ETV Bharat / business

ಷೇರು ಮಾರುಕಟ್ಟೆಗೆ ಖುಷಿ ತರದ ರೆಪೊ ದರ ಕಡಿತ

author img

By

Published : Mar 27, 2020, 6:04 PM IST

ಕೊರೊನಾ ವೈರಸ್​ ಲಾಕ್​ಡೌನ್​ನಿಂದಾದ ಹಣಕಾಸು ಬಿಕ್ಕಟ್ಟು ಶಮನಕ್ಕೆ ಆರ್​ಬಿಐ ಇಂದು ಹಲವಾರು ಕ್ರಮಗಳನ್ನು ಘೋಷಿಸಿದರೂ ಅದರಿಂದ ಷೇರು ಮಾರುಕಟ್ಟೆಗಳಿಗೆ ಉತ್ತೇಜನ ದೊರಕಲಿಲ್ಲ. ಏರಿಕೆಯೊಂದಿಗೆ ಆರಂಭವಾದ ಷೇರು ಮಾರುಕಟ್ಟೆ ಇಳಿಕೆಯೊಂದಿಗೆ ಮುಕ್ತಾಯವಾಯಿತು.

ಬಿಎಸ್​ಇ ಸೆನ್ಸೆಕ್ಸ್
RBI rate cut fails to cheer market

ಮುಂಬೈ: ಭಾರತೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಏರಿಕೆಯೊಂದಿಗೆ ದಿನ ಆರಂಭಿಸಿದರೂ ಕೊನೆಗೆ ಇಳಿಕೆಯೊಂದಿಗೆ ಮುಕ್ತಾಯಗೊಂಡವು. ಆರ್​ಬಿಐ ಗವರ್ನರ್ ಇಂದು ರೆಪೊ ದರ ಕಡಿತ ಸೇರಿದಂತೆ ಇನ್ನೂ ಕೆಲ ಆರ್ಥಿಕ ಉತ್ತೇಜನ ಕ್ರಮಗಳನ್ನು ಘೋಷಿಸಿದರೂ ಅದರಿಂದ ಷೇರು ಮಾರುಕಟ್ಟೆಗಳು ಚೇತರಿಸಿಕೊಳ್ಳಲಿಲ್ಲ.

ಬಿಎಸ್​ಇ ಸೆನ್ಸೆಕ್ಸ್​ 131.18 ಅಂಕ ಕಳೆದುಕೊಂಡು 29815.59 ರಲ್ಲಿ ಹಾಗೂ ಎನ್​ಎಸ್​ಇ ನಿಫ್ಟಿ ಕೇವಲ 18.80 ಅಂಕ ಗಳಿಸಿ 8660.25 ರಲ್ಲಿ ಕೊನೆಗೊಂಡವು.

ಶೇ.9 ಕುಸಿತದೊಂದಿಗೆ ಬಜಾಜ್ ಫೈನಾನ್ಸ್ ಇಂದು ಅತಿ ಹೆಚ್ಚು ನಷ್ಟ ಅನುಭವಿಸಿತು. ಹೀರೊ ಮೊಟೊಕಾರ್ಪ್, ಇಂಡಸ್​ ಇಂಡ್​ ಬ್ಯಾಂಕ್​, ಭಾರ್ತಿ ಏರಟೆಲ್, ಮಾರುತಿ, ಎಚ್​ಸಿಎಲ್​ ಟೆಕ್​, ಎಚ್​ಯುಎಲ್​, ಟಾಟಾ ಸ್ಟೀಲ್​, ಅಲ್ಟ್ರಾ ಸಿಮೆಂಟ್​ಗಳು ಸಹ ಗಣನೀಯ ಕುಸಿತ ಕಂಡವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.