ETV Bharat / business

ಮೊದಲ ದಿನದ ವಹಿವಾಟಿನಲ್ಲೇ ₹42 ಸಾವಿರ ಕೋಟಿ ನಷ್ಟ ಅನುಭವಿಸಿದ ಎಲ್​ಐಸಿ ಐಪಿಒ - ಎಲ್​ಐಸಿ ಐಪಿಒ ಮೊದಲ ದಿನದ ವಹಿವಾಟು

ಭಾರಿ ನಿರೀಕ್ಷೆ ಉಂಟು ಮಾಡಿದ್ದ ಎಲ್​ಐಸಿ ಐಪಿಒ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್​ ಆಗಿದೆ. ದುರಾದೃಷ್ಟ ಎಂಬಂತೆ ಮೊದಲ ದಿನದ ವಹಿವಾಟಿನಲ್ಲಿ ಐಪಿಒ ಷೇರುಗಳು ನಷ್ಟ ಅನುಭವಿಸಿವೆ.

lic-listing-loss
ಎಲ್​ಐಸಿ ಐಪಿಒ
author img

By

Published : May 17, 2022, 8:01 PM IST

ಮುಂಬೈ: ಇಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್​ಐಸಿ ಷೇರುಗಳು ಹೂಡಿಕೆದಾರರ ನಿರೀಕ್ಷೆಯನ್ನು ಹುಸಿ ಮಾಡಿದೆ. ದೊಡ್ಡ ಸಾರ್ವಜನಿಕ ಹೂಡಿಕೆಯಾದ ಎಲ್​ಐಸಿ ಐಪಿಒ ವಹಿವಾಟಿನ ದಿನದಾಂತ್ಯದ ಕೊನೆಯಲ್ಲಿ ಷೇರು ದರ ಇಳಿಕೆ ಕಂಡಿದೆ.

ಅಧಿಕ ಲಾಭ ಗಿಟ್ಟಿಸಿಕೊಳ್ಳಲು ಭಾರಿ ಆಸೆಯೊಂದಿಗೆ ಎಲ್​ಐಸಿ ಷೇರುಗಳನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಮಾತ್ರ ನಿರಾಸೆ ಉಂಟಾಗಿದೆ. ಲಿಸ್ಟಿಂಗ್‌ ಕಂಡ ಮೊದಲ ದಿನದ ವಹಿವಾಟಿನಲ್ಲೇ ಬೆಲೆ ಇಳಿಕೆ ಕಂಡು ಷೇರುಗಳು ತತ್ತರಿಸಿವೆ. ಇಂಟ್ರಾಡೇ ಯಾವುದೇ ಹಂತದಲ್ಲಿ ನಿಗದಿತ ಬೆಲೆಯನ್ನೂ ತಲುಪವಲ್ಲಿ ಸಾಧ್ಯವಾಗಿಲ್ಲ.

ಲಿಸ್ಟ್​ ಆದ ಮೊದಲ ದಿನದಂದು 949 ರೂ. ನಿಗದಿತ ಇಶ್ಯೂ ಬೆಲೆಯ ಮೇಲಿನ ವಹಿವಾಟಿನಲ್ಲಿ ಬಿಎಸ್​ಇಯಲ್ಲಿ ಶೇ. 8.62ರಷ್ಟು ಮೌಲ್ಯ ಕಳೆದುಕೊಂಡು 867.20 ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಶೇ.8.11ರಷ್ಟು ಕುಸಿದು 872 ರೂ.ಗೆ ಇಳಿದಿದೆ. ಅಂತಿಮವಾಗಿ ನಿಗದಿತ ಇಶ್ಯೂ ಬೆಲೆಗಿಂತ ಶೇ.7.75 ಕಳೆದುಕೊಂಡು 875.45ಕ್ಕೆ ಸ್ಥಿರವಾಗಿದೆ.

ಇದರಿಂದಾಗಿ ಸಾಮಾನ್ಯ ಹೂಡಿಕೆದಾರರು ಪ್ರತಿ ಷೇರಿಗೆ 77 ರೂ.ಗಳ ಲಿಸ್ಟಿಂಗ್ ನಷ್ಟ ಅನುಭವಿಸಿದರು. ಆದರೆ, 60 ರೂ.ಗಳ ರಿಯಾಯಿತಿಯೊಂದಿಗೆ 889 ರೂ.ಗೆ ಐಪಿಒ ಷೇರುಗಳನ್ನು ಖರೀದಿಸಿದ ಪಾಲಿಸಿದಾರರಿಗೆ 45 ರೂ. ನಷ್ಟವಾಗಿ 904 ರೂ.ಗೆ ಷೇರು ದರ ಬಂದು ನಿಂತಿದೆ. ಕೇಂದ್ರ ಸರ್ಕಾರ ಈ ಎಲ್​ಐಸಿ ಐಪಿಒ ಮಾರಾಟದಿಂದ 20,557 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಪ್ರತಿ ಷೇರಿಗೆ 949 ರ ಇಶ್ಯೂ ದರ ನಿಗದಿಯಾಗಿ ಮಾರುಕಟ್ಟೆಯಲ್ಲಿ 6 ಲಕ್ಷ ಕೋಟಿ ರೂ. ಎಲ್​ಐಸಿ ಐಪಿಒ ಹೂಡಿಕೆ ನಡೆಸಿತ್ತು. ಇದು ಮೊದಲ ದಿನದಲ್ಲೇ ನಷ್ಟವುಂಟಾದ ಕಾರಣ ಈ ಮೌಲ್ಯ 5.57 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ ಈ ಐಪಿಒದಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 42,500 ಕೋಟಿ ರೂ.ಗಳಷ್ಟು ನಷ್ಟವಾಗಿದೆ.

ಓದಿ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ಅಮೆರಿಕದ​ ಮಹಿಳೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.