ETV Bharat / business

ರಿಲಯನ್ಸ್ ಜಿಯೋ ಜೊತೆ Motorola ಪಾಲುದಾರಿಕೆ.. 5G ಸೇವೆ ಪಡೆಯಲು ಈ ನಿರ್ಧಾರ - how to activate jio 5g on my phone

Motorola ರಿಲಯನ್ಸ್ ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ. ಈಗ ಬಳಕೆದಾರರು ಆಯ್ದ Motorola ಸ್ಮಾರ್ಟ್‌ಫೋನ್‌ಗಳಲ್ಲಿ Jio 5G ವೈಶಿಷ್ಟ್ಯವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಜಿಯೋ ತನ್ನ ಬಳಕೆದಾರರಿಗೆ ನಿಜವಾದ 5G ಅನುಭವವನ್ನು ನೀಡುತ್ತದೆ.

motorola-tie-up-with-reliance-jio-true-5g-in-india
ರಿಲಯನ್ಸ್ ಜಿಯೋ ಜೊತೆ Motorola ಪಾಲುದಾರಿಕೆ.. 5G ಸೇವೆ ಪಡೆಯಲು ಈ ನಿರ್ಧಾರ
author img

By

Published : Jan 5, 2023, 7:07 PM IST

Updated : Jan 5, 2023, 7:36 PM IST

ನವದೆಹಲಿ: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ಮೊಟೊರೊಲಾ ಜೊತೆ ಪಾಲುದಾರಿಕೆಯನ್ನು ಪ್ರಕಟಿಸಿದೆ. ಈ ಪಾಲುದಾರಿಕೆಯಿಂದಾಗಿ ವಾಸ್ತವವಾಗಿ ಈಗ ಮೊಟೊರೊಲಾ ಬಳಕೆದಾರರು ನಿಜವಾದ 5G ಆನಂದಿಸಲು ಸಾಧ್ಯವಾಗುತ್ತದೆ. ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ವೆಲ್ಕಮ್ ಆಫರ್ ಅಡಿ Motorola 5G ಸ್ಮಾರ್ಟ್‌ಫೋನ್ ಬಳಸುವ ಎಲ್ಲಾ ಬಳಕೆದಾರರಿಗೆ ಅನಿಯಮಿತ 5G ಇಂಟರ್ನೆಟ್ ಅನ್ನು ಒದಗಿಸಲಿದೆ.

Motorola ಸ್ಮಾರ್ಟ್‌ಫೋನ್‌ಗಳಲ್ಲಿ ಈಗ 5G ಲಭ್ಯ​: ಪ್ರಸ್ತುತ Motorola ಸ್ಮಾರ್ಟ್‌ಫೋನ್‌ಗಳಲ್ಲಿ 5Gಯ ​​ಲಾಭವನ್ನು ಎಲ್ಲರೂ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ 5G ಬೆಂಬಲವು ಮೊಟ್ರೋಲಾದ ಕೆಲವೇ ಮಾದರಿಗಳಲ್ಲಿ ಮಾತ್ರ ಲಭ್ಯವಿದೆ. Motorola Edge 30, Motorola Edge 30 Fusion, Motorola G82 5G, Motorola Edge 30 Pro, Motorola Edge20, Motorola G51 5G, Motorola G71 ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ 5 ಜಿ ಸೇವೆ ಲಭ್ಯವಿದೆ. ಕಂಪನಿಯು ಕೆಲವು ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಫ್ಟ್‌ವೇರ್ ನವೀಕರಣಗಳನ್ನು ಬಿಡುಗಡೆ ಮಾಡಿದೆ. ಅಂತಹ ಫೋನ್​ಗಳಲ್ಲಿ 5 ಜಿ ಸೇವೆ ಪಡೆಯಬಹುದಾಗಿದೆ.

