ETV Bharat / business

ಕೇಂದ್ರದ ಆ ಒಂದು ನಡೆಯಿಂದ ಮೈಕೊಡವಿ ಮೇಲೆದ್ದ ಮಾರುಕಟ್ಟೆ..!

ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮೇಲೆ ಇತ್ತೀಚೆಗೆ ವಿಧಿಸಲಾಗಿದ್ದ ಹೆಚ್ಚಿನ ತೆರಿಗೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ವರದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯ ಆದೇಶವನ್ನು ಸಂಸತ್ತಿನಲ್ಲಿ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಿಂದ ಮುಂಬೈ ಪೇಟೆಯ ಹೂಡಿಕೆದಾರರಲ್ಲಿ ಅಮಿತೋತ್ಸಾಹ ಕಂಡುಬಂದು ಖರೀದಿ ಪ್ರಕ್ರಿಯೆಯಲ್ಲಿ ಮುಗಿಬಿದ್ದಿದ್ದಾರೆ.

ನಿಫ್ಟಿ
author img

By

Published : Aug 8, 2019, 4:46 PM IST

ಮುಂಬೈ: ಕಳೆದ ಒಂದು ತಿಂಗಳಿಂದ ನಕಾರಾತ್ಮಕ ಮಟ್ಟದಲ್ಲಿರುವ ಮುಂಬೈ ಷೇರು ಪೇಟೆಯು ಕೇಂದ್ರ ಸರ್ಕಾರದ ಆ ಒಂದು ನಡೆಯಿಂದ ಗುರುವಾರದಂದು ಸೆನ್ಸೆಕ್ಸ್​ ಮತ್ತು ನಿಫ್ಟಿ ಮೈಕೊಡವಿ ಮೇಲೆದ್ದಿದೆ.

ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮೇಲೆ ಇತ್ತೀಚೆಗೆ ವಿಧಿಸಲಾಗಿದ್ದ ಹೆಚ್ಚಿನ ತೆರಿಗೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ವರದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಆದೇಶವನ್ನು ಸಂಸತ್ತಿನಲ್ಲಿ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬ ಹೇಳಿದ್ದಾರೆ. ಇದರಿಂದ ಮುಂಬೈ ಪೇಟೆಯ ಹೂಡಿಕೆದಾರರಲ್ಲಿ ಅಮಿತೋತ್ಸಾಹ ಕಂಡುಬಂದು ಖರೀದಿ ಪ್ರಕ್ರಿಯೆಯಲ್ಲಿ ಮುಗಿಬಿದ್ದಿದ್ದಾರೆ.

ಗುರುವಾರದ ಆರಂಭಿಕ ವಹಿವಾಟಿನಿಂದ ಸಕಾರಾತ್ಮಕ ಹಾದಿಯಲ್ಲಿ ಸಾಗಿಬಂದ ಸೆನ್ಸೆಕ್ಸ್​ ದಿನದಾಂತ್ಯಕ್ಕೆ 636.86 ಅಂಶಗಳ ಏರಿಕೆಯೊಂದಿಗೆ 37,327.36 ಅಂಶಗಳ ಮಟ್ಟದಲ್ಲೂ ಹಾಗೂ ನಿಫ್ಟಿ 176.95 ಅಂಶಗಳ ಜಿಗಿತದೊಂದಿಗೆ 11,032 ಅಂಶಗಳಲ್ಲೂ ಆಶಾದಾಯಕವಾಗಿ ಮುಕ್ತಾಯ ಕಂಡಿದೆ.

ಇನ್ಫೋಸಿಸ್​, ಎಚ್​ಡಿಎಫ್​ಸಿ ಬ್ಯಾಂಕ್​, ಟಿಸಿಎಸ್​, ಎಚ್​ಸಿಎಲ್​ ಟೆಕ್​, ಟಾಟಾ ಮೋಟಾರ್ಸ್​, ಜೆಎಸ್​ಡಬ್ಲ್ಯು ಸ್ಟೀಲ್​, ರಿಲಯನ್ಸ್​ ಇಂಡಸ್ಟ್ರೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಪೆಟ್ರೋಲಿಯಂ ಮತ್ತು ಹೀರೋ ಮೋಟಾರ್​​ ಕಾರ್ಪ್​ ಷೇರುಗಳು ಗಳಿಕೆ ಕಂಡವು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.