ETV Bharat / business

ಯುಟರ್ನ್​ ಹೊಡೆದ ಮುಂಬೈ ಷೇರುಪೇಟೆ : 600 ಅಂಕ ಕುಸಿದ ಬಳಿಕ ಚೇತರಿಕೆ! - Today share Market

ಕೋವಿಡ್​-19 ಪ್ರಕರಣಗಳ ಎರಡನೇ ಅಲೆಯ ನಿರಂತರ ಏರಿಕೆ ಹೂಡಿಕೆದಾರರ ಭಾವನೆಗಳ ಮೇಲೆ ಪ್ರಭಾವಿಸಿವೆ. ಸಕಾರಾತ್ಮಕ ನಿರ್ವಹಣೆಯ ವ್ಯಾಖ್ಯಾನಗಳೊಂದಿಗೆ ಸ್ಥಿರವಾದ ಕಾರ್ಪೊರೇಟ್ ಗಳಿಕೆಗಳು ಮಾರುಕಟ್ಟೆಗಳಿಗೆ ಬೆಂಬಲ ನೀಡಿವೆ..

Sensex
Sensex
author img

By

Published : May 3, 2021, 5:01 PM IST

ಮುಂಬೈ : ಜಾಗತಿಕ ಮಾನದಂಡಗಳಲ್ಲಿನ ಋಣಾತ್ಮಕ ಪ್ರವೃತ್ತಿಯ ಮಧ್ಯೆ ಮಾರುಕಟ್ಟೆ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದಂದು ಕನಿಷ್ಠ ನಷ್ಟದೊಂದಿಗೆ ಕೊನೆಗೊಂಡಿದೆ.

ಆರಂಭಿಕ ವಹಿವಾಟಿನಲ್ಲಿ 750 ಅಂಕ ಕುಸಿದ ನಂತರ 30- ಷೇರುಗಳ ಬಿಎಸ್‌ಇ ಸೂಚ್ಯಂಕವು ಯು - ಟರ್ನ್ ಹೊಡೆದು ಅಂತಿಮವಾಗಿ 63.84 ಅಂಕ ಇಳಿಕೆಯಾಗಿ 48,718.52 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 3.05 ಅಂಕ ಹೆಚ್ಚಳವಾಗಿ 14,634.15 ಅಂಕಗಳಲ್ಲಿ ಅಂತ್ಯವಾಯಿತು.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟೈಟಾನ್ ಶೇ.4ಕ್ಕಿಂತಲೂ ಹೆಚ್ಚು ಕುಸಿದಿದೆ. ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಒಎನ್‌ಜಿಸಿ, ಐಟಿಸಿ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನದಲ್ಲಿವೆ.

ಮತ್ತೊಂದೆಡೆ ಭಾರ್ತಿ ಏರ್‌ಟೆಲ್, ಹೆಚ್‌ಯುಎಲ್, ಮಾರುತಿ, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್ ಮತ್ತು ಎನ್‌ಟಿಪಿಸಿ ಟಾಪ್​ ಗೇನರ್​ಗಳಾದರು. ದುರ್ಬಲ ಜಾಗತಿಕ ಸೂಚನೆಗಳ ಹೊರತಾಗಿಯೂ ದೇಶೀಯ ಷೇರುಗಳು ದಿನದ ಕನಿಷ್ಠ ಮಟ್ಟದಿಂದ ತೀವ್ರವಾಗಿ ಚೇತರಿಸಿಕೊಂಡಿವೆ.

ಸಂಗ್ರಹ ಸಾಮರ್ಥ್ಯ ಮತ್ತು ಬ್ಯಾಂಕ್​/ಎನ್‌ಬಿಎಫ್‌ಸಿಗಳ ಆಸ್ತಿ ಗುಣಮಟ್ಟದ ಬಗ್ಗೆ ಅನಿಶ್ಚಿತತೆ ಹೆಚ್ಚುತ್ತಿದ್ದು, ಎಫ್‌ಎಂಸಿಜಿ ಮತ್ತು ಮೆಟಲ್‌ಗಳಲ್ಲಿ ಬಲವಾದ ಖರೀದಿ ಚೇತರಿಕೆಗೆ ಸಹಕಾರಿಯಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಮುಖ್ಯ ಕಾರ್ಯತಂತ್ರ ಬಿನೋದ್ ಮೋದಿ ಹೇಳಿದರು.

ಕೋವಿಡ್​-19 ಪ್ರಕರಣಗಳ ಎರಡನೇ ಅಲೆಯ ನಿರಂತರ ಏರಿಕೆ ಹೂಡಿಕೆದಾರರ ಭಾವನೆಗಳ ಮೇಲೆ ಪ್ರಭಾವಿಸಿವೆ. ಸಕಾರಾತ್ಮಕ ನಿರ್ವಹಣೆಯ ವ್ಯಾಖ್ಯಾನಗಳೊಂದಿಗೆ ಸ್ಥಿರವಾದ ಕಾರ್ಪೊರೇಟ್ ಗಳಿಕೆಗಳು ಮಾರುಕಟ್ಟೆಗಳಿಗೆ ಬೆಂಬಲ ನೀಡಿವೆ ಎಂದರು.

ಏಷ್ಯಾದ ಹಾಂಕಾಂಗ್ ಮತ್ತು ಸಿಯೋಲ್‌ನಲ್ಲಿನ ಪೇಟೆಗಳು ನಕಾರಾತ್ಮಕ ನೋಟ್ಸ್​ನಲ್ಲಿ ಕೊನೆಗೊಂಡಿವೆ. ರಜಾ ದಿನದ ಪ್ರಯುಕ್ತ ಶಾಂಘೈ ಮತ್ತು ಟೋಕಿಯೊ ಷೇರು ವಿನಿಮಯ ಕೇಂದ್ರಗಳು ಮುಚ್ಚಿದ್ದವು. ಯುರೋಪಿಯನ್ ಮಾರುಕಟ್ಟೆಗಳು ಮಧ್ಯಂತರ ಅವಧಿಯಲ್ಲಿ ನಷ್ಟದೊಂದಿಗೆ ವ್ಯಾಪಾರ ಮಾಡುತ್ತಿದ್ದವು.

ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ.0.63ರಷ್ಟು ಕಡಿಮೆಯಾಗಿ 66.34 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.