ETV Bharat / business

ಸಂದಿಗ್ಧ ಪರಿಸ್ಥಿತಿ ಎದುರಿಸಲು ತುರ್ತು ನಿಧಿ ಬಳಸಿ; ಅನಾವಶ್ಯಕ ಐಷಾರಾಮಿ ವಸ್ತು ಖರೀದಿಗಲ್ಲ - ಪ್ರತ್ಯೇಕ ತುರ್ತು ನಿಧಿ ಠೇವಣಿ ಇಡಿ

ಜೀವನದಲ್ಲಿ ಆಕಸ್ಮಿಕ, ಅನಿರೀಕ್ಷಿತ ಎನ್ನುವಂಥ ಘಟನೆಗಳನ್ನು ಎದುರಿಸಲು ತುರ್ತು ನಿಧಿ ಠೇವಣಿ ರಾಮಬಾಣ ಆಗುತ್ತದೆ.

contingency fund
ತುರ್ತು ನಿಧಿ ಠೇವಣಿ
author img

By

Published : Jan 20, 2023, 6:21 AM IST

ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ಊಹೆಗೆ ನಿಲುಕದ್ದು. ಇದು ಸಾಮಾನ್ಯ ಕೂಡಾ. ಕೆಲವು ಸಂದರ್ಭಗಳಲ್ಲಿ ಗೊತ್ತಿಲ್ಲದೇ ಹಲವು ಅಪಾಯಗಳಿಗೆ ನಾವು ಒಳಗಾಗುತ್ತೇವೆ. ಆಕಸ್ಮಿಕವಾಗಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರುವ ಪ್ರಸಂಗಗಳೂ ಬರುತ್ತವೆ. ಅಂಥ ಸಂದರ್ಭದಲ್ಲಿ ಹಣಕಾಸಿನ ಕೊರತೆ ಕಾಡಬಹುದು. ಇಂಥ ಎಲ್ಲ ತುರ್ತು ಪರಿಸ್ಥಿತಿಗಳಿಗೆ ಮುಂಚಿತವಾಗಿ ಸಿದ್ಧರಾಗಿರಬೇಕು. ಅದಕ್ಕಾಗಿ ಸ್ವಲ್ಪ ಹಣವನ್ನೂ ಯಾವಾಗಲೂ ಸಿದ್ಧವಾಗಿಟ್ಟುಕೊಳ್ಳಬೇಕು. ಆಕಸ್ಮಿಕ ತುರ್ತು ನಿಧಿ ಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿಯುತ್ತದೆ.

ತುರ್ತು ಪರಿಸ್ಥಿತಿ ಬಂದ ಬಳಿಕ ಅದು ದೊಡ್ಡ ಪರಿಣಾಮ ಉಂಟು ಮಾಡಬಲ್ಲದು. ಮುಂಚಿತವಾಗಿ ಸಿದ್ಧರಾಗದಿದ್ದರೆ ನಮ್ಮ ಉಳಿತಾಯ ಮತ್ತು ಹೂಡಿಕೆಗಳು ಖಾಲಿಯಾಗುತ್ತವೆ. ಕೆಲವೊಮ್ಮೆ ಆದಾಯ ಮತ್ತು ಅಸಲು ನಷ್ಟದ ಅಪಾಯವನ್ನೂ ಒಳಗೊಂಡಿರುತ್ತದೆ. ನಮ್ಮ ಪ್ರಮುಖ ಆರ್ಥಿಕ ಗುರಿಗಳಿಗೂ ಅಡ್ಡಿಯಾಗಬಹುದು. ಉಳಿತಾಯ ಹಣಕಾಸು ಯೋಜನೆಯು ಸಾಕಷ್ಟು ಆಕಸ್ಮಿಕ ತುರ್ತು ನಿಧಿ ಒಳಗೊಂಡಿರುತ್ತದೆ. ಅದರ ಸಮರ್ಥ ನಿರ್ವಹಣೆಗಾಗಿ ಮುನ್ನೆಚ್ಚರಿಕೆ ಅನುಸರಿಸಬೇಕು.