ಇದನ್ನು ಓದಿ:ಡಿಜಿಟಲ್​ ವಹಿವಾಟಿನ ಆನಂದ ಅನುಭವಿಸಬೇಕಾ: ಈ ಸುರಕ್ಷಾ ಸಲಹೆ ಪಾಲಿಸಿ

ಜಿಯೋ ವೆಲ್‌ಕಮ್ ಆಫರ್‌ನ ಪ್ರಯೋಜನ: ಜಿಯೋ ಶೀಘ್ರದಲ್ಲೇ ವೆಲ್‌ಕಮ್ ಆಫರ್ ಅನ್ನು ಪ್ರಾರಂಭಿಸಲಿದೆ. ಬಳಕೆದಾರರು ಉಚಿತವಾಗಿ ಸೈನ್ ಅಪ್ ಮಾಡುವ ಮೂಲಕ ಸೇವೆಗಳನ್ನು ಅನುಭವಿಸಬಹುದು. Motorola ಸಾಧನಗಳನ್ನು ಬಳಸುವ ಎಲ್ಲಾ Jio ಬಳಕೆದಾರರು ಭಾರತದಲ್ಲಿ Jio True 5G ಇರುವ ಅಥವಾ ಮುಂದೆ 5 ಜಿ ಸೇವೆ ಲಭ್ಯವಾಗುವ ಪ್ರದೇಶಗಳಲ್ಲಿ Jio ವೆಲ್ಕಮ್ ಆಫರ್ ಅಡಿ ಅನಿಯಮಿತ 5G ಇಂಟರ್ನೆಟ್ ಅನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಕೆಲ ಮೊಬೈಲ್​ಗಳಲ್ಲಿ ಸಾಫ್ಟ್‌ವೇರ್ ನವೀಕರಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮೊಟೊರೊಲಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅಂತಹ ಫೋನ್​ಗಳಲ್ಲಿ Jio True 5G ಪೋರ್ಟ್‌ಫೋಲಿಯೊದಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ.

Reliance Jio ನ 5G ಸೇವೆಯು ಈ ನಗರಗಳಲ್ಲಿ ಲಭ್ಯವಿದೆ: Jio 5G ಸೇವೆಗಳು ದೆಹಲಿ, ಕೋಲ್ಕತ್ತಾ, ಮುಂಬೈ, ಬೆಂಗಳೂರು, ವಾರಾಣಸಿ, ವಿಜಯವಾಡ, ಭೋಪಾಲ್, ಪುಣೆ, ಸಿಕಂದರಾಬಾದ್, ಇಂದೋರ್, ಮೈಸೂರು, ನಾಸಿಕ್, ಗುಂಟೂರು, ತಿರುಮಲ ಮತ್ತು ಔರಂಗಾಬಾದ್​ನಲ್ಲಿ ಲಭ್ಯವಿದೆ. ಎಲ್ಲಿ ಜಿಯೋ ಟ್ರೂ 5ಜಿ ಇಲ್ಲವೋ ಅಲ್ಲಿ ವೇಗವಾಗಿ ಕೆಲಸ ಆರಂಭಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ರಿಲಯನ್ಸ್ ಜಿಯೋ ಅಧ್ಯಕ್ಷ ಸುನಿಲ್ ದತ್, ‘‘ಭಾರತದಲ್ಲಿ ಟ್ರೂ 5ಜಿ ಸಾಧನ ಪರಿಸರ ವ್ಯವಸ್ಥೆ ಇನ್ನಷ್ಟು ಬಲಪಡಿಸಲು ಮೊಟೊರೋಲಾ ಜೊತೆ ಪಾಲುದಾರಿಕೆ ಮಾಡಲು ನಮಗೆ ಸಂತವಾಗುತ್ತಿದೆ. 5ಜಿ ಸ್ಮಾರ್ಟ್‌ಫೋನ್‌ನ ನೈಜ ಶಕ್ತಿಯನ್ನು ಜಿಯೋದಂತಹ ಟ್ರೂ 5ಜಿ ನೆಟ್‌ವರ್ಕ್‌ನಿಂದ ಮಾತ್ರ ಬಿಡುಗಡೆ ಮಾಡಲು ಸಾಧ್ಯವಾಗಲಿದೆ. ಅದು ಸ್ವತಂತ್ರ 5ಜಿ ನೆಟ್‌ವರ್ಕ್‌ನಂತೆ ರೂಪಿಸಲಾಗಿದೆ. ಇದು ದೇಶದ ಅತ್ಯಾಧುನಿಕ ನೆಟ್‌ವರ್ಕ್ ಆಗಿದೆ. ಜಿಯೋ ಟ್ರೂ 5ಜಿ ನೆಟ್‌ವರ್ಕ್ ಜತೆಗೆ ಈ ವೈಶಿಷ್ಟ್ಯಗಳು ಭಾರತದಲ್ಲಿ 5ಜಿ ನಿಜವಾದ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತವೆ" ಎಂದು ಹೇಳಿದ್ದಾರೆ.

ಇದನ್ನು ಓದಿ: ಇಸ್ರೋ ಮೈಕ್ರೋಸಾಫ್ಟ್​ ಮಹತ್ವದ ಸಹಯೋಗ.. ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ -ಅಪ್‌ಗಳ ಬೆಳವಣಿಗೆಗೆ ಉತ್ತೇಜನ

Last Updated : Jan 5, 2023, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.