿನಲ್ಲಿ ತಿಂಗಳಿಗೆ 15,000 ರೂ.ವರೆಗೆ ಹೂಡಿಕೆ ಮಾಡಲು ಸಿದ್ದರಿದ್ದಾರೆ ಎಂದುಕೊಂಡರೆ, ನೀವು ಎಲ್ಲಿ ಹೂಡಿಕೆ ಮಾಡುತ್ತೀರೋ, ಹಣದುಬ್ಬರದ ವೆಚ್ಚವನ್ನು ಪೂರೈಸಲು ನೀವು ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವೇ ಎಂಬುದನ್ನು ಖಚಿತ ಪಡಿಸಿಕೊಂಡ ಮೇಲೆ ಹೂಡಿಕೆ ಮಾಡುವುದು ಉತ್ತಮ ಕ್ರಮವಾಗಿದೆ. ಇದಕ್ಕಾಗಿ ವೈವಿಧ್ಯಮಯ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತಿಂಗಳಿಗೆ 15 ಸಾವಿರ ರೂ.ನಂತೆ 10 ವರ್ಷಗಳ ಕಾಲ ಸರಾಸರಿ ಶೇ.12 ಆದಾಯದೊಂದಿಗೆ ಹೂಡಿಕೆ ಮಾಡಿದರೆ ಸುಮಾರು 31,58,772 ರೂ. ಆದಾಯಗಳಿಸಬಹುದು. ಆದರೆ ಇಂತಹ ಹೂಡಿಕೆ ಮಾಡುವ ಮೊದಲು ಮಗುವಿನ ಭವಿಷ್ಯದ ಅಗತ್ಯಗಳಿಗಾಗಿ ಏನು ಮಾಡಬೇಕು, ಈ ಹೂಡಿಕೆಯಿಂದ ರಕ್ಷಣೆ ಸಿಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
80 ಸಾವಿರ ಆದಾಯ ಇರುವ ವ್ಯಕ್ತಿ 2 ವರ್ಷಗಳಿಗಾಗಿ 50 ಲಕ್ಷ ಗೃಹ ಸಾಲ ಪಡೆಯಬಹುದೇ?: ಒಂದು ಕುಟುಂಬ 80 ಸಾವಿರ ರೂ ಆದಾಯ ಹೊಂದಿದ್ದು, ಎರಡು ವರ್ಷಗಳಲ್ಲಿ 50 ಲಕ್ಷದವರೆಗೆ ಗೃಹ ಸಾಲವನ್ನು ಪಡೆಯಲು ಬಯಸುತ್ತದೆ ಎಂದಾದರೆ, ಇದಕ್ಕಾಗಿ ಅವರು ಹೆಚ್ಚಿನ ರಿಸ್ಕ್ ತೆಗೆದುಕೊಂಡು ಹೂಡಿಕೆ ಮಾಡಬಾರದು. ಒಂದೊಮ್ಮೆ ಹೂಡಿಕೆ ಮಾಡಲು ಬಯಸಿದರೆ, ಹೂಡಿಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದುವರೆಯುವುದು ಸರಿಯಾದ ಕ್ರಮವಾಗಿದೆ. ಇದಕ್ಕಾಗಿ ಬ್ಯಾಂಕಿನಲ್ಲಿ ಠೇವಣಿ ಯೋಜನೆ ಆಯ್ಕೆ ಮಾಡುವುದು ಉತ್ತಮ. ಗೃಹ ಸಾಲವನ್ನು ತೆಗೆದುಕೊಳ್ಳುವಾಗ ಲೋನ್ ಕವರ್ ವಿಮೆ ಮಾಡಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.
ಸಣ್ಣ ವ್ಯಾಪಾರಿ ಸಾರ್ವಜನಿಕ ಭವಿಷ್ಯ ನಿಧಿ, ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಗಳಂತಹ ಸುರಕ್ಷಿತ ಯೋಜನೆಗಳನ್ನು ಆರಿಸಿಕೊಳ್ಳಬಹುದು. ಕೆಲವರು 15 ವರ್ಷಗಳ ಕಾಲ, ತಿಂಗಳಿಗೆ 5 ಸಾವಿರ ರೂ.ವರೆಗೆ ಹೂಡಿಕೆ ಮಾಡಲು ಬಯಸಿದರೆ, ಸುರಕ್ಷಿತ ಯೋಜನೆಗಳ ಜೊತೆಗೆ, ನಷ್ಟದ ಬಗ್ಗೆಯೂ ಆಲೋಚಿಸಿ ಮುಂದುವರೆಯಬೇಕಾಗುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ನಲ್ಲಿ 3 ಸಾವಿರ ರೂ. ಹೂಡಿಕೆ ಮಾಡಿ, ಉಳಿದ 2 ಸಾವಿರ ರೂ.ಗಳನ್ನು ಡೈವರ್ಸಿಫೈಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಜಮಾ ಮಾಡಬಹುದು. ನೀವು ಹೀಗೆ 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಸರಾಸರಿ 10 ಪ್ರತಿಶತದಷ್ಟು ಲಾಭದೊಂದಿಗೆ 19,06,348 ರೂಗಳನ್ನು ಪಡೆಯಲು ಸಾಧ್ಯವಿದೆ.
ಇದನ್ನು ಓದಿ: EPFO High Pension: ಇಪಿಎಫ್‌ಒ ಯೋಜನೆಯಡಿ ಹೆಚ್ಚಿನ ಪಿಂಚಣಿ ಪಡೆಯಲು ಇಂದೇ ಅರ್ಜಿ ಸಲ್ಲಿಸಿ..