ETV Bharat / business

FCI ಇ-ಹರಾಜು; 1.06 ಲಕ್ಷ ಟನ್ ಗೋಧಿ & 100 ಟನ್ ಅಕ್ಕಿ ಮಾರಾಟ - ಅಕ್ಕಿಯನ್ನು ದೇಶಾದ್ಯಂತ ಹರಾಜು

FCI e auction: ಎಫ್​​ಸಿಐ ಈ ಬಾರಿಯ ಇ - ಹರಾಜಿನಲ್ಲಿ 1.06 ಲಕ್ಷ ಟನ್ ಗೋಧಿ ಮತ್ತು 100 ಟನ್ ಅಕ್ಕಿಯನ್ನು ಮಾರಾಟ ಮಾಡಿದೆ.

FCI sells 1 lakh tonne wheat, 100 tonne rice in 5th e-auction

author img

By

Published : Jul 27, 2023, 2:05 PM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಬುಧವಾರ 2023-24ರ 5 ನೇ ಇ-ಹರಾಜಿನಲ್ಲಿ 1.06 ಲಕ್ಷ ಟನ್ ಗೋಧಿ ಮತ್ತು 100 ಟನ್ ಅಕ್ಕಿಯನ್ನು ಮಾರಾಟ ಮಾಡಿದೆ. ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಎಫ್​​ಸಿಐ ವಾರಕ್ಕೊಮ್ಮೆ ಇ-ಹರಾಜುಗಳನ್ನು ಆಯೋಜಿಸುತ್ತದೆ. ಸರ್ಕಾರವು ಬೆಲೆಗಳನ್ನು ಸ್ಥಿರವಾಗಿರಿಸಲು ಬದ್ಧವಾಗಿದೆ ಮತ್ತು ಗ್ರಾಹಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾನು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಆಹಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

361 ಡಿಪೋಗಳಿಂದ 1.16 ಲಕ್ಷ ಟನ್ ಗೋಧಿ ಮತ್ತು 178 ಡಿಪೋಗಳಿಂದ 1.46 ಲಕ್ಷ ಟನ್ ಅಕ್ಕಿಯನ್ನು ದೇಶಾದ್ಯಂತ ಹರಾಜು ಮಾಡಲಾಗಿದೆ ಎಂದು ಅದು ಹೇಳಿದೆ. ಪ್ರಸ್ತುತ ಇ-ಹರಾಜಿನಲ್ಲಿ ಪ್ರತಿಯೊಬ್ಬ ಖರೀದಿದಾರ ಗರಿಷ್ಠ 100 ಟನ್ ಗೋಧಿ ಮತ್ತು 1000 ಟನ್ ಅಕ್ಕಿ ಖರೀದಿಸುವ ಮಿತಿ ವಿಧಿಸಲಾಗಿತ್ತು. ಸಣ್ಣ ಮತ್ತು ಕೊನೆ ಹಂತದ ಮಾರಾಟಗಾರರನ್ನು ಪ್ರೋತ್ಸಾಹಿಸಲು ಮತ್ತು ಹೆಚ್ಚು ಸಂಖ್ಯೆಯ ಖರೀದಿದಾರರು ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಈ ಮಿತಿಯನ್ನು ವಿಧಿಸಲಾಗಿತ್ತು ಎಂದು ಸರ್ಕಾರ ಹೇಳಿದೆ.

ಖಾದ್ಯ ತೈಲ ಬೆಲೆಗಳು ಶೇಕಡಾ 29 ರಷ್ಟು ಇಳಿಕೆ: ಕೇಂದ್ರ ಸರ್ಕಾರದ ಕ್ರಮಗಳು ಮತ್ತು ಜಾಗತಿಕವಾಗಿ ಬೆಲೆಗಳ ಇಳಿಕೆಯಿಂದಾಗಿ ಕಳೆದ ಒಂದು ವರ್ಷದಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಪಾಮೊಲಿಯನ್ ಚಿಲ್ಲರೆ ಬೆಲೆಗಳು ಕ್ರಮವಾಗಿ ಶೇ 29, 19 ಮತ್ತು 25 ರಷ್ಟು ಕುಸಿದಿವೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

ರಾಜ್ಯಗಳಿಗೆ ಅಕ್ಕಿ, ಗೋಧಿ ಮಾರಾಟ ಸ್ಥಗಿತ: ಖಾರಿಫ್ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕದ ಕಾರಣದಿಂದ ಸಾಕಷ್ಟು ಬಫರ್ ಸ್ಟಾಕ್ ಇಟ್ಟುಕೊಳ್ಳಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಜೂನ್ 13 ರಿಂದ ಜಾರಿಗೆ ಬರುವಂತೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ರಾಜ್ಯಗಳಿಗೆ ಗೋಧಿ ಮತ್ತು ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರವು ಬುಧವಾರ ಹೇಳಿದೆ.

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಲೋಕಸಭೆಗೆ ಈ ಮಾಹಿತಿ ನೀಡಿದರು.ಕಳೆದ ವರ್ಷ 187.92 ಲಕ್ಷ ಟನ್ ಗೋಧಿ ಸಂಗ್ರಹವಾಗಿತ್ತು. ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಒಎಂಎಸ್‌ಎಸ್ (ಡಿ) ನೀತಿಯಡಿಯಲ್ಲಿ ಗೋಧಿ ಮತ್ತು ಅಕ್ಕಿಗೆ ಮನವಿ ಮಾಡಿವೆ.

ಆಮದು ಸುಂಕ ಕಡಿತ ಸಾಧ್ಯತೆ: ಹಬ್ಬ ಹರಿದಿನಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಗೋಧಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಸರ್ಕಾರವು ಗೋಧಿಯ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಏರುತ್ತಿರುವ ಗೋಧಿ ಬೆಲೆಗಳನ್ನು ನಿಯಂತ್ರಿಸಲು ಶೀಘ್ರದಲ್ಲೇ ಸಚಿವರ ಗುಂಪಿನ ಸಭೆ ನಡೆಯಲಿದೆ. ಗೋಧಿ ಮೇಲಿನ ಆಮದು ಸುಂಕ ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ : External Debt: ಭಾರತದ ಒಟ್ಟು ಬಾಹ್ಯ ಸಾಲದ ಮೊತ್ತ $624 ಬಿಲಿಯನ್: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.