ETV Bharat / business

LIC ಷೇರು ಹೂಡಿಕೆದಾರರಿಗೆ ಒಂದು ವರ್ಷದಲ್ಲಿ 2.4 ಲಕ್ಷ ಕೋಟಿ ರೂಪಾಯಿ ನಷ್ಟ!

ಹೂಡಿಕೆದಾರರು ಎಲ್​ಐಸಿ ಷೇರು ಐಪಿಒದಲ್ಲಿ ಉತ್ತಮ ಲಾಭ ಪಡೆಯಬಹುದೆಂದು ಭಾವಿಸಿ ಹೂಡಿಕೆ ಮಾಡಿದ್ದರು. ಆದರೆ ಈ IPO ಹೂಡಿಕೆದಾರರಲ್ಲಿ ನಿರಾಶೆ ಮೂಡಿಸಿದೆ.

LIC investors suffer  lakh crore shock in 1 year  LIC IOP one year  ಮೆಗಾ ಲಾಸ್​ ಎಲ್​ಐಸಿ ಹೂಡಿಕೆದಾರರಿಗೆ ಲಕ್ಷ ಲಕ್ಷ ಕೋಟಿ ನಷ್ಟ  ಎಲ್​ಐಸಿಯ ಐಪಿಒದಲ್ಲಿ ಉತ್ತಮ ಲಾಭ  ಹೂಡಿಕೆದಾರರಿಗೆ ತುಂಬಾ ನಿರಾಶಾದಾಯಕ  ಭಾರಿ ನಿರೀಕ್ಷೆಯೊಂದಿಗೆ ಐಪಿಒ  ಎಲ್​ಐಸಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿ ವರ್ಷ ಪೂರ್ಣ  ಎಲ್ಐಸಿ ಮೊದಲ ದಿನವೇ ಹೂಡಿಕೆದಾರರನ್ನು ನಿರಾಸೆ
ಎಲ್​ಐಸಿ ಹೂಡಿಕೆದಾರರಿಗೆ ಲಕ್ಷ-ಲಕ್ಷ ಕೋಟಿ ನಷ್ಟ!
author img

By

Published : May 18, 2023, 10:06 AM IST

Updated : May 18, 2023, 4:19 PM IST

ಒಂದು ವರ್ಷದ ಹಿಂದೆ ಭಾರಿ ನಿರೀಕ್ಷೆಯೊಂದಿಗೆ ಐಪಿಒಗೆ ಬಂದಿದ್ದ ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿ ವರ್ಷ ಪೂರ್ಣಗೊಳಿಸಿದೆ. ಕಳೆದ ವರ್ಷ ಮೇ 17 ರಂದು ಲಿಸ್ಟ್​ ಮಾಡಲಾದ ಎಲ್ಐಸಿ ಮೊದಲ ದಿನವೇ ಹೂಡಿಕೆದಾರರನ್ನು ನಿರಾಸೆಗೊಳಿಸಿತು. ಅದರ ನಂತರ ಚೇತರಿಸಿಕೊಂಡಿರುವುದರ ಬಗ್ಗೆ ಯಾವುದೇ ದಾಖಲೆಗಳು ಕಾಣಲಿಲ್ಲ. ಈ ವರ್ಷ ಯಾವುದೇ ಒಂದು ದಿನವೂ ವಿತರಣೆ ಬೆಲೆಗೆ ಮುಟ್ಟಿದ ಸಂದರ್ಭವೇ ಇಲ್ಲ. ಹೂಡಿಕೆದಾರರಲ್ಲಿ ಹಲವು ಭರವಸೆಗಳನ್ನು ಮೂಡಿಸಿದ ಎಲ್​ಐಸಿ 2.4 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಸಾರ್ವಜನಿಕ ವಲಯದ ವಿಮಾ ಕಂಪನಿ ಎಲ್‌ಐಸಿಯಲ್ಲಿ ಶೇ.3.5ರಷ್ಟು ಷೇರುಗಳಿಗೆ ಸಮಾನವಾದ 22.13 ಕೋಟಿ ಷೇರುಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಸರ್ಕಾರ ವಿತರಿಸುವ ಬೆಲೆ 949 ರೂ ಎಂದು ನಿಗದಿಪಡಿಸಿದೆ. ಅದೇ ದಿನದಲ್ಲಿ ಲಿಸ್ಟ್ ಆಗಿದ್ದ ಎಲ್​ಐಸಿ ಶೇ.8ರಷ್ಟು ರಿಯಾಯಿತಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿತ್ತು. ಬಿಎಸ್‌ಇಯಲ್ಲಿ ರೂ.867.20 ಮತ್ತು ಎನ್‌ಎಸ್‌ಇಯಲ್ಲಿ ರೂ.872 ಎಂದು ಲಿಸ್ಟ್​ ಮಾಡಲಾಗಿತ್ತು. ಆ ನಂತರವೂ ಷೇರು ಮೌಲ್ಯ ಕುಸಿಯುತ್ತಲೇ ಹೋಯಿತು. ಬುಧವಾರ (ಮೇ 17) ರೂ.568.25ರಲ್ಲಿ ವಹಿವಾಟು ನಡೆಸುತ್ತಿದೆ. ಅಂದರೆ, ವಿತರಣೆಯ ಬೆಲೆಗೆ ಹೋಲಿಸಿದರೆ ಶೇಕಡಾ 40 ರಷ್ಟು ನಷ್ಟ. ಪ್ರಸ್ತುತ ವರ್ಷ ಯಾವುದೇ ಒಂದು ದಿನದಲ್ಲಿ ಎಲ್‌ಐಸಿ ವಿತರಣೆ ಬೆಲೆಗೆ ತಲುಪಿಲ್ಲ ಎಂಬುದು ಗಮನಾರ್ಹ.