6 ತಿಂಗಳಿನ ಮೊತ್ತ ಹೊಂದಿಸಿ: ಆಕಸ್ಮಿಕ ತುರ್ತು ನಿಧಿಯು ಕನಿಷ್ಠ 6 ತಿಂಗಳ ಮನೆಯ ವೆಚ್ಚಗಳು ಮತ್ತು ಸಾಲದ ಕಂತುಗಳಿಗೆ ಆಗುವಷ್ಟು ಮೊತ್ತ ಹೊಂದಿಸಿರಬೇಕು. ಯಾವುದೇ ಆದಾಯವಿಲ್ಲದ ಈ ಅವಧಿಯಲ್ಲಿ ಇದು ಸಾಕಾಗುತ್ತದೆ. ಆರ್ಥಿಕ ಹಿಂಜರಿತದ ಸಮಯದಲ್ಲಿ, 12 ತಿಂಗಳವರೆಗೆ ನಿಮ್ಮ ಒಟ್ಟಾರೆ ವೆಚ್ಚ ಪೂರೈಸಲು ತುರ್ತು ನಿಧಿ ಠೇವಣಿ ಹೆಚ್ಚಿಸಬೇಕು. ಅಗತ್ಯ ವಸ್ತುಗಳು, ಮನೆ ಬಾಡಿಗೆ, ಮಕ್ಕಳ ಶುಲ್ಕ, ಇಎಂಐಗಳು, ವಾಹನ ವೆಚ್ಚಗಳು ಹಾಗು ಇತರ ಬಿಲ್‌ಗಳು ಇತ್ಯಾದಿಗಳಿಗೆ ನಿಮಗೆ ಎಷ್ಟು ಬೇಕಾಗುತ್ತದೆ ಎಂಬುದನ್ನು ಆಧರಿಸಿ ಲೆಕ್ಕ ಹಾಕಿಕೊಳ್ಳಿ.

ಕಾಲಕಾಲಕ್ಕೆ ನಿಮ್ಮ ಆಕಸ್ಮಿಕ ತುರ್ತು ನಿಧಿಯನ್ನು ಪರಿಶೀಲಿಸಿ. ಬದಲಾಗುತ್ತಿರುವ ಜೀವನಶೈಲಿ ಮತ್ತು ವೆಚ್ಚಗಳನ್ನು ಸರಿಹೊಂದಿಸಲು ಯೋಜನೆ ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚಗಳಲ್ಲಿ ಏರಿಕೆಯಾಗುತ್ತಿದೆ. ಯಾವ ಹೆಚ್ಚುವರಿ ವೈಯಕ್ತಿಕ ವೆಚ್ಚಗಳು ಇದ್ದಕ್ಕಿದ್ದಂತೆ ಉದ್ಭವಿಸುತ್ತವೆ ಎಂಬುದು ನಮಗೆ ತಿಳಿಯದು.

ಪ್ರತ್ಯೇಕ ತುರ್ತು ನಿಧಿ ಠೇವಣಿ ಇಡಿ: ತುರ್ತು ನಿಧಿ ಠೇವಣಿ ಯಾವಾಗಲೂ ಸುಲಭವಾಗಿ ವಾಪಸ್ ಪಡೆಯಲು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಈ ನಿಧಿಯನ್ನು ಬ್ಯಾಂಕ್ ಸ್ಥಿರ ಠೇವಣಿಗಳು, ಲಿಕ್ವಿಡ್ ಫಂಡ್​ ಮತ್ತು ಹೆಚ್ಚಿನ ಬಡ್ಡಿ ಪಾವತಿಸುವ ಉಳಿತಾಯ ಖಾತೆಗಳಲ್ಲಿ ಇರಿಸಿ. ಇದರಿಂದ ಅಗತ್ಯವಿದ್ದಾಗ ತಕ್ಷಣ ಸಾಲ ಪಡೆಯಲು ಸಾಧ್ಯ. ಕೆಲವು ಸಮಯದಲ್ಲಿ ಸ್ವಲ್ಪ ಆದಾಯವನ್ನು ಗಳಿಸಲು ಅವಕಾಶವಿದೆ.

