ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗಲು ವ್ಯಕ್ತಿಯು ಒಂದು ನಿರ್ದಿಷ್ಟ ತಂತ್ರ ಮತ್ತು ಯೋಜನೆ ಹೊಂದಿರಬೇಕಾಗುತ್ತದೆ. ನಾವೀಗ ಎಲ್ಲಿದ್ದೇವೆ, ನಾವು ಎಲ್ಲಿಗೆ ತಲುಪಬೇಕು ಮತ್ತು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ವ್ಯವಸ್ಥಿತವಾಗಿ ಯೋಜನೆ ರೂಪಿಸಬೇಕು. ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ನಿಮಗೆ ತಿಳಿದಿರಬೇಕು.
ಹಣಕಾಸಿನ ಗುರಿಯ ತಲುಪುವುದು ಹೇಗೆ? ನಿಮ್ಮ ಗುರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಬರೆದುಕೊಳ್ಳಿ ಮತ್ತು ನಿಮಗೆ ಎಷ್ಟು ಹಣ ಬೇಕು, ಆ ಮೊತ್ತವನ್ನು ಸಂಗ್ರಹಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜು ಮಾಡಿಕೊಳ್ಳಿ. ಅಂತಿಮವಾಗಿ ಹೂಡಿಕೆಗಾಗಿ ಹಣವನ್ನು ಹೇಗೆ ನಿಯೋಜಿಸಬೇಕು ಎಂಬುದರ ಕುರಿತು ಮೊದಲೇ ಚಿಂತಿಸಿ. ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲವನ್ನೂ ಒಮ್ಮೆ ಕೂಲಂಕಷವಾಗಿ ಪರೀಕ್ಷಿಸಿ. ನೀವು ವ್ಯವಸ್ಥಿತವಾಗಿ ಎಲ್ಲವನ್ನೂ ಯೋಜಿಸಿದಾಗ ನಿಮ್ಮ ಹಣಕಾಸಿನ ಗುರಿ ಸಾಧಿಸುವುದು ಸುಲಭವಾಗುತ್ತದೆ.
ಶಿಸ್ತಿನಿಂದ ಯೋಜನೆ ರೂಪಿಸಿ: ಅಚ್ಚುಕಟ್ಟಾಗಿ ಶಿಸ್ತಿನಿಂದ ವ್ಯವಸ್ಥಿತ ಯೋಜನೆ ರೂಪಿಸಿದರೆ ಅರ್ಧ ಕೆಲಸ ಮುಗಿದಂತೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯೋಜನೆಯನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಉಳಿದ ಕೆಲಸಗಳು ನಡೆಯುತ್ತವೆ. ಹೂಡಿಕೆ ಮತ್ತು ಉಳಿತಾಯವನ್ನು ಶಿಸ್ತಿನಿಂದ ಮಾಡಬೇಕು. ನೀವು ದೀರ್ಘಾವಧಿಯಲ್ಲಿ ಉತ್ತಮ ಸಂಪತ್ತು ಸೃಷ್ಟಿಸಲು ಬಯಸಿದ್ದೇ ಆದಲ್ಲಿ, ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎನ್ನುವುದಕ್ಕಿಂತ ನೀವು ಹೇಗೆ ಹೂಡಿಕೆ ಮಾಡುತ್ತೀರಿ ಎಂಬುದು ಬಹಳ ಮುಖ್ಯ. ವ್ಯವಸ್ಥಿತವಾಗಿ, ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಸಣ್ಣ ಮೊತ್ತದಿಂದ ಹೆಚ್ಚು ಲಾಭಾಂಶವನ್ನು ಪಡೆಯಬಹುದು ಎಂಬುದನ್ನು ಮರೆಯಬೇಡಿ
ಉದಾಹರಣೆಗೆ, ನೀವು ಪ್ರತಿ ತಿಂಗಳಿಗೆ 5,000 ರೂಪಾಯಿಗಳನ್ನು 10 ವರ್ಷಗಳವರೆಗೆ ಹೂಡಿಕೆ ಮಾಡುತ್ತೀರಿ ಎಂದು ಭಾವಿಸೋಣ. ಕನಿಷ್ಠ ಶೇ.12ರಷ್ಟು ವಾರ್ಷಿಕ ಆದಾಯದೊಂದಿಗೆ, ಒಟ್ಟು 6 ಲಕ್ಷ ರೂ. ಹೂಡಿಕೆಯು 11.6 ಲಕ್ಷಕ್ಕೆ ಹೆಚ್ಚಾಗುತ್ತದೆ. ಇದು ಹೂಡಿಕೆಯ ಮೊತ್ತಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು. ನಿಯಮಿತವಾಗಿ ಹೂಡಿಕೆ ಮಾಡಿದಾಗ ಮಾತ್ರ ಅಂತಹ ಹೂಡಿಕೆಗಳು ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ.