IPO ಸಮಯದಲ್ಲಿ, LIC ಯ ಮಾರುಕಟ್ಟೆ ಮೌಲ್ಯವನ್ನು ರೂ.6 ಲಕ್ಷ ಕೋಟಿ ಎಂದು ಲೆಕ್ಕ ಹಾಕಲಾಗಿತ್ತು. ಈಗ ಆ ಮೌಲ್ಯ 3.6 ಲಕ್ಷ ಕೋಟಿ ರೂ.ಗೆ ಕುಸಿದಿದೆ. ಅಂದರೆ ಹೂಡಿಕೆದಾರರಿಗೆ ರಿಟರ್ನ್ಸ್ ನೀಡದೆ ಎಲ್ಐಸಿ 2.4 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದೆ. ನವೆಂಬರ್-ಜನವರಿ ನಡುವೆ ಎಲ್​ಐಸಿ ಷೇರಿನ ಬೆಲೆ ಒಂದು ಹಂತದಲ್ಲಿ ರೂ.600-700ರ ಮಟ್ಟಕ್ಕೆ ತಲುಪಿತ್ತು. ಆದ್ರೆ ಅದಾನಿ ವ್ಯವಹಾರದ ನಂತರ ಅದು ಹಿಂದಿನ ಸ್ಥಿತಿಗೆ ಮರಳಿರುವುದನ್ನು ಗಮನಿಸಬೇಕು. ಪ್ರಸ್ತುತ ಕಳೆದ ಕೆಲ ದಿನಗಳಿಂದ ರೂ.550ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಮೊದಲನಿಂದಲೂ ಎಲ್ಐಸಿ ತನ್ನ ಮೂಲ ಮಟ್ಟವನ್ನು ತಲುಪದಿರಲು ಹಲವು ಕಾರಣಗಳನ್ನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಸಾರ್ವಜನಿಕ ವಲಯದ ಸಂಸ್ಥೆಯಾದ ಎಲ್‌ಐಸಿ, ಜೀವ ವಿಮಾ ಕ್ಷೇತ್ರದಲ್ಲಿ ಮಾರುಕಟ್ಟೆಯ ನಾಯಕ. ಆದ್ರೆ ಲಾಭದ ವಿಷಯದಲ್ಲಿ ಎಲ್ಐಸಿ ಉತ್ತಮ ಫಲಿತಾಂಶಗಳನ್ನು ಪ್ರಕಟಿಸಿಲ್ಲ. ಇದರಿಂದಾಗಿ ಹೂಡಿಕೆದಾರರು ಆಸಕ್ತಿ ಹೊಂದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

ಎಲ್‌ಐಸಿ ಐಪಿಒ ಮೂಲಕ 21 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರ ಭಾಗವಾಗಿ ಐಪಿಒ ಚಂದಾದಾರಿಕೆಗೆ ಆರು ದಿನಗಳ ಕಾಲಾವಕಾಶ ನೀಡಲಾಗಿದೆ. ಆದ್ರೂ IPO ಕೇವಲ ಮೂರು ಪಟ್ಟು ಪ್ರತಿಕ್ರಿಯೆಯನ್ನು ಪಡೆಯಿತು. ಇದರೊಂದಿಗೆ ಪಟ್ಟಿಯ ಮೊದಲ ದಿನವೇ ಸೋತಿರುವುದು ಭಾವನೆಗೆ ಧಕ್ಕೆ ತಂದಿದೆ ಎನ್ನಲಾಗಿದೆ. ಪ್ರತಿಸಾರಿ ತಿದ್ದುಪಡಿ ಮಾಡಿದಾಗ ಕೌಂಟರ್‌ಗಳಲ್ಲಿ ಮಾರಾಟದ ಒತ್ತಡ ಸಹಜ ಎಂದು ವಿಶ್ಲೇಷಕರು ಹೇಳುತ್ತಾರೆ.

ಅದಾನಿ-ಹಿಂಡೆನ್‌ಬರ್ಗ್ ಸಂಬಂಧದ ಪರಿಣಾಮವೂ ಎಲ್‌ಐಸಿ ಷೇರಿನ ಬೆಲೆ ಏರಿಕೆಯಾಗದಿರಲು ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. ಹಿಂಡೆನ್ ಬರ್ಗ್ ವರದಿಯ ನಂತರ ಅದಾನಿ ಗ್ರೂಪ್ ಕಂಪನಿಯ ಷೇರುಗಳು ತೀವ್ರ ಮಾರಾಟದ ಒತ್ತಡವನ್ನು ಎದುರಿಸಿದ್ದು ಗೊತ್ತೇ ಇದೆ. ಈ ಕ್ರಮದಲ್ಲಿ ಎಲ್​ಐಸಿಯ ಹೂಡಿಕೆಯ ಮೌಲ್ಯವೂ ಕುಸಿದಿದೆ. ಇದರ ಪರಿಣಾಮ ಎಲ್​ಐಸಿ ಷೇರು ದರದ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇದನ್ನೂ ಓದಿ: ತಿಂಗಳಿಗೆ 18,500 ರೂ ಪಿಂಚಣಿ; ಇದು ಎಲ್​ಐಸಿಯ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ

Last Updated : May 18, 2023, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.