ನಿಮ್ಮ ಬದಲಾಗುತ್ತಿರುವ ಹಣಕಾಸಿನ ಜವಾಬ್ದಾರಿಗಳ ಆಧಾರದಡಿ ನಿಮ್ಮ ತುರ್ತು ನಿಧಿ ಠೇವಣಿ ಗಾತ್ರ ಬದಲಾಯಿಸಿ. ಉದಾಹರಣೆಗೆ, ನೀವು ಸಾಲ ತೆಗೆದುಕೊಂಡರೆ ಆಕಸ್ಮಿಕ ನಿಧಿಯು ಕಂತುಗಳ ಮೊತ್ತಕ್ಕೆ ಸಮನಾಗಿರಬೇಕು. ಸಾಲ ಮರುಪಾವತಿ ಪೂರ್ಣಗೊಂಡ ನಂತರ ಈ ನಿಧಿಯನ್ನು ಕಡಿಮೆ ಮಾಡಬಹುದು. ಲಾಕ್-ಇನ್ ಅವಧಿ ಹೊಂದಿರುವ ಮತ್ತು ತಕ್ಷಣ ನಗದು ಆಗಿ ಪರಿವರ್ತಿಸಲು ಸಾಧ್ಯವಾಗದಿರುವ ಯೋಜನೆಗಳಲ್ಲಿ ತುರ್ತು ನಿಧಿಯಲ್ಲಿ ಠೇವಣಿ ಮಾಡಬೇಡಿ.

ಸಂಕಷ್ಟ ಕಾಲದಲ್ಲಿ ಮಾತ್ರ ಬಳಸಿ: ತುರ್ತು ನಿಧಿಯನ್ನು ದೈನಂದಿನ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಬೇರೆ ಯಾವುದೇ ವಿಧಾನಗಳಿಲ್ಲದಿದ್ದಾಗ ಮಾತ್ರ ಬಳಸಬೇಕು. ಇದು ಶಾಶ್ವತ ಪರಿಹಾರವಲ್ಲ. ಆದರೆ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತಾತ್ಕಾಲಿಕ ಪರಿಹಾರವಾಗಿದೆ. ತುರ್ತು ನಿಧಿ ಹಣವನ್ನು ದುಂದು ವೆಚ್ಚಕ್ಕೆ ಬಳಸಕೂಡದು. ಪರಿಸ್ಥಿತಿ ಸುಧಾರಿಸಿದ ತಕ್ಷಣ ಮರು ಪಾವತಿಗೊಳಿಸಬೇಕು.

ಆಕಸ್ಮಿಕ ತುರ್ತು ನಿಧಿಯನ್ನು ಕುಟುಂಬದ ಅಗತ್ಯತೆಗಳು, ಆರೋಗ್ಯ ತುರ್ತುಸ್ಥಿತಿಗಳು, ವೈಯಕ್ತಿಕ ವೆಚ್ಚಗಳು, ಸಾಲದ ಕಂತುಗಳ ಮರುಪಾವತಿ ಇತ್ಯಾದಿಗಳಿಗೆ ಮಾತ್ರ ಬಳಸಿ. ಪತ್ನಿ, ಇತರ ಕುಟುಂಬ ಸದಸ್ಯರಿಗೆ ಈ ಉಪಾಯವನ್ನು ತಿಳಿಸಿ. ಕೋವಿಡ್ ನಮಗೆ ಅನೇಕ ಆರ್ಥಿಕ ಪಾಠಗಳನ್ನು ಕಲಿಸಿದೆ. ತುರ್ತುಸ್ಥಿತಿಗಳು ಬರುವ ಮುನ್ನ ನಾವೆಲ್ಲ ಎಚ್ಚರಿಕೆಯಿಂದಿರಬೇಕು. ಅವುಗಳನ್ನು ಎದುರಿಸಲೂ ಸಮರ್ಪಕವಾಗಿ ಸಿದ್ಧರಾಗಿರಬೇಕು.

ಇದನ್ನೂ ಓದಿ: ಯೂಟ್ಯೂಬ್ ಆರಂಭಿಸಿ ಲಕ್ಷ ಲಕ್ಷ ಸಂಪಾದನೆ:50ಲಕ್ಷದ ಆಡಿ ಕಾರು ಖರೀದಿಸಿ ಯುವಕರಿಗೆ ಸ್ಪೂರ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.