ಸಾಲ ಮಾಡುವುದು ತಪ್ಪಲ್ಲ. ಆದರೆ, ಅದನ್ನು ಹೇಗೆ ಪಡೆಯುತ್ತೀರಿ ಮತ್ತು ಹೇಗೆ ಬಳಸುತ್ತೀರಿ ಎನ್ನುವುದು ಮುಖ್ಯ. ಕ್ರೆಡಿಟ್ ಕಾರ್ಡ್ ಖರ್ಚಿನ ವಿಷಯಕ್ಕೆ ಬಂದರೆ, ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತವೆ. ನೀವು ಸಾಲ ಪಡೆಯಬೇಕು ಎಂದಾದರೆ ಬಡ್ಡಿದರಗಳು ಕಡಿಮೆ ಇರುವಲ್ಲಿ ಸಾಲವನ್ನು ತೆಗೆದುಕೊಳ್ಳಿ. ಜೊತೆಗೆ ಒಮ್ಮೆ ನೀವು ಸಾಲವನ್ನು ತೆಗೆದುಕೊಂಡರೆ ಅದನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಿ. ಈ ಮೂಲಕ ಭವಿಷ್ಯದಲ್ಲಿ ನಿಮ್ಮ ಮೇಲಿನ ಹೊರೆ ಕಡಿಮೆ ಮಾಡಿಕೊಳ್ಳಿ.
ಇದನ್ನೂ ಓದಿ: ಐದು ದಿನದಲ್ಲಿ 3.20 ರೂ. ಏರಿಕೆ ಕಂಡ ಪೆಟ್ರೋಲ್ - ಡೀಸೆಲ್: ಇಂದೂ ಗ್ರಾಹಕನ ಜೇಬಿಗೆ ಕತ್ತರಿ
ಕೆಲವು ಗುರಿಗಳನ್ನು ಅಲ್ಪಾವಧಿ ಯೋಜನೆಗಳೊಂದಿಗೆ ಸರಳವಾಗಿ ಗುರಿ ಸಾಧಿಸಬಹುದು. ಆದರೆ ಹಣದುಬ್ಬರ ಕಾರಣ ದೀರ್ಘಾವಧಿಯಲ್ಲಿ ಆರ್ಥಿಕ ಯಶಸ್ಸು ಸಾಧಿಸಲು ಸಾಕಾಗುವುದಿಲ್ಲ. 2000 ಮತ್ತು 2018 ರ ನಡುವೆ ನಡೆಸಿದ ಸಮೀಕ್ಷೆಯ ಪ್ರಕಾರ, ಕುಟುಂಬ ನಿರ್ವಹಣೆ ವೆಚ್ಚವು ಸರಾಸರಿ 9.5 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ರಸ್ತುತ ಇನ್ನಷ್ಟು ಹೆಚ್ಚಾಗಿದೆ ಎಂದು ಅದು ಹೇಳುತ್ತದೆ.
ಸದ್ಯ ಹಣಕಾಸಿನ ವಿಚಾರದಲ್ಲಿ ಲಭ್ಯ ಇರುವ ಮಾಹಿತಿಯೊಂದಿಗೆ ಸಂಪೂರ್ಣ ತಿಳಿವಳಿಕೆ ಪಡೆದುಕೊಳ್ಳುವುದು ಮುಖ್ಯ. ಈ ಹಿನ್ನೆಲೆ, ನೀವು ವಿಶ್ವಾಸಾರ್ಹ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿನ ವೈಯಕ್ತಿಕ ಹಣಕಾಸು ಸಲಹೆ ನೋಡಬೇಕು. ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಲಭ್ಯವಿರುವ ಯೋಜನೆಗಳ ಬಗ್ಗೆ ತಿಳಿದಿರಲಿ.
ಆಗ ಮಾತ್ರ ನಿಮ್ಮ ಗುರಿಗಳನ್ನು ಸಾಧಿಸಲು ನೀವು ದಾರಿ ಕಂಡುಕೊಳ್ಳುತ್ತೀರಿ ಎಂದು ಆ್ಯಕ್ಸಿಸ್ ಸೆಕ್ಯುರಿಟೀಸ್‌ನ ಎಂಡಿ ಮತ್ತು ಸಿಇಒ ಬಿ ಗೋಪಾ ಕುಮಾರ್ ಹೇಳುತ್ತಾರೆ. ಒಟ್ಟಾರೆ ವ್ಯವಸ್ಥಿತ ಯೋಜನೆಗಳೊಂದಿಗೆ ನಿಮ್ಮ ಗುರಿ ತಲುಪಿ, ಯಶಸ್ವಿಯಾಗಿ.