ETV Bharat / business

ಬ್ಯಾಂಕ್​ ವ್ಯವಹಾರ ಇದ್ರೆ ಈಗಲೇ ಮುಗಿಸಿಕೊಳ್ಳಿ... ಮೇ ತಿಂಗಳಲ್ಲಿ ಈ 12 ದಿನಗಳಂದು ಬ್ಯಾಂಕ್​ಗಳಿಗೆ ರಜೆ

ಆರ್​ಬಿಐ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮೇ ತಿಂಗಳ ರಜಾಪಟ್ಟಿಯ ವಿವರ ಇಲ್ಲಿದೆ

bank-holidays-in-may-month
ಮೇ ತಿಂಗಳಲ್ಲಿ ಈ 12 ದಿನಗಳಂದು ಬ್ಯಾಂಕ್​ಗಳಿಗೆ ರಜೆ..
author img

By

Published : May 1, 2023, 7:26 PM IST

ನವದೆಹಲಿ: ಪ್ರತಿ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳಿಗೆ ಸಂಬಂಧಿಸಿ ರಜಾಪಟ್ಟಿ ಆರ್​ಬಿಐ ಬಿಡುಗಡೆ ಮಾಡುತ್ತದೆ. ಅದರಂತೆ ಮೇ ತಿಂಗಳಿಗೆ ಸಂಬಂಧಿಸಿದ ರಜಾಪಟ್ಟಿ ಬಿಡುಗಡೆಯಾಗಿದೆ. ಇಂದು ಅಂದರೆ ಮೇ 1 ರಂದು, ಮಹಾರಾಷ್ಟ್ರ ಸಂಸ್ಥಾಪನ ದಿನ ಮತ್ತು ಕಾರ್ಮಿಕರ ದಿನವಾಗಿರುವುದರಿಂದ ಭಾರತೀಯ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸುವುದಿಲ್ಲ.

ಬಿಎಸ್ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಮತ್ತು ಎನ್ಎಸ್ಇ (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ನಲ್ಲಿ ಇಂದು ಯಾವುದೇ ರೀತಿಯ ಷೇರು ಖರೀದಿ ಮತ್ತು ಮಾರಾಟ ನಡೆಯುವುದಿಲ್ಲ. BSE ಯ ಅಧಿಕೃತ ವೆಬ್‌ಸೈಟ್‌ bseindia.com ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮೇ 1 ರಂದು ಈಕ್ವಿಟಿ ವಿಭಾಗ, ಈಕ್ವಿಟಿ ಉತ್ಪನ್ನ ವಿಭಾಗ ಮತ್ತು SLB ವಿಭಾಗ. ಕರೆನ್ಸಿ ಉತ್ಪನ್ನಗಳ ವಿಭಾಗ ಕಾರ್ಯನಿರ್ವಹಿಸುವುದಿಲ್ಲ.

ಮೇ ನಲ್ಲಿ ಬ್ಯಾಂಕ್​ಗಳು ವಾರದ ರಜೆಗಳು ಸೇರಿದಂತೆ ಒಟ್ಟು 12 ದಿನಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಚೆನ್ನೈ, ಗುವಾಹಟಿ, ಬೇಲಾಪುರ್, ಬೆಂಗಳೂರು, ಹೈದರಾಬಾದ್, ನಾಗ್ಪುರ, ಮುಂಬೈ, ಕೊಚ್ಚಿ, ಕೋಲ್ಕತ್ತಾ, ಪಣಜಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿ ಇಂದು ಬ್ಯಾಂಕ್‌ಗಳ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ. ಈ ವೇಳೆ ಸಾರ್ವಜನಿಕರು ನೆಟ್ ಬ್ಯಾಂಕಿಂಗ್ ಮತ್ತು ಹಣವನ್ನು ಪಡೆಯಲು ಎಟಿಎಂ ಮೂಲಕ ವ್ಯವಹಾರಿಸಬೇಕಾಗುತ್ತದೆ.

ಮೇ ತಿಂಗಳ ಬ್ಯಾಂಕ್ ರಜಾಪಟ್ಟಿ ಹೀಗಿದೆ:

  • ಮೇ 1: ಮಹಾರಾಷ್ಟ್ರ ದಿನ, ಕಾರ್ಮಿಕ ದಿನ
  • ಮೇ 5: ಬುದ್ಧ ಪೂರ್ಣಿಮೆ
  • ಮೇ 7: ಭಾನುವಾರದ ರಜೆ
  • ಮೇ 9: ರವೀಂದ್ರನಾಥ ಟ್ಯಾಗೋರ್ ಜಯಂತಿ
  • ಮೇ 13: ಎರಡನೇ ಶನಿವಾರ
  • ಮೇ 14: ಭಾನುವಾರದ ರಜೆ
  • ಮೇ 16: ಸಿಕ್ಕಿಂ ದಿನ
  • ಮೇ 21:ಭಾನುವಾರ ರಜೆ
  • ಮೇ 22: ಮಹಾರಾಣಾ ಪ್ರತಾಪ್ ಜಯಂತಿ
  • ಮೇ 24: ಕಾಜಿ ನಜ್ರುಲ್ ಇಸ್ಲಾಂ ಜಯಂತಿ
  • ಮೇ 27:ನಾಲ್ಕನೇ ಶನಿವಾರ
  • ಮೇ 28:ಭಾನುವಾರದ ರಜೆ

ಇದನ್ನೂ ಓದಿ:ಯುರೋಪ್​ಗೆ ಅತ್ಯಧಿಕ ತೈಲ ಪೂರೈಕೆದಾರನಾದ ಭಾರತ: ಆನಂದ್​ ಮಹೇಂದ್ರ ಪ್ರತಿಕ್ರಿಯೆ ಹೀಗಿದೆ..

ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನತೆಗೆ ಕೊಂಚ ನಿರಾಳತೆ ನೀಡುವ ಸುದ್ದಿ ಇದು. ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಿಸಿವೆ. 19 ಕೆಜಿ ತೂಕದ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ₹171.5 ಕಡಿತಗೊಳಿಸಲಾಗಿದೆ. ಇದರ ಪರಿಣಾಮ, ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್‌ನ ಬೆಲೆ ಈಗ 1,856.50 ರೂಪಾಯಿ ಇದೆ.

ಕಳೆದ ತಿಂಗಳು ಕೂಡ 91.50 ರೂ. ಇಳಿಕೆ ಮಾಡಲಾಗಿತ್ತು. ತೈಲ ಕಂಪನಿಗಳು ಈ ವರ್ಷ ಮಾರ್ಚ್‌ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 350.50 ರೂ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 50 ರೂ. ಹೆಚ್ಚಿಸಿದ್ದವು. ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 25 ರೂ. ಏರಿಕೆ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.